ನಾನು ಜೈಲಿನಲ್ಲಿಲ್ಲ, ಕಾರಿನಲ್ಲಿದ್ದೇನೆ ; ಮಧ್ಯರಾತ್ರಿ ಹೈವೇ ಚೇಸಿಂಗ್ - ಸಿಕ್ಕಿ ಹಾಕಿಕೊಂಡ ಚೆಲುವೆ ಹೇಳಿದ್ದೇನು ?

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ. ಆದರೂ ಕೂಡ ಅಮಲಿನಲ್ಲಿ ಅನೇಕರು ತೇಲುತ್ತಾರೆ. ದಿನದಿಂದ ದಿನಕ್ಕೆ ಈ ಸಂಖ್ಯೆ ಹೆಚ್ಚಾಗುತ್ತಿದೆಯೇ ಹೊರತು ಕಡಿಮೆಯಂತೂ ಆಗುತ್ತಿಲ್ಲ. ಇನ್ನು, ಚಿತ್ರರಂಗದಲ್ಲಿ ಕೂಡ ಅನೇಕರು ದೇಹದ ದಣಿವು ನೀಗಿಸಲು ಎಣ್ಣೆ ಹೊಡೆಯುತ್ತಾರೆ. ಸಂಪೂರ್ಣ ಬಾಟಲಿ ಖಾಲಿ ಮಾಡದಿದ್ದರೂ ಒಂದೆರಡು ಪೆಗ್ ಆದರೂ ಕೂಡ ಹೊಡೆದೆ ಹೊಡೆಯುತ್ತಾರೆ.

ಕೇವಲ ಚಿತ್ರರಂಗದವರು ಮಾತ್ರ ಅಲ್ಲ. ಸೋಶಿಯಲ್ ಮೀಡಿಯಾ ಮೂಲಕ ಪ್ರಖ್ಯಾತರಾದವರ ಹಲವರ ಕಥೆ ಕೂಡ ಸೇಮ್ ಟು ಸೇಮ್. ಹೆಣ್ಣು ಗಂಡು ಎಂಬ ಭೇದ ಭಾವ ಇಲ್ಲದೆ ಕುಡಿತಕ್ಕೆ ದಾಸರಾದ ಇವರು ನಶೆಯಲ್ಲಿ ಯದ್ವಾ ತದ್ವಾ ಗಾಡಿಯನ್ನು ಕೂಡ ಓಡಿಸುತ್ತಾರೆ. ಪೊಲೀಸರ ಜೊತೆ ಕಣ್ಣಾಮುಚ್ವಾಲೆ ಆಡುತ್ತಾರೆ. ಇದಕ್ಕೆ ಉದಾಹರಣೆಯಂತೆ ಇರುವ ಧನ್ಯಾ ಎಸ್ ಆರ್ ಸದ್ಯ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

i-am-sitting-in-my-car-not-jail-helen-of-sparta-fires-back-after-midnight-cop-chase

ಹೌದು. ಧನ್ಯಾ ಎಸ್ ಆರ್.. ಪಕ್ಕದ ಕಾಸರಗೋಡಿನ ಪ್ರಖ್ಯಾತ ಕಂಟೆಂಟ್ ಕ್ರಿಯೇಟರ್. ಹತ್ತಿತ ಹತ್ತಿರ ಒಂದು ಮಿಲಿಯನ್ ಫಾಲೋವರ್ಸ್ ಇವರನ್ನು ಸೋಶಿಯಲ್ ಮೀಡಿಯಾದಲ್ಲಿ ಹಿಂಬಾಲಿಸುತ್ತಿದ್ದಾರೆ‌‌. ಅಲ್ಲಿ ಇವರು ಹೆಲೆನ್ ಆಫ್ ಸ್ಪಾರ್ಟಾ ಎಂದೇ ಜನಜನಿತ. ಇಂಥಾ ಧನ್ಯಾ ಅಲಿಯಾಸ್ ಹೆಲೆನ್ ಆಫ್ ಸ್ಪಾರ್ಟಾ ಸದ್ಯ ಡ್ರಿಂಕ್ & ಡ್ರೈವ್ ಕೇಸ್ ನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಸಾಲದಕ್ಕೆ ನಾನು ಜೈಲಿನಲ್ಲಿ ಇಲ್ಲ ನನ್ನ ಪಂಚ್ ಕಾರಿನಲ್ಲಿದ್ದೇನೆ ಎಂದು ವಿಡಿಯೋ ಕೂಡ ಮಾಡಿದ್ದಾರೆ.

ಏನಿದು ಪ್ರಕರಣ ?

ಹೌದು. ಅಸಲಿಗೆ ನಿನ್ನೆ ಕಾಸರಗೋಡಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಎರಡು ಗಂಟೆಯ ಆಸು ಪಾಸು ಪೊಲೀಸರು ಗಸ್ತು ತಿರುಗುತ್ತಿದ್ದರು. ಈ ಸಮಯದಲ್ಲಿ ಅನಂಗೂರ್ ಎಂಬಲ್ಲಿ ನಿಂತಿದ್ದ ಟಾಟಾ ಪಂಚ್ ಕಾರೊಂದು ಪೊಲೀಸರ ಕಣ್ಣಿಗೆ ಬಿದ್ದಿತ್ತು. ಬಹುಶಃ ಯಾವುದೋ ಸಮಸ್ಯೆಯಾಗಿರಬಹುದು ಎಂದುಕೊಂಡು ಪೊಲೀಸರು ಆ ಕಾರಿನ ಬಳಿ ಹೆಜ್ಜೆ ಹಾಕಲು ಶುರು ಮಾಡಿದರು‌. ಈ ಹೆಜ್ಜೆಯ ಸದ್ದು ಕೇಳಿದ ಕಾರಿನಲ್ಲಿದ್ದ ವ್ಯಕ್ತಿ ಪೊಲೀಸರು ಹತ್ತಿರ ಬರುತ್ತಿದ್ದಂತೆಯೇ ಎಸ್ಕೇಪ್ ಆಗುವ ಪ್ರಯತ್ನ ಮಾಡಿದ್ದಾರೆ.


ಸಿನಿಮಾ ಶೈಲಿ ಚೇಸಿಂಗ್

ಮಾಧ್ಯಮಗಳಲ್ಲಿ ವರದಿಯಾದಂತೆ ಇದಾದ ನಂತರ ಹೆದ್ದಾರಿಯಲ್ಲಿ ರಣರೋಚಕವಾದ ಸಿನಿಮಾ ಶೈಲಿಯಲ್ಲಿ ಚೇಸಿಂಗ್ ನಡೆದಿದೆ. ಪೊಲೀಸರು ಕಾರು ನಿಲ್ಲಿಸುವಂತೆ ಪದೇ ಪದೇ ಹೇಳಿದರೂ ಕೂಡ ಕಾರು ನಿಂತಿಲ್ಲ. ಕೊನೆಗೆ
ಬಂಡಿಯೋಡ್ ಭಗವತಿ ನಗರದ ಬಳಿ ಪೊಲೀಸರು ಹೇಗೋ ಕಾರು ಅಡ್ಡಗಟ್ಟಿದ್ದಾರೆ. ಆ ನಂತರ ಕಾರನ್ನು ಇಣುಕಿ ನೋಡಿದಾಗ ಕಂಡಿದ್ದು ಬೇರೆ ಯಾರು ಅಲ್ಲ. ಬದಲಿಗೆ ಇದೇ ಧನ್ಯ.

ಮುಂದಾಗಿದ್ದೇನು ?

ಆ ನಂತರ ಧನ್ಯಳನ್ನು ಪೊಲೀಸರು ಕೆಳಗಿಳಿಸಿದ್ದಾರೆ. ಚೆಕ್ ಮಾಡಿದ್ದಾರೆ. ಡ್ರಿಂಕ್ & ಡ್ರೈವ್ ಪತ್ತೆಯಾಗಿದೆ. ನಂತರ ವೈದ್ಯಕೀಯ ಪರೀಕ್ಷೆಯಲ್ಲಿ ಕೂಡ ದೃಡಪಟ್ಟಿದೆ‌. ಹೀಗಾಗಿ ಪೊಲೀಸರು ಧನ್ಯ ಅವರನ್ನು ವಶಕ್ಕೆ ಪಡೆದಿದ್ದರು.

ಈ ಹಿನ್ನೆಲೆ ಹಲವರು ಧನ್ಯ ಜೈಲು ಸೇರಿದ್ದಾರೆ, ಹಾಗಂತೆ ಹೀಗಂತೆ ಎಂದೆಲ್ಲಾ ಹಲವರು ಮಾತನಾಡಿಕೊಳ್ಳಲು ಶುರು ಮಾಡಿದರು. ಧನ್ಯ ಅವರನ್ನು ಟ್ರೋಲ್ ಮಾಡಲು ಶುರು ಮಾಡಿದರು. ಸದ್ಯ ಇದಕ್ಕೆ ಧನ್ಯಾ ಉತ್ತರ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಧನ್ಯ ಎಲ್ಲರೂ ಸೇರಿ ನನ್ನ ತಂದೆ-ತಾಯಿಗೆ ತೊಂದರೆ ಕೊಡುತ್ತಿದ್ದಾರೆ, ನಾನೇನು ಜೈಲಿನಲ್ಲಿಲ್ಲ ಎಂದು ತಮ್ಮ ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ ಸ್ಪಷ್ಟಪಡಿಸಿದ್ದಾರೆ.

ಮುಂದುವರೆದು ದೇವರೆ... ಎಲ್ಲರೂ ಸೇರಿ ನನ್ನ ಅಪ್ಪ-ಅಮ್ಮನಿಗೆ ಫೋನ್ ಮಾಡಿ ಕಾಟ ಕೊಡುತ್ತಿದ್ದಾರೆ. ಹೆಲೆನ್ ಆಫ್ ಸ್ಪಾರ್ಟಾ ಪೊಲೀಸ್ ಸ್ಟೇಷನ್‌ನಲ್ಲಿದ್ದಾಳೆ, ಜೈಲು ಪಾಲಾಗಿದ್ದಾಳೆ, ಅವಳಿಗೆ ಗಲ್ಲು ಶಿಕ್ಷೆಯಾಗಿದೆ ಎಂದೆಲ್ಲಾ ಅಪಪ್ರಚಾರ ಮಾಡುತ್ತಿದ್ದಾರೆ. ನಾನು ನನ್ನ ಸ್ವಂತ ಜಾಗದಲ್ಲಿ ನನ್ನ ಕಾರು ಪಂಚ್‌ನಲ್ಲಿ ಆರಾಮಾಗಿ ಕುಳಿತಿದ್ದೇನೆ. ಸದ್ಯ ಡಿವೈಎಸ್‌ಪಿ ಕಚೇರಿಗೆ ಅಗತ್ಯ ಕೆಲಸದ ನಿಮಿತ್ತ ಬಂದಿದ್ದೇನೆ. ಇದರ ನಂತರ ಸಂಪೂರ್ಣ ವಿವರಗಳೊಂದಿಗೆ ಮತ್ತೊಂದು ವಿಡಿಯೋ ಮಾಡುತ್ತೇನೆ ಎಂದು ಹೇಳಿದ್ದಾರೆ.

English summary
From a midnight highway chase to a defiant viral video. Inside YouTuber Helen of Sparta’s drunk driving arrest in Kasaragod and her message to the internet: I’m not in jail
Read more about: drink social media
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X