ಆಕೆಯ ಹಣದ ಮೂಲ ಆಕೆಯ ದೇಹ, ಖ್ಯಾತ ನಾಯಕಿ ವಿರುದ್ಧ ನಟಿಯ ಗಂಭೀರ ಆರೋಪ..!

ಈಗೀಗ ಬಟ್ಟೆ ಬಿಚ್ಚುವುದು ಅದೇ ಅವತಾರದಲ್ಲಿ ಫೋಟೊಗೆ ಪೋಸು ಕೊಡುವುದು ಎಲ್ಲವೂ ಸರ್ವೇ ಸಾಧಾರಣವಾಗಿದೆ. ಅದರಲ್ಲೂ ಸೋಶಿಯಲ್ ಮೀಡಿಯಾ ಸ್ಟ್ರಾಂಗ್ ಆಗುತ್ತಿದ್ದಂತೆ ಇಂತಹ ಅಟಾಟೋಪಗಳಿಗೆ ಎಲ್ಲಿಲ್ಲದ ಬೇಡಿಕೆ. ಜನ ಇದನ್ನೇ ಬಯಸುತ್ತಾರೆ ಎಂದು ತಪ್ಪು ತಿಳಿದುಕೊಳ್ಳುವ ಸಾಕಷ್ಟು ಮಂದಿ ಇಂತಹ ಕುಕೃತ್ಯಗಳನ್ನು ಎಗ್ಗಿಲ್ಲದೇ ಸಿಗ್ಗಿಲ್ಲದೇ ಮಾಡುತ್ತಲೇ ಇರುತ್ತಾರೆ. ಈ ಸಾಲಿನಲ್ಲಿ ಮಲಯಾಳಂ ಚೆಲುವೆ ಹನಿ ರೋಸ್ ಕೂಡ ಸೇರುತ್ತಾರೆ ಎನ್ನುವುದು ಅನೇಕರ ವಾದ.

ಹೌದು, ಹನಿ ರೋಸ್, ಎಲ್ಲರ ಕಣ್ಮನ ಸೆಳೆಯುವ ಮಲಯಾಳಂ ಚಿತ್ರರಂಗದ ಸುಂದರಿ. ಚಿತ್ರಕ್ಕೆ ಬಣ್ಣ ಹಚ್ಚುವುದಕ್ಕಿಂತ ಸಭೆ-ಸಮಾರಂಭಕ್ಕೆ ಹೆಚ್ಚೆಚ್ಚು ಹೋಗುವುದು ಇವರ ಹವ್ಯಾಸ. ಚಪ್ಪಲಿ ಅಂಗಡಿಯಿಂದ ಸೀರೆಯ ಮಳಿಗೆಗಳ ಉದ್ಘಾಟನಾ ಸಮಾರಂಭಕ್ಕೆ ತೆರಳಿ ರಿಬ್ಬನ್ ಕಟ್ ಮಾಡಿ ಬರುವ ಹನಿ ರೋಸ್ ಒಮ್ಮೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಫೋಟೊಗಳನ್ನು ನೋಡಲು ಎರಡು ಕಣ್ಣು ಕೂಡ ಸಾಲದು.

Honey Rose earns money by showcasing her body claims Fara Shibla

ಇಂಥಾ ಹನಿ ರೋಸ್ ಅವರ ಸಂಪಾದನೆ ಬಗ್ಗೆ ಅನೇಕರಿಗೆ ಅನುಮಾನ ಇದೆ. ಈ ಆಡಂಬರದ ಜೀವನ ಶೈಲಿ ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತಿದೆ. ಯಾಕೆಂದರೆ ಹನಿ ರೋಸ್ ಚಿತ್ರರಂಗದಲ್ಲಿ ಕಡೆದು ಕಟ್ಟೆ ಹಾಕಿದ್ದು ಅಷ್ಟರಲ್ಲೇ ಇದೆ. ಚಿತ್ರರಂಗದಲ್ಲಿ ಎರಡು ದಶಕಗಳಿಂದ ಇದ್ದರೂ ಕೂಡ ಹನಿ ರೋಸ್‌ಗೆ ಹೇಳಿಕೊಳ್ಳುವಂತಹ ಬ್ರೇಕ್ ಸಿಕ್ಕಿಲ್ಲ. ಹೀಗಿರುವಾಗ ಹನಿ ರೋಸ್‌ಗೆ ಆಕೆಯ ದೇಹವೇ ಬಂಡವಾಳ ಎಂದು ಫರಾ ಶಿಬಿಲಾ ಬಾಂಬ್ ಎಸೆದಿದ್ದಾರೆ.

ಹೌದು, ಮೂಲತಃ ಮಾಡೆಲ್ ಆಗಿ ಆ ನಂತರ ಕಕ್ಷಿ ಸೇರಿ ಇತ್ತೀಚೆಗೆ ಬಿಡುಗಡೆಯಾದ ಗೆಟ್ ಸೆಟ್ ಬೇಬಿ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಫರಾ ಶಿಬಿಲಾ ನಾವು ನಮ್ಮನ್ನು ನಂಬಬೇಕು ನಮ್ಮಲ್ಲಿನ ಪ್ರತಿಭೆಯನ್ನು ನಂಬಬೇಕು ಅದರ ಬದಲು ದೇಹವನ್ನು ನಂಬಬಾರದು ಎಂದು ಹೇಳಿದ್ದಾರೆ. ಈ ಮೂಲಕ ಹನಿ ರೋಸ್‌ ಕಾಲೆಳೆದಿದ್ದಾರೆ. ಮಾತನಾಡುತ್ತಾ, ಮಾತನಾಡುತ್ತಾ ಹನಿ ರೋಸ್ ವಿರುದ್ದ ಗಂಭೀರ ಆರೋಪವನ್ನು ಮಾಡಿದ್ದಾರೆ.

ಮೈಲ್‌ಸ್ಟೋನ್ ಮೇಕರ್ಸ್‌ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಫರಾಹ್ ಶಿಬಿಲಾ, ನಾನು ಹನಿ ರೋಸ್ ಅವರ ಉಡುಗೆ ತೊಡುಗೆಯ ಬಗ್ಗೆ ಮಾತನಾಡುತ್ತಿಲ್ಲ ಆದರೆ ಹನಿ ರೋಸ್ ತಮ್ಮ ದೇಹವನ್ನು ಸಾರ್ವಜನಿಕವಾಗಿ ಪ್ರದರ್ಶನಕ್ಕಿಡುವ ಮೂಲಕವೇ ಹಣ ಸಂಪಾದನೆ ಮಾಡುತ್ತಿದ್ದಾರೆ ಅದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಿದ್ದಾರೆ. ತಮ್ಮ ಸೌಂದರ್ಯವನ್ನು, ದೇಹವನ್ನು ಪ್ರದರ್ಶನ ಮಾಡಲು ಇನ್‌ಸ್ಟಾಗ್ರಾಮ್‌ ಈಗ ಅನೇಕರಿಗೆ ಅತ್ಯುತ್ತಮ ವೇದಿಕೆಯಾಗಿದೆ, ಆ ವೇದಿಕೆಯನ್ನು ಹನಿ ರೋಸ್ ಹಣ ಸಂಪಾದನೆ ಮಾಡಲು ಬಳಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಹನಿ ರೋಸ್ ಮುಗ್ದೆಯಲ್ಲ ಏನು ಅರಿಯದ ಮುದ್ದು ಕಂದಮ್ಮ ಕೂಡ ಅಲ್ಲ ಎಂದಿರುವ ಫರಾ ಶಿಬಿಲಾ ಆಕೆಗೆ ಎಲ್ಲವೂ ಚೆನ್ನಾಗಿಯೇ ಗೊತ್ತು ಆದರೂ ಕೂಡ ಆಕೆ ತನ್ನ ದೇಹದ ಇಂಚಿಂಚೂ ಭಾಗವನ್ನು ಧಾರಾಳವಾಗಿ ತೋರಿಸುತ್ತಾಳೆ ಎಂದು ಹೇಳಿದ್ದಾರೆ. ಈ ರೀತಿ ದೇಹವನ್ನು ಪ್ರದರ್ಶಿಸುವ ಮೂಲಕ ಹಣ ಸಂಪಾದನೆ ಮಾಡುವುದು ತಪ್ಪು ಎಂದು ಕೂಡ ಕಿಡಿಯನ್ನು ಕಾರಿದ್ದಾರೆ.

ಇನ್ನು ಫೋಟೊಶೂಟ್ ಮಾಡಿಸುವುದು ತಪ್ಪಲ್ಲ ನಾನು ಕೂಡ ಮಾಡಿಸುತ್ತೇನೆ ಎಂದಿರುವ ಫರಾ ಶಿಬಿಲಾ ಎಲ್ಲದಕ್ಕೂ ಒಂದು ಮೀತಿ ಇರುತ್ತೆ ಅದನ್ನು ಅರಿತುಕೊಂಡು ಜೀವನ ಮಾಡಬೇಕೆ ಹೊರತು ನಮ್ಮ ಅಂಗಾಂಗಗಳು ಪ್ರದರ್ಶನದ ವಸ್ತುವಾಗಬಾರದೆಂದು ಹೇಳಿದ್ದಾರೆ. ಬೇಕು ಬೇಕಂತಲೇ ಹನಿ ರೋಸ್ ತಮ್ಮ ಹಾಟ್ ಫೋಟೊಗಳನ್ನು ಹಂಚಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಸದ್ಯ ಫರಾ ಮಾತನಾಡಿರುವ ಈ ಮಾತುಗಳು ಮಲಯಾಳಂ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿವೆ. ಫರಾಹ್ ಶಿಬಿಲಾಗೆ ಹನಿ ರೋಸ್ ಹೇಗೆ ಉತ್ತರವನ್ನು ಕೊಡ್ತಾರೆ ಎನ್ನುವುದನ್ನು ಈಗ ಕಾದು ನೋಡಬೇಕಿದೆ.

More from Filmibeat

Read more about: money social media filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X