'ಜೋಶ್','100' ಸಿನಿಮಾದ ನಟಿ ಮದುವೆಗೂ ಮುನ್ನ ಪೂರ್ಣ ಪ್ರೆಗ್ನೆಂಟಾ ಆಗಿದ್ರಾ? ಏನಂತಿದೆ ಟಾಲಿವುಡ್?
ಬಹುಭಾಷಾ ನಟಿ ಪೂರ್ಣಾ ಉರ್ಫ್ ಶಮ್ನಾ ಕಾಸಿಂ ಇತ್ತೀಚೆಗೆ ದುಬೈನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಲಯಾಳಂ ನಟಿ ಪೂರ್ಣಾ ಕಳೆದ ಅಕ್ಟೋಬರ್ ತಿಂಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈಗ ನೆಟ್ಟಿಗರು ಶಮ್ನಾ ಕಾಸಿಂ ಪ್ರೆಗ್ನೆನ್ಸಿ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ.
ಶಮ್ನಾ ಕ್ಕಾಸಿಮ್ ಅಲಿಯಾಸ್ ಪೂರ್ಣಾ ಮೂಲ ಕೇರಳ ಆಗಿದ್ದರೂ, ದಕ್ಷಿಣದ ನಾಲ್ಕು ಪ್ರಮುಖ ಭಾಷೆಯ ಸಿನಿಮಾಗಳಲ್ಲೂ ನಟಿಸಿದ್ದಾರೆ. ಕನ್ನಡದಲ್ಲಿ ಶಿವಮಣಿ ನಿರ್ದೇಶನದ 'ಜೋಶ್' ಹಾಗೂ ಇತ್ತೀಚೆಗೆ ರಮೇಶ್ ಅರವಿಂದ್ ನಟಿಸಿ, ನಿರ್ದೇಶಿಸಿದ '100' ಸಿನಿಮಾದಲ್ಲಿ ನಟಿಸಿದ್ದಾರೆ.

ನಿನ್ನೆ(ಏಪ್ರಿಲ್ 4) ಈ ನಟಿ ದುಬೈನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದರು. ಜೊತೆಗೆ ಕೆಲವು ಫೋಟೊಗಳನ್ನೂ ಶೇರ್ ಮಾಡಿಕೊಂಡಿದ್ದರು. ಈ ಫೋಟೊಗಳು ವೈರಲ್ ಆಗುತ್ತಿದ್ದಂತೆ ಮದುವೆ ಮುನ್ನವೇ ಗರ್ಭಿಣಿಯಾಗಿದ್ದರು ಎಂದು ನೆಟ್ಟಿಗರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಅಕ್ಟೋಬರ್ 25ರಂದು ಮದುವೆ
ಬಹುಭಾಷಾ ನಟಿ ಪೂರ್ಣಾ ಕಳೆದ ವರ್ಷ ಅಕ್ಟೋಬರ್ 25ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ದುಬೈ ಮೂಲದ ಉದ್ಯಮಿ ಹಾಗೂ JBS ಗ್ರೂಪ್ ಆಫ್ ಕಂಪನಿಗಳ ಸ್ಥಾಪಕ ಮತ್ತು CEO ಡಾ.ಶಾನಿದ್ ಆಸಿಫ್ ಅಲಿ ಅವರನ್ನು ಮದುವೆಯಾಗಿದ್ದರು. ಈ ಫೋಟೊಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದವು.

ಹೀಗಾಗಿ ಅಕ್ಟೋಬರ್ 25ರಲ್ಲಿ ಮದುವೆ ಆಗಿದ್ದ ನಟಿ ಏಪ್ರಿಲ್ 4ಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮದುವೆ ಆರು ತಿಂಗಳು ಕೂಡ ಆಗಿಲ್ಲ. ಹೀಗಾಗಿ ಮದುವೆಗೂ ಮುನ್ನವೇ ಪೂರ್ಣಾ ಉರ್ಫ್ ಶಮ್ನಾ ಕ್ಕಾಸಿಮ್ ಪ್ರೆಗ್ನೆಂಟಾ ಆಗಿದ್ರಾ? ಅಂತ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ.
2022 ಜೂನ್‌ನಲ್ಲಿ ನಿಶ್ಚಿತಾರ್ಥ
2022 ಜೂನ್ ತಿಂಗಳಿನಲ್ಲಿ ಆಸಿಫ್ ಅಲಿಯೊಂದಿಗೆ ಶಮ್ನಾ ಕ್ಕಾಸಿಮ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅಂದಿನಿಂದಲೇ ಇಬ್ಬರು ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದಿರಬಹುದು ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
ಮತ್ತೆ ಕೆಲವರು "ನೀವು ಗರ್ಭಿಣಿ ಎಂದು ಗೊತ್ತಾದ ಬಳಿಕ ಮದುವೆ ಆದ್ರಾ ಅಂತಾನೂ ಪ್ರಶ್ನೆ ಮಾಡುತ್ತಿದ್ದಾರೆ? ಸಿನಿಮಾರಂಗದಲ್ಲಿ ಇದೆಲ್ಲ ಕಾಮನ್ ಆಗಿಬಿಟ್ಟಿದೆ. ಮದುವೆ ಮುನ್ನ ಗರ್ಭಿಣಿಯಾಗೋದು ದೊಡ್ಡ ವಿಷಯವೇ ಅಲ್ಲ. ಹೀಗಾಗಿ ಕೆಲವರು ನಟಿ ಹಾಗೂ ಮಗುವಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
ಆಕ್ಟಿಂಗ್ ನಿಲ್ಲಿಸಬೇಡಿ ಎನ್ನುತ್ತಿರೋ ಫ್ಯಾನ್ಸ್
ಶಮ್ನಾ ಕ್ಕಾಸಿಮ್ ತಾಯಿಯಾಗಿರುವ ಬೆನ್ನಲ್ಲೇ ಕೆಲ ಕಾಲ ನಟನೆಯಿಂದ ದೂರ ಉಳಿಯುವ ಸಾಧ್ಯತೆಯಿದೆ. ಈ ಸಮಯದಲ್ಲಿ ಮಗುವಿಗೆ ತಾಯಿಯ ಅವಶ್ಯಕತೆ ಇರುವುದರಿಂದ ಸಿನಿಮಾ ಹಾಗೂ ಕಿರುತೆರೆ ಎರಡರಿಂದಲೂ ಬ್ರೇಕ್ ತೆಗೆದುಕೊಳ್ಳಬಹುದು ಎಂದು ಅಂದಾಹಿಸಲಾಗಿದೆ.
ಶಮ್ನಾ ಕ್ಕಾಸಿಮ್(ಪೂರ್ಣಾ) ಹೀರೊಯಿನ್ ಆಗಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಲಯಾಳಂ, ತೆಲುಗು, ತಮಿಳು ಹಾಗೂ ಕನ್ನಡದಲ್ಲೂ ನಟಿಸಿದ್ದಾರೆ. ಆದರೆ, ಎಲ್ಲೂ ಹೇಳಿಕೊಳ್ಳುವಂತಹ ಬ್ಲಾಕ್‌ಬಸ್ಟರ್ ಸಿನಿಮಾ ಸಿಗಲಿಲ್ಲ. ಇತ್ತೀಚೆಗೆ ಸಿನಿಮಾದಿಂದ ಕಿರುತೆರೆ ಕಡೆ ಮುಖ ಮಾಡಿದ್ದರು.
ತೆಲುಗಿನ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. ತಮ್ಮದೇ ಯೂಟ್ಯೂಬ್ ಚಾನೆಲ್ ಅನ್ನೂ ಆರಂಭಿಸಿದ್ದರು. ಆದರೆ, ಮದುವೆ ಬಳಿಕ ರಿಯಾಲಿಟಿ ಶೋಗೂ ಬ್ರೇಕ್ ಕೊಟ್ಟು ದುಬೈನಲ್ಲಿ ನೆಲೆಸಿದ್ದರು. ಈಗ ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











