ಮನೆಗೆ ಊಟಕ್ಕೆ ಕರೆದು ನನ್ನ ಮೇಲೆ ಅತ್ಯಾಚಾರ ಎಸಗಿದ, ಮಲಯಾಳಂ ನಟನ ವಿರುದ್ಧ ನಟಿಯ ಆರೋಪ...!

ಮಲಯಾಳಂ ಚಿತ್ರರಂಗದಲ್ಲಿ ಈಗ ಮಂಚದ ಸದ್ದು ಜೋರಾಗಿ ಕೇಳಿ ಬರುತ್ತಿದೆ. ಪಾತ್ರಕ್ಕಾಗಿ ಪಲ್ಲಂಗ ಹತ್ತುವಂತೆ ನನ್ನನ್ನೂ ಒತ್ತಾಯ ಮಾಡಲಾಯಿತು ಎಂದು ಅನೇಕ ನಟಿಯರು ಹೇಳುತ್ತಿದ್ದರೆ, ಇನ್ನೂ ಕೆಲವರು ಅತ್ಯಾಚಾರದ ಆರೋಪವನ್ನು ಮಾಡುತ್ತಿದ್ದಾರೆ.

ಇದಕ್ಕೆ ಇನ್ನೊಂದು ಉದಾಹರಣೆ ಎಂಬಂತೆ ಹೆಸರು ಹೇಳಲು ಇಚ್ಚಿಸದ, ಅನಾಮಧೇಯವಾಗಿ ಉಳಿಯಲು ಬಯಸಿರುವ ಜೂನಿಯರ್ ಆರ್ಟಿಸ್ಟ್ ಒಬ್ಬರು 58 ವರ್ಷದ ಮಲಯಾಳಂನ ನಟ ಮತ್ತು ಅಸೋಸಿಯೇಷನ್‌ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ {AMMA }ನಲ್ಲಿ ಜಂಟಿ ಕಾರ್ಯದರ್ಶಿಯೂ ಆಗಿರುವ ಬಾಬುರಾಜ್ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪ ಮಾಡಿದ್ದಾರೆ. ಮನೆಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಿದ್ದಾರೆ.

Hoping For Justice Young Kerala Actor Claims Assault By Actor Baburaj

ಅದೊಂದು ದಿನ ಚಿತ್ರವೊಂದರಲ್ಲಿ ಅವಕಾಶ ನೀಡುತ್ತಿರುವುದಾಗಿ ಹೇಳಿದ ಬಾಬುರಾಜ್, ನಿರ್ದೇಶಕ ಮತ್ತು ಬರಹಗಾರರು ನನ್ನ ಮನೆಯಲ್ಲಿ ಇದ್ದಾರೆ, ನೀನು ಬಂದರೆ ನಿನ್ನ ಪಾತ್ರದ ಕುರಿತು ಚರ್ಚೆ ಮಾಡಬಹುದು ಎಂದು ಬಾಬುರಾಜ್ ಹೇಳಿದ್ದ ಎಂದು ಹೇಳಿರುವ ಯುವತಿ, ಆ ನಂತರ ಅವರ ಮಾತನ್ನು ನಂಬಿ ನಾನು ಎರ್ನಾಕುಲಂ ಜಿಲ್ಲೆಯಲ್ಲಿರುವ ಅವರ ಮನೆಗೆ ಹೋದೆ ಎಂದಿದ್ದಾರೆ.

ಆದರೆ, ನಾನು ಮನೆಗೆ ಹೋದಾಗ ಅಲ್ಲಿ ಯಾರು ಇರಲಿಲ್ಲ. ಆ ನಂತರ ನನ್ನನ್ನೂ ಕೋಣೆಯಲ್ಲಿ ವಿಶ್ರಾಂತಿ ಪಡೆಯುವಂತೆ ಹೇಳಿದ ಬಾಬುರಾಜ್ ಕೆಲ ಸಮಯದ ನಂತರ ನನ್ನನ್ನೂ ಊಟಕ್ಕೆ ಕರೆದ, ಹೀಗಾಗಿ ಊಟಕ್ಕೆ ಹೋಗಲು ನಾನು ರೂಮ್‌ ಬಾಗಿಲು ತೆರೆದಾಗ, ಕೋಣೆಗೆ ನುಗ್ಗಿದ ಬಾಬುರಾಜ್ ನನ್ನನ್ನೂ ನಿಂದಿಸಿದ ಹೀಯಾಳಿಸಿದ ಎಂದಿದ್ದಾರೆ. ಬಲವಂತವಾಗಿ ಅತ್ಯಾಚಾರ ಮಾಡಿದ ಎಂದಿದ್ದಾರೆ.

hoping-for-justice-young-kerala-actor-claims-assault-by-actor-baburaj

ಇನ್ನೂ ಅತ್ಯಾಚಾರವಾದ ನಂತರ ನಾನು ಪೊಲೀಸರಿಗೆ ದೂರು ನೀಡಲು ತೆರಳಿದ್ದೆ ಆದರೆ ಅವರು ದೂರು ಸ್ವೀಕರಿಸಲಿಲ್ಲ ಎಂದಿರುವ ಯುವತಿ, ಆ ನಂತರ ಎರ್ನಾಕುಲಂನ ಡಿಜಿಪಿ ಅವರ ಬಳಿ ಕೇಸು ದಾಖಲಿಸಿರುವುದಾಗಿ ಹೇಳಿದ್ದಾರೆ. ಇನ್ನೂ ಡಿಐಜಿ ರ್ಯಾಂಕ್ ಇರುವ ಎಸ್‌ಐಟಿ ಅಧಿಕಾರಿಯಿಂದ ನನಗೆ ಕರೆ ಬಂದಿದೆ ಎಂದಿರುವ ಜೂನಿಯರ್ ಆರ್ಟಿಸ್ಟ್, ಸದ್ಯ ನಾನು ಹೊರದೇಶದಲ್ಲಿದ್ದು ಇನ್ನೊಂದು ವಾರದಲ್ಲಿ ಕೇರಳಕ್ಕೆ ಬರುವುದಾಗಿ ಹೇಳಿದ್ದಾರೆ. ಕೇರಳಕ್ಕೆ ಬಂದ ನಂತರ ಎಸ್‌ಐಟಿಯಲ್ಲಿ ದೂರು ದಾಖಲಿಸುವುದಾಗಿ ಹೇಳಿದ್ದಾರೆ.

ಸಹಜವಾಗಿ ಈ ಆರೋಪಗಳನ್ನೆಲ್ಲ ಬಾಬುರಾಜ್ ತಳ್ಳಿ ಹಾಕಿದ್ದಾರೆ. ಇಷ್ಟೇ ಅಲ್ಲ ಆರೋಪ ಮಾಡಿರುವ ಯುವತಿಯ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ನನ್ನ ವಿರುದ್ಧ ಷಡ್ಯಂತ್ರ ಪಿತೂರಿ ನಡೆಯುತ್ತಿದೆ ಅಂದಿದ್ದಾರೆ.

hoping-for-justice-young-kerala-actor-claims-assault-by-actor-baburaj

ಅಂದ್ಹಾಗೇ ಇಲ್ಲಿಯವರೆಗೆ ಅಸೋಸಿಯೇಷನ್‌ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ {AMMA }ನಲ್ಲಿರುವವರ ಸುತ್ತ ಮುತ್ತವೇ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದೆ. ಈಗಾಗ್ಲೇ ಕೇರಳ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸ್ಥಾನದಿಂದ ನಿರ್ದೇಶಕ ರಂಜಿತ್ ಕೆಳಗಿಳಿದಿದ್ದಾರೆ. ಅಸೋಸಿಯೇಷನ್‌ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ {AMMA } ನಲ್ಲಿ ಪ್ರಧಾನ ಕಾರ್ಯದರ್ಶಿ ಕುರ್ಚಿಯ ಮೇಲೆ ಕುಳಿತುಕೊಂಡಿದ್ದ ಮಲಯಾಳಂ ಚಿತ್ರರಂಗದ ಸೀನಿಯರ್ ಆಕ್ಟರ್ ಸಿದ್ದಿಕ್ ಕೂಡ ಅತ್ಯಾಚಾರದ ಆರೋಪದಿಂದ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಈಗ ಅಸೋಸಿಯೇಷನ್‌ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ {AMMA }ನಲ್ಲಿ ಜಂಟಿ ಕಾರ್ಯದರ್ಶಿ ಆಗಿರುವ ಬಾಬುರಾಜ್ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದೆ. ಮಹಿಳೆಯರನ್ನು ಸಬಲೀಕರಣಗೊಳಿಸುವುದೇ ನಮ್ಮ ಧ್ಯೇಯ ಎಂದು ಹೇಳುತ್ತಾ ಬಂದ ಅಸೋಸಿಯೇಷನ್‌ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ {AMMA }ನಲ್ಲಿ ಇವರೆಲ್ಲ ಇರುವುದು ಮಾಲಿವುಡ್‌ನ ದುರಾದೃಷ್ಟ.

More from Filmibeat

Read more about: casting couch malayalam mollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X