ನಿಮ್ಮ ಮಗಳನ್ನು ನಮ್ಮ ರೂಮ್‌ಗೆ ಕಳಿಸ್ತೀರಾ ? ತಾಯಿ ಎದುರು ಅಸಭ್ಯ, ಅಸಹ್ಯ ಬೇಡಿಕೆ - ಕರಾಳ ಮುಖ ಬಿಚ್ಚಿಟ್ಟ ಖ್ಯಾತ ನಟಿ

ಬೆಳ್ಳಿತೆರೆ ಇರಲಿ.. ಕಿರುತೆರೆ ಇರಲಿ.. ಹೆಸರು, ಕೀರ್ತಿಯ ಬೆನ್ನತ್ತಿ ಬರುವ ಹಲವಾರು ಚೆಲುವೆಯರು, ಇಲ್ಲಿನ.. ಕಾಮಾಂಧರ ಕಣ್ಣಿಗೆ ಬಿದ್ದೇ ಬೀಳುತ್ತಾರೆ. ಮುಗ್ದತೆಯನ್ನೇ ಬಳಸಿಕೊಂಡು ಹಲವರು ಇಲ್ಲಿ ಹಲವರನ್ನು ಮಂಚಕ್ಕೇರುವಂತೆ ಆಮಂತ್ರಣ ಪತ್ರಿಕೆಯನ್ನು ನೀಡುತ್ತಾರೆ. ಕೆಲವರು ಈ ಖೆಡ್ಡಾಗೆ ಗೊತ್ತಿದ್ದು ಗೊತ್ತಿಲ್ಲದೆಯೋ ಬೀಳುತ್ತಾರೆ.

ಇನ್ನೂ ಕೆಲವರು ''ಹಾಸಿಗೆ ಹಂಚಿಕೊಂಡರಷ್ಟೇ ಇಲ್ಲಿ ಅವಕಾಶ'' ಎಂಬ ಕಹಿ ಸತ್ಯವನ್ನು ಅರಿತು ''ರಾಜಿ'' ಮಾಡಿಕೊಳ್ಳುತ್ತಾರೆ. ಮತ್ತೂ ಕೆಲವರು ಅವಕಾಶ ಸಿಗದಿದ್ದರೂ ಚಿಂತೆ ಇಲ್ಲ ಎಂದು ಇಂತಹ ಕುಕೃತ್ಯವನ್ನು ಎಡಗಾಲಿನಲ್ಲಿ ಎಡಗಾಲಿನಲ್ಲಿ ಒದ್ದು ಬರುತ್ತಾರೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ, ಹೀಗೆ.. ಆ ಇಂಡಸ್ಟ್ರೀ ಈ ಇಂಡಸ್ಟ್ರೀ ಅಂತ ಅಲ್ಲ.ಎಲ್ಲ ಚಿತ್ರೋದ್ಯಮಗಳಲ್ಲಿ ಬಹುತೇಕ ಈ ಕಥೆ ಒಂದೇ. ಒಂದರ್ಥದಲ್ಲಿ ಪ್ರತಿಯೊಬ್ಬ ನಟಿಮಣಿಯರೂ ಒಂದಿಲ್ಲೊಂದು ಸಂದರ್ಭಗಳಲ್ಲಿ ಇಂತಹ ಸನ್ನಿವೇಶಗಳಲ್ಲಿ ನಲುಗಿದವರೇ ಆಗಿರುತ್ತಾರೆ. ಉದಾಹರಣೆಗೆ ಕಾನಿ ಕುಸೃತಿ.

I Was Asked to Trade My Dignity for Roles Kani Kusruti s Stand Against Industry Exploitation

ಹೌದು, ಕಾನಿ ಕುಸೃತಿ.. ಮಲಯಾಳಂನ ಚೆಲುವೆ. ''ಅನ್ಯರ್'' ಚಿತ್ರದ ಮೂಲಕ 2003ರಲ್ಲಿ ಚಿತ್ರರಂಗವನ್ನು ಪ್ರವೇಶ ಮಾಡಿದ ಕಾನಿ ಆ ನಂತರ ''ಮನುಷ್ಯ ಪುತ್ರಿ'' ಚಿತ್ರದ ಮೂಲಕ ತಮ್ಮ ಅಭಿನಯ ಸಾಮರ್ಥ್ಯದ ಪ್ರದರ್ಶನ ಮಾಡಿದ್ದರು. ''ಕೇರಳ ಕೆಫೆ''.. ''ಬಿರಿಯಾನಿ''.. ''ಆಲ್‌ ವಿ ಇಮ್ಯಾಜಿನ್ ಆಸ್ ಲೈಟ್ಸ್''.. ''ಗರ್ಲ್ಸ್‌ ವಿಲ್ ಬಿ ಗರ್ಲ್ಸ್''.. ''ಕಿಲ್ಲರ್ ಸೂಪ್''.. ''ಓಕೆ ಕಂಪ್ಯೂಟರ್''.. ಇವರ ಕೆಲ ಪ್ರಮುಖ ಚಿತ್ರಗಳು.

ಮಹೇಶ್ ಬಾಬು ಅಭಿನಯದ ''ಸ್ಪೈಡರ್'' ಚಿತ್ರದಲ್ಲಿ ವಿಲನ್ ತಾಯಿಯ ಪಾತ್ರವನ್ನು ನಿರ್ವಹಿಸಿದ್ದ ಕಾನಿ ಕುಸೃತಿ ''ಮಹಾರಾಣಿ'' ಮತ್ತು ''ಪೋಚರ್'' ವೆಬ್ ಸರಣಿಯಲ್ಲಿ ಕೂಡ ಅಭಿನಯಿಸಿದ್ದಾರೆ. ಇಂಥಾ ಕಾನಿ ಕುಸೃತಿ ಚಿತ್ರರಂಗದಲ್ಲಿನ ಕಾಮಾಂಧರ ಕಾಟಕ್ಕೆ ಚಿತ್ರರಂಗವನ್ನೇ ತೊರೆದಿದ್ದರು.

ಹೌದು 2018-, 2019ರ ಆಸು ಪಾಸು ಮೀಟೂ ಅಭಿಯಾನ ಶುರುವಾಗಿತ್ತು. ಆ ಸಮಯದಲ್ಲಿ ಕಾನಿ ಕುಸ್ಕ್ರತಿ ಸಂದರ್ಶನವೊಂದನ್ನು ನೀಡಿದ್ದರು. ಆ ಸಂದರ್ಶನದಲ್ಲಿ ಮಾತನಾಡಿದ್ದ ಕಾನಿ ನಾನು ಚಿತ್ರರಂಗದಲ್ಲಿ ಬೆಳೆಯಬೇಕು ಅಂದರೆ ಕಲೆ ಮಾತ್ರ ಮುಖ್ಯ ಎಂದುಕೊಂಡಿದ್ದೇ, ಒಳ್ಳೆಯ ನಟಿ ಎಂದು ಗುರುತಿಸಿಕೊಳ್ಳಬೇಕೆಂಬ ಆಸೆಯಿಂದ ನಾನು ಚಿತ್ರರಂಗಕ್ಕೆ ಬಂದಿದ್ದೇ ಎಂದು ಹೇಳಿದ್ದರು.

ಆದರೆ ಇಲ್ಲಿ ನಮ್ಮಲ್ಲಿನ ಪ್ರತಿಭೆಗಿಂತ ಕಮಿಟ್‌ಮೆಂಟ್‌ಗೆ ಮೊದಲ ಆಧ್ಯತೆ ಎನ್ನುವ ವಿಚಾರ ನನಗೆ ಬಹುಬೇಗ ಅರ್ಥ ಆಯ್ತು ಎಂದು ಹೇಳಿದ್ದ ಕಾನಿ ಆ ಸುಖ ನೀಡಿದರೆ ಮಾತ್ರ ಇಲ್ಲಿ ಅವಕಾಶ ಎನ್ನುವುದು ನನಗೆ ಮನದಟ್ಟಾಯ್ತು ಎಂದು ಹೇಳಿದ್ದರು. ಈ ಕಾರಣಕ್ಕೆ ನನಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ ಎಂದಿದ್ದರು.

I Was Asked to Trade My Dignity for Roles Kani Kusruti s Stand Against Industry Exploitation

ಮುಂದುವರೆದು ಹಲವರು ನನ್ನ ಹತ್ತಿರ ನೇರವಾಗಿ ಈ ವಿಚಾರವನ್ನು ಪ್ರಸ್ತಾಪಿಸುತ್ತಿರಲಿಲ್ಲ. ಬದಲಿಗೆ ನನ್ನ ತಾಯಿಯನ್ನು ನೇರವಾಗಿ ಭೇಟಿಯಾಗುತ್ತಿದ್ದರು ಎಂದು ಹೇಳಿದ್ದ ಕಾನಿ, ನಿಮ್ಮ ಮಗಳಿಗೆ ಅವಕಾಶಗಳು ಬೇಕು ಅಂದರೆ ನಮ್ಮ ಜೊತೆ ಹಾಸಿಗೆ ಹಂಚಿಕೊಳ್ಳೋಕೆ ಹೇಳಿ ಎಂದು ನನ್ನ ತಾಯಿಗೆ ಅವರು ಸ್ಪಷ್ಟವಾಗಿ ಹೇಳುತ್ತಿದ್ದರು ಎಂದು ನೆನಪು ಮಾಡಿಕೊಂಡಿದ್ದರು. ಈ ಕಿರುಕುಳದಿಂದ ಬೇಸತ್ತು ನಾನು ಚಿತ್ರರಂಗದಿಂದ ದೂರವಾದೆ, ರಂಗಭೂಮಿಗೆ ಮರಳಿ ಹೋದೆ ಎಂದು ಹೇಳಿದ್ದ ಕಾನಿ ಆದರೆ ನನ್ನ ಕುಟುಂಬದ ಆರ್ಥಿಕ ಪರಿಸ್ಥಿತಿಗಳ ಕಾರಣದಿಂದ ಮತ್ತೆ ಚಿತ್ರರಂಗಕ್ಕೆ ನಾನು ಮರಳಿಬರಬೇಕಾಯ್ತು ಎಂದು ಹೇಳಿದ್ದರು.

ಅಂದ್ಹಾಗೇ ಸದ್ಯ ಕಾನಿ ಅಭಿನಯದ ''ಅಸ್ಸಿ'' (80) ಚಿತ್ರ ಸದ್ಯ ಬಿಡುಗಡೆಗೆ ಸಿದ್ಧವಾಗಿದೆ. ತ್ಯಾಪ್ಸಿ ಪನ್ನು ಅಭಿನಯದ ಈ ಚಿತ್ರದಲ್ಲಿ ಕಾನಿ ಅವರದ್ದು ಕೂಡ ಪ್ರಮುಖ ಪಾತ್ರ. ಫೆಬ್ರವರಿ 20ರಂದು ಈ ಚಿತ್ರ ಬಿಡುಗಡೆಯಾಗಲಿದೆ. ಈ ಹಿನ್ನೆಲೆ ಕಾನಿ ಅವರ ಈ ಹಳೆಯ ಸಂದರ್ಶನ ಮತ್ತೆ ಮುನ್ನೆಲೆಗೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಉದ್ಯಮದ ಕರಾಳ ಸತ್ಯಗಳಿಗೆ ಇವರು ಅಂದು ಆಡಿದ್ದ ಮಾತುಗಳು ಈಗ ಇನ್ನೊಮ್ಮೆ ಕೈಗನ್ನಡಿಯಾಗಿವೆ.

ಇನ್ನುಳಿದಂತೆ 2011ರಿಂದ 2015ರವರೆಗೆ ಕಾನಿ ಚಿತ್ರರಂಗದಿಂದ ದೂರ ಇದ್ದರು. ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. 2016ರಲ್ಲಿ ''ಮಾ'' ಎಂಬ ಕಿರುಚಿತ್ರದ ಮೂಲಕ ಮರಳಿ ಬಂದ ಕಾನಿಯ ಬದುಕನ್ನು 2020ರಲ್ಲಿ ಬಂದ ''ಬಿರಿಯಾನಿ'' ಚಿತ್ರ ಸಂಪೂರ್ಣವಾಗಿ ಬದಲಿಸಿತು.

More from Filmibeat

English summary
Kani Kusruti breaks her silence on the high cost of integrity in cinema. See how she defied indecent proposals to fight for a safer industry for all women
Read more about: casting couch mollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X