ನನ್ನ ಸಾವಿಗೆ ನನ್ನ ಪತಿಯೇ ಕಾರಣ, ನಟನ ವಿರುದ್ದ ಗಂಭೀರ ಆರೋಪ ಮಾಡಿದ ಹಾಸಿಗೆ ಹಿಡಿದ 3ನೇ ಪತ್ನಿ

ಯಾವುದೇ ಸಂಬಂಧವಾದರೂ ಸರಿ, ಅಲ್ಲಿ ಪರಸ್ಪರ ನಂಬಿಕೆ, ಪ್ರೀತಿ, ವಿಶ್ವಾಸವಿರಬೇಕು. ಇಂತಹ ಸಂಬಂಧಗಳು ಮಾತ್ರ ದೀರ್ಘಕಾಲ ಬಾಳಲು ಸಾಧ್ಯ. ಇಲ್ಲದಿದ್ದರೆ ಯಾವ ಸಂಬಂಧ ಕೂಡ ಹೆಚ್ಚು ಕಾಲ ಉಳಿಯುವುದಿಲ್ಲ. ಎಷ್ಟೇ ಪ್ರಯತ್ನ ಮಾಡಿದರೂ ಪ್ರೀತಿ ಪಾತ್ರರು ಜೊತೆಯಲ್ಲಿ ಇರುವುದಿಲ್ಲ. ಇದಕ್ಕೆ ಹಲವು ಉದಾಹರಣೆಗಳು ಇವೆ. ಅದರಲ್ಲೂ ಬಣ್ಣದ ಲೋಕದಲ್ಲಿ ನಂಬಿಕೆಯ ಹೆಸರಿನಲ್ಲಿ ಕತ್ತು ಕುಯ್ದವರ ಸಂಖ್ಯೆ ತುಸು ಹೆಚ್ಚೇ ಇದೆ.

ಇದಕ್ಕೆ ಬಾಲ ಮತ್ತು ಎಲಿಜಬೆತ್ ಉದಯನ್ ಅವರ ವಿರಸ ವಿರಹ ವಿಚ್ಚೇದನದ ಪ್ರಕರಣ ಸದ್ಯದ ಸಾಕ್ಷಿ.ಹೌದು.. ಬಾಲಾ.. ಹೇಳಿಕೊಳ್ಳುವುದಕ್ಕೆ ತಮಿಳು ನಟ. ಆದರೆ ಹೆಚ್ಚು ಕೆಲಸ ಮಾಡಿದ್ದು ಮಲಯಾಳಂನಲ್ಲಿ. 2005ರಿಂದ ಚಿತ್ರರಂಗದಲ್ಲಿರುವ ಈ ಹೀರೋ ಇಲ್ಲಿಯವರೆಗೆ ನಾಲ್ಕು ಮದುವೆಗಳನ್ನು ಮಾಡಿಕೊಂಡಿದ್ದಾರೆ.

If I Die They re Responsible Bala s Ex Elizabeth Udayan s Hospital Accusations Rock Malayalam

2008ರಲ್ಲಿ ಚಂದನಾ ಜೊತೆ ಮದುವೆಯಾಗಿದ್ದ ಬಾಲಾ ಅದೇ ವರ್ಷ ಅವರಿಗೆ ವಿಚ್ಛೇದನ ನೀಡಿ, ಆ ನಂತರ ಅಮೃತಾ ಸುರೇಶ್ ಅವರ ಜೊತೆ ಮದುವೆಯಾಗಿದ್ದರು. ಎರಡು ವರ್ಷ ಸಂಸಾರ ಕೂಡ ನಡೆಸಿದ್ದರು. ಆದರೆ ಆ ನಂತರ ಅಮೃತಾ ಅವರಿಂದ ಕೂಡ ಡಿವೋರ್ಸ್ ಪಡೆದ ಬಾಲಾ 2021ರಲ್ಲಿ ಇದೇ ಎಲಿಜಬೆತ್ ಉದಯನ್ ಜೊತೆ ಮದುವೆಯಾದರು. ಆದರೆ ದುರಾದೃಷ್ಟವಶಾತ್ ಈ ಸಂಬಂಧ ಕೂಡ ಹೆಚ್ಚು ದಿನ ಉಳಿಯಲಿಲ್ಲ. 2024ರಲ್ಲಿ ಈ ಸಂಬಂಧ ಮುರಿದು ಬಿತ್ತು.

ಹಾಗಂಥ ಬಾಲಾ ಸುಮ್ಮನಾಗಲಿಲ್ಲ. ಬದಲಿಗೆ ಕಳೆದ ವರ್ಷ ಕೋಕಿಲಾ ಜೊತೆ ನಾಲ್ಕನೇ ಮದುವೆ ಕೂಡ ಆದರು. ಇಂಥಾ ಬಾಲಾ ವಿರುದ್ದ ಇದೀಗ ಮೂರನೇ ಪತ್ನಿ ತಿರುಗಿ ಬಿದ್ದಿದ್ದಾರೆ. ಆಸ್ಪತ್ರೆಯ ಬೆಡ್ ಮೇಲೆ ಮಲಗಿಕೊಂಡೇ ತಮ್ಮ ಪತಿ ವಿರುದ್ದ ಎಲಿಜಬೆತ್ ಉದಯನ್ ಆರೋಪ ಮಾಡಿದ್ದಾರೆ.

ಆಸ್ಪತ್ರೆಯ ಬೆಡ್ ಮೇಲೆ ಮಲಗಿ ಈ ಕುರಿತು ವಿಡಿಯೋ ಮಾಡಿರುವ ಎಲಿಜಬೆತ್, ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ತನಗಾದ ಅನ್ಯಾಯದ ಕುರಿತು ಪತ್ರ ಬರೆದಿರುವುದಾಗಿ ಹೇಳಿದ್ದಾರೆ. ಆದರೂ ಕೂಡ ನಟನ ವಿರುದ್ದ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಹೇಳಿದ್ದಾರೆ. ಇದಲ್ಲದೇ ಬಾಲಾ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡಲು ತಮ್ಮ ಬಳಿ ಇರುವ ಎಲ್ಲ ಹಣವನ್ನು ಕೂಡ ಖರ್ಚು ಮಾಡಿರುವುದಾಗಿ ಹೇಳಿರುವ ಎಲಿಜಬೆತ್ ಉದಯನ್ ನ್ಯಾಯಾಲಯದಲ್ಲಿ ವಿಚಾರಣೆ ವಿಳಂಬವಾಗುತ್ತಿದೆ, ಹಲವಾರು ಬಾರಿ ಬಾಲಾ ಮತ್ತು ಅವನ ಪರ ವಕೀಲರು ವಿಚಾರಣೆಗೆ ಗೈರಾಗಿದ್ದಾರೆ ಎಂದು ತಮ್ಮ ನೋವನ್ನು ಹೊರ ಹಾಕಿದ್ದಾರೆ.

ಇನ್ನು ನನ್ನಿಂದ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿರುವ ಎಲಿಜಬೆತ್ ಉದಯನ್, ಬಾಲಾ ನನಗೆ ಬೆದರಿಕೆಯನ್ನು ಹಾಕುತ್ತಿದ್ದಾರೆ. ನನ್ನ ಕುಟುಂಬದ ವಿರುದ್ದ ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ. ನಾನು ಸಾಯುವ ಮುನ್ನ ನನಗೆ ನ್ಯಾಯ ಸಿಗುತ್ತಾ ? ಎಂದು ಪ್ರಶ್ನೆಯನ್ನು ಕೂಡ ಮಾಡಿರುವ ಎಲಿಜಬೆತ್ ನಾನು ಸತ್ತರೇ ಅದಕ್ಕೆ ನೇರವಾಗಿ ಬಾಲನೇ ಹೊಣೆಗಾರ, ನನ್ನ ಸಾವಿಗೆ ಅವರೇ ಜವಾಬ್ಧಾರರು ಎಂದು ಹೇಳಿದ್ದಾರೆ.

if-i-die-theyre-responsible-balas-ex-elizabeth-udayans-accusations-rock-malayalam

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹಲವರು ಎಲಿಜಬೆತ್ ಅವರಿಗೆ ಧೈರ್ಯವನ್ನು ಹೇಳುತ್ತಿದ್ದಾರೆ. ಸದ್ಯ ಈ ವಿಚಾರಕ್ಕೆ ಬಾಲಾ ಇನ್ನೂ ಪ್ರತಿಕ್ರಿಯೆಯನ್ನು ನೀಡಿಲ್ಲವಾದರೂ ಕಳೆದ ವರ್ಷ ಸಂಬಂಧ ಮುರಿದು ಬಿದ್ದ ನಂತರ ಬಾಲಾ ನಮ್ಮ ಈ ಮದುವೆ ಕಾನೂನು ಬದ್ದವಾಗಿಲ್ಲ ಎಂದು ಹೇಳಿದ್ದರು. ಆಕೆಯ ಮಾನಸಿಕ ಸ್ಥಿತಿ ಸರಿ ಇಲ್ಲ.. ಲೈಂಗಿಕ ದೌರ್ಜನ್ಯ.. ದಾಂಪತ್ಯ ದ್ರೋಹ.. ಹೀಗೆ ಹಲವು ಆರೋಪಗಳನ್ನು ಕೂಡ ಬಾಲಾ ತಮ್ಮ ಮೂರನೇ ಪತ್ನಿ ಎಲಿಜಬೆತ್ ವಿರುದ್ದ ಮಾಡಿದ್ದರು.

More from Filmibeat

English summary
Bala's ex-wife, Elizabeth Udayan, shares a harrowing video from hospital, fearing for her life & demanding justice. She accuses the actor and his family of abuse & denying their marriage.
Read more about: mollywood actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X