Rachel Poster: ಗೋ ಮಾಂಸ ಮಾರುತ್ತಾ ಕುಂತ ಹನಿ ರೋಸ್: ಆಕೆಯನ್ನು ಬ್ಯಾನ್ ಮಾಡುವಂತೆ ಆಕ್ರೋಶ

ಬಾಲಯ್ಯ ನಟನೆಯ 'ವೀರಸಿಂಹ ರೆಡ್ಡಿ' ಚಿತ್ರದಲ್ಲಿ ಬಿಂದಾಸ್ ಆಗಿ ಕಾಣಿಸಿಕೊಂಡು ನಟಿ ಹನಿ ರೋಸ್ ಮೋಡಿ ಮಾಡಿದ್ದರು. ಆ ಚಿತ್ರದಿಂದ ದಿಢೀರನೇ ಆಕೆಯ ಕ್ರೇಜ್ ಹೆಚ್ಚಾಗಿತ್ತು. ಇದೀಗ ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ಆಕೆ ನಟಿಸುತ್ತಿದ್ದಾರೆ. ಸದ್ಯ ಒಂದು ಮಹಿಳಾ ಪ್ರಧಾನ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಿದ್ಧತೆ ನಡೆಸಿದ್ದಾರೆ.

'ರಚೆಲ್' ಎನ್ನುವ ಚಿತ್ರದಲ್ಲಿ ಸದ್ಯ ಹನಿ ರೋಸ್ ನಟಿಸುತ್ತಿದ್ದಾರೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಅಷ್ಟೇ ಅಲ್ಲ ವಿವಾದದ ಕಿಡಿ ಹೊತ್ತಿಸುವ ಸುಳಿವು ಸಿಗ್ತಿದೆ. ಆನಂದಿನಿ ಬಾಲ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಬದುಶಾ, ಶೆಣೈ ಮ್ಯಾಥ್ಯುವ್, ಅಬ್ರಿದ್ ಶೈನ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. 'ರಚೆಲ್' ಫಸ್ಟ್ ಲುಕ್ ಪೋಸ್ಟರ್ ನೋಡುತ್ತಿದ್ದರೆ ಇದೊಂದು ವೈಲೆಂಟ್ ಥ್ರಿಲ್ಲರ್ ಸಿನಿಮಾ ಅನ್ನೋದು ಗೊತ್ತಾಗುತ್ತಿದೆ. ಮೊದಲ ಪ್ರಯತ್ನದಲ್ಲೇ ಆನಂದಿನಿ ಬಾಲ ಗಮನ ಸೆಳೆಯುವ ಸುಳಿವು ಕೊಟ್ಟಿದ್ದಾರೆ.

Honey Rose drops the poster of her upcoming Pan-India film Rachel

ಸಣ್ಣ ಮೋಷನ್ ಪೋಸ್ಟರ್‌ ಕೂಡ ರಿಲೀಸ್ ಆಗಿದೆ. 5 ಭಾಷೆಗಳಲ್ಲಿ ಪೋಸ್ಟರ್ ರಿಲೀಸ್ ಮಾಡಿದ್ದು ಪೋಸ್ಟರ್‌ನಲ್ಲಿ ಸಿಕ್ಕಾಪಟ್ಟೆ ರಗಡ್ ಲುಕ್‌ನಲ್ಲಿ ನಟಿ ಹನಿ ರೋಸ್ ಕಾಣಿಸಿಕೊಂಡಿದ್ದಾರೆ. ಅಷ್ಟೇ ಬೋಲ್ಡ್ ಆಗಿಯೂ ದರ್ಶನ ಕೊಟ್ಟಿದ್ದಾರೆ. ಇಷ್ಟು ದಿನ ಇಂತಹ ಅವಕಾಶ ಸಿಕ್ಕಿರಲಿಲ್ಲ. ಆದರೆ ಈಗ ಸಿಕ್ಕಿದೆ. ಬಹಳ ನಿರೀಕ್ಷೆ ಇದೆ ಎಂದು ಹನಿ ರೋಸ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಗೋಮಾಂಸದ ಅಂಗಡಿಯಲ್ಲಿ 'ರಚೆಲ್'

ಪೋಸ್ಟರ್ ನೋಡುತ್ತಿದ್ದರೆ ಚಿತ್ರದ ನಾಯಕಿ ರಚೆಲ್ ಗೋಮಾಂಸ ಮಾರುವ ಯುವತಿಯಾಗಿ ಕಾಣಿಸಿಕೊಂಡಿದ್ದಾರೆ ಅನ್ನೋದು ಅರ್ಥವಾಗುತ್ತದೆ. ರಕ್ತಸಿಕ್ತ ಕತ್ತಯಿಂದ ಮರದ ತುಂಡಿನ ಮೇಲೆ ಆಕೆ ಮಾಂಸ ಕಡಿಯುತ್ತಾ ಕುಳಿತಂತೆ ಪೋಸ್ಟರ್ ಡಿಸೈನ್ ಮಾಡಿದ್ದಾರೆ. ಹಿನ್ನೆಲೆಯಲ್ಲಿ ಚರ್ಮ ಸುಲಿದ ಗೋವನ್ನು ನೇತು ಹಾಕಿದಂತೆ, ಆಕೆ ಹಿಂದೆ ಗೋವಿನ ತಲೆ ಇರುವಂತೆ ತೋರಿಸಲಾಗಿದೆ. ಇದೇ ಈಗ ಭಾರಿ ಚರ್ಚೆ ಹುಟ್ಟು ಹಾಕಿದೆ.

Honey Rose drops the poster of her upcoming Pan-India film Rachel

ಚರ್ಚೆ ಹುಟ್ಟಾಕ್ಕಿದ ಪೋಸ್ಟರ್

'ರಚೆಲ್' ಪೋಸ್ಟರ್ ರಿಲೀಸ್ ಆಗುತ್ತಿದ್ದಂತೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಸಾಕಷ್ಟು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗೋಮಾಂಸ ಮಾರಾಟ ಮಾಡುವ ಸನ್ನಿವೇಶ ತೋರಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಮತ್ತೆ ಕೆಲವರು ಪೋಸ್ಟರ್‌ನಲ್ಲಿ ತೋರಿಸಿರುವುದು ಗೋಮಾಂಸನಾ? ಎಂದು ಕೇಳುತ್ತಿದ್ದಾರೆ. ಇನ್ನು ಕೆಲವರು ಅದು ಎಮ್ಮೆ ಎನ್ನುತ್ತಿದ್ದು, ಎಮ್ಮೆ ಕೂಡ ಗೋವು ಅಲ್ಲವೇ ಎಂದು ಕೆಲವರು ಚಕಾರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಒಟ್ನಲ್ಲಿ ಪೋಸ್ಟರ್ ಭಾರೀ ಟಾಕ್ ಹುಟ್ಟಾಕ್ಕಿದೆ.

ಬ್ಯಾನ್ ಮಾಡುವಂತೆ ಆಗ್ರಹ

ಸದ್ಯ 'ರಚೆಲ್' ಪೋಸ್ಟರ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದರೂ ಗೋಮಾಂಸ ಮಾರಾಟ ಚಿತ್ರಣ ಇರುವುದಕ್ಕೆ ವಿವಾದ ಸೃಷ್ಟಿಸುವ ಸುಳಿವು ಸಿಕ್ತಿದೆ. ಇದೇ ಕಾರಣಕ್ಕೆ ಕೆಲವರು ಸಿನಿಮಾ ಬ್ಯಾನ್ ಮಾಡುವಂತೆ ಆಗ್ರಹಿಸಿದ್ದಾರೆ. ಇನ್ನು ಕೆಲವರಂತೂ ಇಂತ ಸಿನಿಮಾ ಮಾಡುತ್ತಿರುವ ನಟಿ ಹನಿ ರೋಸ್ ಅವರನ್ನು ಬ್ಯಾನ್ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರಕ್ಕೆ ರಾಹುಲ್ ಮನಪಟ್ ಕಥೆ ಒದಗಿಸಿದ್ದು, ಅಂಕಿತ್ ಮೆನನ್ ಸಂಗೀತವಿದೆ.

ಕನ್ನಡದಲ್ಲೂ ಹನಿ ರೋಸ್ ನಟನೆ

ಕೇರಳದಲ್ಲಿ ಹುಟ್ಟಿ ಬೆಳೆದ ನಟಿ ಹನಿ ರೋಸ್ 2005ರಲ್ಲಿ ಚಿತ್ರರಂಗ ಪ್ರವೇಶಿಸಿದರು. ಕನ್ನಡದ 'ನಂಜನಗೂಡು ನಂಜುಂಡ' ಚಿತ್ರದಲ್ಲೂ ಆಕೆ ನಟಿಸಿದ್ದಾರೆ. ಇದೀಗ 'ರಚೆಲ್' ಸಿನಿಮಾ ಕನ್ನಡಕ್ಕೂ ಡಬ್ ಆಗಿ ಬರ್ತಿರೋದು ವಿಶೇಷ.

More from Filmibeat

English summary
Honey Rose drops the poster of her upcoming Pan-India film Rachel. the film is being made in Tamil, Telugu, Kannada and Hindi languages. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X