Just In
Don't Miss!
- Finance
ಕರ್ನಾಟಕ ರಾಜ್ಯ ಬಜೆಟ್: ಮಹಿಳಾ ಉದ್ಯಮಿಗಳಿಗೆ ಶೇ. 4ರ ಬಡ್ಡಿ ದರದಲ್ಲಿ ಸಾಲ
- Automobiles
ಸಂಚಾರ ನಿಯಮ ಉಲ್ಲಂಘಿಸುವವರಿಗೆ ಲಕ್ಷಗಟ್ಟಲೇ ದಂಡ ವಿಧಿಸುವ ದೇಶಗಳಿವು
- News
ಕರ್ನಾಟಕ ಬಜೆಟ್ 2021: ಬಿಎಂಟಿಸಿ ಬಸ್ಪಾಸ್ನಲ್ಲಿ ಮಹಿಳೆಯರಿಗೆ ರಿಯಾಯಿತಿ
- Education
Women's Day 2021 Google Doodle: ಡೂಡಲ್ ಮೂಲಕ ಗೌರವ ಸಲ್ಲಿಸಿದ ಗೂಗಲ್
- Sports
ರಿಷಭ್ ಪಂತ್ ಬ್ಯಾಟಿಂಗ್ಗೆ ಪಾಕ್ ಮಾಜಿ ನಾಯಕನ ಪ್ರಶಂಸೆ: ಸೆಹ್ವಾಗ್ ಬ್ಯಾಟಿಂಗ್ಗೆ ಹೋಲಿಸಿದ ಹಕ್
- Lifestyle
ಯಾವಾಗ ಅವಳಿ ಮಕ್ಕಳಾಗುವ ಸಾಧ್ಯತೆ ಹೆಚ್ಚು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ದೃಶ್ಯಂ 2' ಸಿನಿಮಾ ನೋಡಿ ಮೆಚ್ಚಿಕೊಂಡ ಕ್ರಿಕೆಟಿಗ ಆರ್ ಅಶ್ವಿನ್
ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ನಟನೆಯ ದೃಶ್ಯಂ 2 ಸಿನಿಮಾ ತೆರೆಕಂಡು ಅದ್ಭುತ ಪ್ರದರ್ಶನ ಕಾಣುತ್ತಿದೆ. ಫೆಬ್ರವರಿ 21 ರಂದು ದೃಶ್ಯಂ 2 ಸಿನಿಮಾದ ನೋಡಿದ ಭಾರತೀಯ ಕ್ರಿಕೆಟಿಗ ಆರ್ ಅಶ್ವಿನ್ ''ಅದ್ಭುತ'' ಎಂದು ಹೊಗಳಿದ್ದರು.
ಇದೀಗ, ಅಶ್ವಿನ್ ಅವರ ಮೆಚ್ಚುಗೆಗೆ ಮೋಹನ್ ಲಾಲ್ ಪ್ರತಿಕ್ರಿಯಿಸಿ ಧನ್ಯವಾದ ಅರ್ಪಿಸಿದ್ದಾರೆ. ''ನಿಮ್ಮ ಬ್ಯುಸಿ ಸಮಯದಲ್ಲೂ ನಮ್ಮ ಸಿನಿಮಾ ನೋಡಿದ್ದಕ್ಕಾಗಿ ಧನ್ಯವಾದ ಹಾಗೂ ನಿಮ್ಮ ಮುಂದಿನ ಜರ್ನಿ ಯಶಸ್ವಿದಾಯಕವಾಗಿರಲಿ'' ಎಂದು ಮೋಹನ್ ಲಾಲ್ ಟ್ವೀಟ್ ಮಾಡಿದ್ದಾರೆ.
Drishyam 2 movie review: ಮತ್ತೆ ಗೆದ್ದ ಜಾರ್ಜ್ ಕುಟ್ಟಿ, ಪೆಚ್ಚಾದ ಪೊಲೀಸರು
ಇದಕ್ಕೂ ಮುಂಚೆ ದೃಶ್ಯಂ ಸಿನಿಮಾ ನೋಡಿದ್ದ ಅಶ್ವಿನ್ ''ನ್ಯಾಯಾಲಯದ ದೃಶ್ಯಗಳಲ್ಲಿ ಜಾರ್ಜ್ ಕುಟ್ಟಿ ಕ್ರಿಯೇಟ್ ಮಾಡುವ ಟ್ವಿಸ್ಟ್‌ಗಳಿಗೆ ನಾನು ಜೋರಾಗಿ ನಗುತ್ತಿದ್ದೆ. ನೀವು ಮಿಸ್ ಮಾಡಿಕೊಂಡಿದ್ದರೆ ದೃಶ್ಯಂ 1 ರಿಂದ ಮತ್ತೆ ಪ್ರಾರಂಭಿಸಿ, ಅದ್ಭುತ'' ಎಂದು ಶ್ಲಾಘಿಸಿದ್ದರು.
ಜಿತು ಜೋಸೆಫ್ ನಿರ್ದೇಶನದ ದೃಶ್ಯಂ ಚಿತ್ರದಲ್ಲಿ ಮೋಹನ್ ಲಾಲ್ ಜೊತೆ ಮೀನಾ, ಅನ್ಸಿಬಾ ಹಸನ್, ಎಸ್ತರ್ ಅನಿಲ್, ಮುರಳಿ ಗೋಪಿ ಮತ್ತು ಆಶಾ ಶರತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಅಂದ್ಹಾಗೆ, ನಿರ್ದೇಶಕ ಜಿತು ಜೋಸೆಫ್ ಮತ್ತು ಮೋಹನ್ ಲಾಲ್ ದೃಶ್ಯಂ ಸರಣಿಯನ್ನು ಮುಂದುವರಿಸಲು ನಿರ್ಧರಿಸಿದ್ದಾರೆ ಎಂಬ ಸುದ್ದಿಯೂ ಇದೆ. ದೃಶ್ಯಂ 2 ಚಿತ್ರದ ಸಕ್ಸಸ್ ಬಳಿಕ ಕಥೆ ಮುಂದುವರಿಸುವುದಾಗಿ ನಿರ್ಮಾಪಕ ಆಂಟೋನಿ ಪೆರುಂಬವೂರ್ ಸುಳಿವು ನೀಡಿದ್ದಾರೆ. ಫೆಬ್ರವರಿ 19 ರಂದು ದೃಶ್ಯಂ 2 ಸಿನಿಮಾ ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿತ್ತು.