For Quick Alerts
  ALLOW NOTIFICATIONS  
  For Daily Alerts

  ಅಮಲಾ ಪೌಲ್ ಮದುವೆ ಮುರಿದು ಬೀಳಲು ಧನುಷ್ ಕಾರಣನಾ.? ನಟಿ ಕೊಟ್ಟ ಸ್ಪಷ್ಟನೆ ಏನು.?

  |
  ದಕ್ಷಿಣ ಭಾರತದ ಸ್ಟಾರ್ ನಟಿಯ ತಂದೆ ವಿಧಿವಶ | Amala Paul | FilmiBeat Kannada

  ತೆಲುಗು, ತಮಿಳು, ಮಲಯಾಳಂ ಸಿನಿಮಾ ರಂಗದಲ್ಲಿ ಪ್ರಖ್ಯಾತಿ ಪಡೆದು ಕನ್ನಡದ 'ಹೆಬ್ಬುಲಿ' ಚಿತ್ರದಲ್ಲೂ ಅಭಿನಯಿಸಿದ ನಟಿ ಅಮಲಾ ಪೌಲ್ ಮತ್ತು ನಿರ್ದೇಶಕ ಎ.ಎಲ್.ವಿಜಯ್ ಮದುವೆ ಮುರಿದು ಬಿದ್ದು ವರ್ಷಗಳೇ ಉರುಳಿವೆ.

  'ದೈವ ತಿರುಮಗಳ್' ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ನಿರ್ದೇಶಕ ಎ.ಎಲ್.ವಿಜಯ್ ಮತ್ತು ಅಮಲಾ ಪೌಲ್ ನಡುವೆ ಪ್ರೀತಿ ಮೂಡಿತ್ತು. ಅಲ್ಲಿಂದ ಮೂರು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದ ಈ ಜೋಡಿ 2014 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆ ಆದ ಎರಡೇ ವರ್ಷಗಳಲ್ಲಿ ಎ.ಎಲ್.ವಿಜಯ್ ಮತ್ತು ಅಮಲಾ ಪೌಲ್ ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದರು.

  ಎ.ಎಲ್.ವಿಜಯ್ ಮತ್ತು ಅಮಲಾ ಪೌಲ್ ಮದುವೆ ಮುರಿದು ಬೀಳಲು ಸೂಪರ್ ಸ್ಟಾರ್ ರಜನಿಕಾಂತ್ ಅಳಿಯ ಧನುಷ್ ಕಾರಣ ಅಂತ ಹೇಳಿ ಎ.ಎಲ್.ವಿಜಯ್ ತಂದೆ ಅಳಗಪ್ಪನ್ ಇತ್ತೀಚೆಗಷ್ಟೆ ಬಾಂಬ್ ಸಿಡಿಸಿದ್ದರು.

  ಈಗ ಇದೇ ವಿಚಾರದ ಕುರಿತು ನಟಿ ಅಮಲಾ ಪೌಲ್ ಸಂದರ್ಶನವೊಂದರಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ. ಮುಂದೆ ಓದಿರಿ...

  ಅಮಲಾ ಪೌಲ್ ಕೊಟ್ಟ ಸ್ಪಷ್ಟನೆ ಏನು.?

  ಅಮಲಾ ಪೌಲ್ ಕೊಟ್ಟ ಸ್ಪಷ್ಟನೆ ಏನು.?

  ''ನನ್ನ ವಿಚ್ಛೇದನದ ಕುರಿತು ಅನವಶ್ಯಕವಾಗಿ ವಿವಾದ ಸೃಷ್ಟಿಸಲಾಗುತ್ತಿದೆ. ವಿಚ್ಛೇದನ ನೀಡಿದ್ದು ನನ್ನ ವೈಯುಕ್ತಿಕ ಕಾರಣಕ್ಕೆ. ನನ್ನ ಡಿವೋರ್ಸ್ ಗೆ ಬೇರೆ ಯಾರೂ ಕಾರಣ ಅಲ್ಲ. ಡಿವೋರ್ಸ್ ನಿರ್ಧಾರವನ್ನು ತೆಗೆದುಕೊಂಡಿದ್ದು ನಾನೇ. ಧನುಷ್ ನನ್ನ ವೆಲ್ ವಿಶರ್ ಅಷ್ಟೇ'' ಎಂದು ಸಂದರ್ಶನವೊಂದರಲ್ಲಿ ನಟಿ ಅಮಲಾ ಪೌಲ್ ಹೇಳಿದ್ದಾರೆ.

  ಅಮಲಾ ಪೌಲ್ ವಿಚ್ಛೇದನಕ್ಕೆ ಧನುಶ್ ಕಾರಣ: ವಿಜಯ್ ತಂದೆ ಆರೋಪಅಮಲಾ ಪೌಲ್ ವಿಚ್ಛೇದನಕ್ಕೆ ಧನುಶ್ ಕಾರಣ: ವಿಜಯ್ ತಂದೆ ಆರೋಪ

  ಎರಡನೇ ಮದುವೆ ಬಗ್ಗೆ ಅಮಲಾ ಮಾತು..

  ಎರಡನೇ ಮದುವೆ ಬಗ್ಗೆ ಅಮಲಾ ಮಾತು..

  ''ನಾನು ಸದ್ಯಕ್ಕೆ ಎರಡನೇ ಮದುವೆ ಆಗುವುದಿಲ್ಲ. ನಾನು ಈಗ ಒಪ್ಪಿಕೊಂಡಿರುವ ಪ್ರಾಜೆಕ್ಟ್ ಗಳು ಕಂಪ್ಲೀಟ್ ಆಗುವವರೆಗೂ ಎರಡನೇ ಮದುವೆ ಬಗ್ಗೆ ಅನೌನ್ಸ್ ಮಾಡುವುದಿಲ್ಲ'' ಎಂದು ಇದೇ ಸಂದರ್ಭದಲ್ಲಿ ನಟಿ ಅಮಲಾ ಪೌಲ್ ಸ್ಪಷ್ಟ ಪಡಿಸಿದ್ದಾರೆ.

  ನಟಿ ಅಮಲಾ ಪೌಲ್ ಸಂಸಾರದಲ್ಲಿ ಬಿರುಗಾಳಿ..! ಕಾರಣ ಯಾರು.?ನಟಿ ಅಮಲಾ ಪೌಲ್ ಸಂಸಾರದಲ್ಲಿ ಬಿರುಗಾಳಿ..! ಕಾರಣ ಯಾರು.?

  ಎ.ಎಲ್.ವಿಜಯ್ ತಂದೆ ಹೇಳಿದ್ದೇನು.?

  ಎ.ಎಲ್.ವಿಜಯ್ ತಂದೆ ಹೇಳಿದ್ದೇನು.?

  ''ನನ್ನ ಮಗ ವಿಜಯ್ ಜೊತೆ ಮದುವೆ ಆದ್ಮೇಲೆ ಚಿತ್ರರಂಗ ತೊರೆಯಲು ಅಮಲಾ ಪೌಲ್ ನಿರ್ಧರಿಸಿದ್ದರು. ಆದರೆ ಧನುಶ್ ತಮ್ಮದೇ ಬ್ಯಾನರ್ ನ ಚಿತ್ರದಲ್ಲಿ ನಟಿಸುವಂತೆ ಅಮಲಾಗೆ ಬೇಡಿಕೆ ಇಟ್ಟರು. ಅಮಲಾ ಕೂಡ ಆ ಚಿತ್ರ ಒಪ್ಪಿಕೊಂಡರು. ಅಲ್ಲಿಂದಲೇ ಅಮಲಾ ಮತ್ತು ವಿಜಯ್ ಜೀವನದಲ್ಲಿ ಸಮಸ್ಯೆ ಶುರುವಾಗಿದ್ದು'' ಎಂದು ಎ.ಎಲ್.ವಿಜಯ್ ತಂದೆ ಅಳಗಪ್ಪನ್ ಹೇಳಿದ್ದರು.

  ಸೊಸೆ ಅಮಲಾ ಪೌಲ್ ವಿರುದ್ಧ ವಿಜಯ್ ತಂದೆ ಕಿಡಿ.! ಯಾಕೆ.?ಸೊಸೆ ಅಮಲಾ ಪೌಲ್ ವಿರುದ್ಧ ವಿಜಯ್ ತಂದೆ ಕಿಡಿ.! ಯಾಕೆ.?

  ಭುಗಿಲೆದ್ದ ವಿವಾದ

  ಭುಗಿಲೆದ್ದ ವಿವಾದ

  ಅಳಗಪ್ಪನ್ ಆಡಿದ್ದ ಈ ಮಾತಿನಿಂದ ಕಾಲಿವುಡ್ ನಲ್ಲಿ ದೊಡ್ಡ ವಿವಾದ ಸೃಷ್ಟಿಯಾಗಿತ್ತು. ಅಮಲಾ ಪೌಲ್ ಮತ್ತು ಎ.ಎಲ್.ವಿಜಯ್ ಸಂಸಾರ ಮುರಿದು ಬೀಳೋಕೆ ರಜನಿಕಾಂತ್ ಅಳಿಯನೇ ಕಾರಣ ಅಂತ ಎಲ್ಲರೂ ಧನುಷ್ ರತ್ತ ಬೆಟ್ಟು ಮಾಡಿ ತೋರಿಸುತ್ತಿದ್ದರು. ಆದ್ರೀಗ, ಡಿವೋರ್ಸ್ ಪಡೆಯಲು ಧನುಷ್ ಕಾರಣ ಅಲ್ಲ ಅಂತ ಹೇಳಿ ವಿವಾದಕ್ಕೆ ಅಮಲಾ ಪೌಲ್ ಫುಲ್ ಸ್ಟಾಪ್ ಇಟ್ಟಿದ್ದಾರೆ.

  ನಟಿ ಅಮಲಾ ಪೌಲ್ ಗೆ ವಿಚ್ಛೇದನ: ಪತಿ ವಿಜಯ್ ಬಾಯ್ಬಿಟ್ಟ ಸತ್ಯ ಏನು.?ನಟಿ ಅಮಲಾ ಪೌಲ್ ಗೆ ವಿಚ್ಛೇದನ: ಪತಿ ವಿಜಯ್ ಬಾಯ್ಬಿಟ್ಟ ಸತ್ಯ ಏನು.?

  ಸಿನಿಮಾಗಳಲ್ಲಿ ಅಮಲಾ ಬಿಜಿ

  ಸಿನಿಮಾಗಳಲ್ಲಿ ಅಮಲಾ ಬಿಜಿ

  ಸದ್ಯ ನಟನೆಯಲ್ಲಿ ಅಮಲಾ ಪೌಲ್ ಬಿಜಿಯಾಗಿದ್ದಾರೆ. ಅಮಲಾ ಪೌಲ್ ಅಭಿನಯದ 'ಅಧೋ ಅಂಧ ಪರವೈ ಪೋಲಾ' ಚಿತ್ರ ಫೆಬ್ರವರಿ 28 ರಂದು ಬಿಡುಗಡೆ ಆಗಲಿದೆ. ಇದಲ್ಲದೆ ಇನ್ನೂ ಮೂರು ಚಿತ್ರಗಳು ಅಮಲಾ ಪೌಲ್ ಕೈಯಲ್ಲಿವೆ.

  English summary
  Is Dhanush the reason for Divorce: Amala Paul clarifies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X