ಮದುವೆಯಾಗಿ ಕೇವಲ ಐದು ವರ್ಷಕ್ಕೆ ಮುರಿದು ಬಿತ್ತು ದಾಂಪತ್ಯ, ಇನ್ಮುಂದೆ ನಾನು ಸ್ವತಂತ್ರ ಹಕ್ಕಿ ಎಂದ ನಟಿ..!
ದುಡ್ಡು ಎಲ್ಲಿ ಹೆಚ್ಚಿರುತ್ತೆ ಅಲ್ಲಿ ಪ್ರೀತಿ ಕಡಿಮೆ ಇರುತ್ತೆ ಎನ್ನುವ ಮಾತನ್ನು ಹಲವರು ಹೇಳುತ್ತಾರೆ. ಕೆಲವರ ಬದುಕಿನಲ್ಲಿ ದುಡ್ಡು..ಆಸ್ತಿ.. ಐಶ್ವರ್ಯ.. ಹೆಚ್ಚಾದಂತೆ ನೆಮ್ಮದಿ ನಿಧಾನವಾಗಿ ಮಾಯವಾಗುತ್ತೆ. ಚಿತ್ರರಂಗದಲ್ಲಿಯಂತೂ ಇದಕ್ಕೆ ಹತ್ತು ಹಲವು ಉದಾಹರಣೆಗಳು ಕೂಡ ಇವೆ. ಇಲ್ಲಿ ಶ್ರೀಮಂತರೆಂದು ಕರೆಸಿಕೊಳ್ಳುವ ಅನೇಕರ ಬದುಕಿನಲ್ಲಿ ಪ್ರೀತಿ ಮರಿಚೀಕೆಯಾಗಿರುತ್ತೆ. ಯಾರು ಯಾವ ಉದ್ದೇಶಕ್ಕೆ ಲವ್ ಮಾಡ್ತಾರೆ.. ಆ ನಂತರ ಯಾಕೆ ಮದುವೆಯಾಗ್ತಾರೆ..
ಎನ್ನುವುದು ಅವರವರಿಗೆ ಗೊತ್ತಾದರೂ ಹಲವರ ದಾಂಪತ್ಯ ಇಲ್ಲಿ ಮುರಿದು ಬಿದ್ದಿವೆ. ಅದರಲ್ಲಿಯೂ ಕಳೆದ ಎರಡು ಮೂರು ವರ್ಷಗಳಲ್ಲಿ ಚಿತ್ರರಂಗದಲ್ಲಿ ಮದುವೆ ಮತ್ತು ಪ್ರೀತಿಗೆ ಅರ್ಥವೇ ಇಲ್ಲದಂತಾಗಿದೆ. ಅನ್ಯೋನ್ಯತೆಯ ಕೊರತೆಯಿಂದ.. ಚಿಕ್ಕ ಚಿಕ್ಕ ಕಾರಣಗಳಿಂದ ಹಲವರು ಸಂಬಂಧ ಮುರಿದುಕೊಂಡು ಎದ್ದು ಬಂದಿದ್ದಾರೆ. ಉದಾಹರಣೆಗೆ ರೋಷ್ನಾ ಆನ್ ರಾಯ್.

ಹೌದು. ರೋಷ್ನಾ ಆನ್ ರಾಯ್.. ಮಲಯಾಳಂನ ಚೆಲುವೆ. ಕಣ್ಸನ್ನೆ ಮೂಲಕ ದೇಶದೆಲ್ಲೆಡೆ ಮನೆ ಮಾತಾದ ಪ್ರಿಯಾ ವಾರಿಯರ್ ಅಭಿನಯದ ''ಒರು ಅದಾರ್ ಲವ್'' ಚಿತ್ರದ ಮೂಲಕ ಬೆಳಕಿಗೆ ಬಂದ ಪ್ರತಿಭೆ. "ಧಮಾಕಾ".. "ಪಾಪಂ ಛೆಯ್ಯತ್ತವರ್".. " ಕಲ್ಲೆರಿಯಟ್ಟೆ".. "ಅಜಗಜಂತರಂ".. " ಅಂಗಮಾಲಿ ಡೈರೀಸ್".. ಚಿತ್ರದ ಮೂಲಕ ಕೇರಳಿಗರ ಹೃದಯ ಗೆದ್ದ ರೋಶ್ನಾ "ಸುಲ್ಲು" ಎಂಬಚಿತ್ರದಲ್ಲಿ ಅಭಿನಯಿಸಿದ್ದರು. ಚಿತ್ರದಲ್ಲಿ ಅಭಿನಯಿಸುತ್ತಾ ಈ ಚಿತ್ರದ ಪಾತ್ರಧಾರಿ ಕಿಚು ಟೆಲ್ಲಸ್ ಅವರ ಜೊತೆ ಪ್ರೀತಿಯಲ್ಲಿ ಬಿದ್ದರು. ಆ ನಂತರ 2020ರ ಆಸು ಪಾಸು ಮದುವೆಯೂ ಆದರು.
ಆದರೆ ಈಗ ಕೇವಲ ಐದು ವರ್ಷದಲ್ಲಿ ಇವರ ಸಂಸಾರದಲ್ಲಿ ಬಿರುಕು ಮೂಡಿದೆ. ಈ ಹಿನ್ನೆಲೆ ಇನ್ನೂ ಜೊತೆಯಲ್ಲಿ ಬದುಕಲು ಸಾಧ್ಯವೇ ಇಲ್ಲ ಎನ್ನುವ ತೀರ್ಮಾನಕ್ಕೆ ಬಂದ ರೋಶ್ನಾ ವಿಚ್ಚೇದನದ ಸುದ್ದಿಯನ್ನು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಭಾವನಾತ್ಮಕ ಪತ್ರವನ್ನು ಬರೆದು ಇನ್ಮುಂದೆ ನಾನು ಸ್ವತಂತ್ರ್ಯಳು ಅವರು ಸ್ವತಂತ್ರ್ಯರು ಎಂದು ಹೇಳಿದ್ದಾರೆ.

ಈ ಕುರಿತು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ರೋಶ್ನಾ ಸಾಮಾಜಿಕ ಜಾಲತಾಣದ ಮೂಲಕ ಈ ವಿಚಾರ ಹೇಳಿಕೊಳ್ಳುವ ಇಚ್ಚೆ ನನ್ನದಾಗಿರಲಿಲ್ಲ. ಆದರೆ ಹೇಳಲೇಬೇಕು. ನಾವು ಇಬ್ಬರೂ ಜೀವಂತರಾಗಿದ್ದೇವೆ.. ಶಾಂತಿಯಿಂದ ಬದುಕುವ ಅರ್ಹತೆ ಹೊಂದಿದ್ದೇವೆ.. ಆದರೆ, ನಮ್ಮ ಮಾರ್ಗಗಳು ಈಗ ಬೇರೆ ಬೇರೆಯಾಗಿವೆ ಎಂದು ಹೇಳಿದ್ದಾರೆ. ಇನ್ಮುಂದೆ ನಾನು ಸ್ವತಂತ್ರ್ಯಳು ಅವರು ಸ್ವತಂತ್ರ್ಯರು ಎಲ್ಲರಿಗೆ ಶಾಂತಿಯನ್ನು ಬಯಸೋಣ ಎಂದು ಹೇಳಿದ್ದಾರೆ.
ನಾವು ಬೇರೆಯಾಗುತ್ತಿದ್ದರೂ ಕೂಡ ಈ ಬಂಧ ಯಾವತ್ತೂ ನನ್ನ ಪಾಲಿಗೆ ವಿಶೇಷವಾಗಿರುತ್ತೆ ಎಂದು ಹೇಳಿರುವ ರೋಶ್ನಾ ನಾವು ತುಂಬಾ ಆತ್ಮೀಯರಾಗಿದ್ದೇವು ಆದರೆ ಈಗ ದೂರ ಆಗುತ್ತಿದ್ದೇವೆ. ನೋವಾಗುತ್ತಿದೆ ಆದರೂ ಗೌರವಪೂರ್ವಕವಾಗಿ ವಿದಾಯ ಹೇಳುತ್ತಿದ್ದೇನೆ ಎಂದು ಹೇಳಿದ್ದಾರೆ. ಬದುಕು ಮುನ್ನಡಲೇಬೇಕು ಎಂದಿದ್ದಾರೆ. ನಿಮ್ಮ ಪ್ರಾರ್ಥನೆ ನಮಗೆ ಈಗ ಅವಶ್ಯಕ. ನಮ್ಮ ಪ್ರೈವೇಸಿಯನ್ನು ಗೌರವಿಸಿ ಎಂದು ಕೂಡ ಮನವಿ ಮಾಡಿಕೊಂಡಿದ್ದಾರೆ.
ನಾನು ಮತ್ತು ಕಿಚು ದೂರ ಆಗುತ್ತಿರುವ ವಿಚಾರವನ್ನು ಹೇಳಿದರು ಕೂಡ ಕೆಲವರು ನಂಬಲು ಸಿದ್ದರಿಲ್ಲ. ನಿಮ್ಮ ಸೋಶಿಯಲ್ ಮೀಡಿಯಾ ಖಾತೆಗೆ ಜನರನ್ನು ಸೆಳೆಯಲು, ಕಂಟೆಂಟ್ ಬೇಕು ಎಂಬ ಉದ್ದೇಶದಿಂದ ನೀವು ಡಿವೋರ್ಸ್ ಡ್ರಾಮಾ ಮಾಡ್ತಿದ್ದೀರಾ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ ಎಂದು ಹೇಳಿರುವ ರೋಶ್ನಾ ಒಂದು ವಾರದ ಹಿಂದೆಯಷ್ಟೇ ನಿಮ್ಮ ಇಬ್ಬರನ್ನು ಜೊತೆಯಲ್ಲಿ ನೋಡಿದ್ದೇವೆ ಮುಂದೆಯೂ ನೋಡಲು ಬಯಸುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ಇದು ನಾನು ತೆಗೆದುಕೊಂಡಿರುವ ನಿರ್ಧಾರ. ಅವರದ್ದಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.


Click it and Unblock the Notifications











