ಐಪಿಎಲ್‌ನಲ್ಲಿ ಆ ತಂಡ ಗೆದ್ರೆ ಬಿಕಿನಿ ಫೋಟೊ ಪೋಸ್ಟ್ ಮಾಡ್ತೀನಿ ಎಂದಿದ್ದ ಮಾದಕ ನಟಿ.. ಆದ್ರೆ

ಪಬ್ಲಿಸಿಟಿಗಾಗಿ ಕೆಲ ನಟಿಯರು ಚಿತ್ರ, ವಿಚಿತ್ರ ಪೋಸ್ಟ್‌ಗಳನ್ನು ಮಾಡುತ್ತಿರುತ್ತಾರೆ. ಈ ಹಿಂದೆ ಭಾರತ ತಂಡ ವಿಶ್ವಕಪ್ ಗೆದ್ದರೆ ನಾನು ಮೈದಾನವಿಡೀ ಬೆತ್ತಲೆ ಓಡುವುದಾಗಿ ಹೇಳಿ ಭಾರೀ ಸುದ್ದಿ ಆಗಿದ್ದರು. ಆ ಬಳಿಕ ಕೂಡ ಇಂತದ್ದೇ ವಿಚಿತ್ರ ಪೋಸ್ಟ್‌ಗಳಿಂದ ಕೆಲವರು ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು.

ಸದ್ಯ ದೇಶದಲ್ಲಿ ಐಪಿಎಲ್ ಫೀವರ್ ಜೋರಾಗಿದೆ. ಈ ಬಾರಿಯ ಸರಣಿ ರೋಚಕ ಘಟ್ಟಕ್ಕೆ ಬಂದಿದೆ. ಫೈನಲ್ ಪಂದ್ಯಕ್ಕೆ ಇನ್ನೊಂದು ದಿನ ಮಾತ್ರ ಬಾಕಿಯಿದೆ. ಕೆಕೆಆರ್‌ ವರ್ಸಸ್ ಸನ್‌ ರೈಡರ್ಸ್ ಹೈದರಾಬಾದ್ ತಂಡ ಅಂತಿಮ ಹಣಾಹಣಿಗೆ ಸಜ್ಜಾಗಿವೆ. ಆರ್‌ಸಿಬಿ ಹಾಗೂ ಆರ್‌ಆರ್ ತಂಡಗಳು ಪ್ಲೇ ಆಫ್ ಹಂತದಲ್ಲಿ ಸೋತು ಟೂರ್ನಿಯಿಂದ ನಿರ್ಗಮಿಸಿವೆ. ಮೊದಲ ಪ್ಲೇ ಆಫ್ ಪಂದ್ಯ ಆರ್‌ಸಿನಿ ಎದುರು ಗೆದ್ದಿದ್ದ ಆರ್‌ಆರ್‌ ತಂಡ ಎಸ್‌ಆರ್‌ಹೆಚ್‌ ತಂಡದ ವಿರುದ್ಧ ಸೋಲುಂಡು ನಿರಾಸೆ ಅನುಭವಿಸಿದೆ.

Is mollywood actress promised to post her bikini Photos if RCB won IPL eliminator match 2024

ಬುಧವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಆರ್‌ ತಂಡವನ್ನು ಎದುರಿಸಿತ್ತು. ಟೂರ್ನಿಯ ಆರಂಭದಲ್ಲಿ ಹೀನಾಯ ಪ್ರದರ್ಶನ ಕಂಡಿದ್ದ ಬೆಂಗಳೂರು ತಂಡ ಬಳಿಕ ಫೀನಿಕ್ಸ್ ರೀತಿ ಎದ್ದು ಬಂದು ಅಚ್ಚರಿ ಮೂಡಿಸಿತ್ತು. ಪ್ಲೇ ಆಫ್‌ ಹಂತಕ್ಕೆ ಏರಿ ಎಲ್ಲರ ಹುಬ್ಬೇರಿಸಿತ್ತು. ಆದರೆ ಆರ್‌ಆರ್ ತಂಡದ ವಿರುದ್ಧ ಸೋಲಿಗೆ ಶರಣಾಗಿತ್ತು. ಈ ವರ್ಷ ಆದರೂ ಆರ್‌ಸಿಬಿ ಕಪ್ ಗೆಲ್ಲುತ್ತಾ ಎನ್ನುವ ಅಸಂಖ್ಯಾತ ಅಭಿಮಾನಿಗಳ ಆಸೆ ತಣ್ಣೀರೆರಚಿತ್ತು.

ಕನ್ನಡ ಸಿನಿಮಾ ತಾರೆಯರು ಸೇರಿದಂತ ಹಲವರು ಆರ್‌ಸಿಬಿ ತಂಡವನ್ನು ಬೆಂಬಲಿಸಿದ್ದರು. ನಟಿ ಸಮಂತಾ ಕೂಡ ಫಾಫ್ ಡು ಪ್ಲೆಸಿಸ್ ನೇತೃತ್ವದ ತಂಡವನ್ನು ಬೆಂಬಲಿಸಿ ಪೋಸ್ಟ್ ಮಾಡಿದ್ದಾರೆ ಎಂದು ಸುದ್ದಿ ಆಗಿತ್ತು. ಇನ್ನು ಮಲಯಾಳಿ ಚೆಲುವೆ ಹನಿ ರೋಸ್ ಕೂಡ ಆರ್‌ಸಿಬಿ ಬೆಂಬಲಿಸಿ ಪೋಸ್ಟ್ ಮಾಡಿದ್ದರು ಎನ್ನಲಾಗ್ತಿದೆ. ಆ ಪೋಸ್ಟ್ ಈಗ ವೈರಲ್ ಆಗುತ್ತಿದೆ. ಇವತ್ತು ಆರ್‌ಸಿಬಿ ತಂಡ ಗೆದ್ದರೆ ನಾನು ನನ್ನ ಬಿಕಿನಿ ಫೋಟೊಗಳನ್ನು ಪಂದ್ಯ ಮುಗಿದ ಬಳಿಕ ಪೋಸ್ಟ್ ಮಾಡುತ್ತೇನೆ ಎಂದು ಬರೆದಿದ್ದ ಪೋಸ್ಟ್ ಈಗ ವೈರಲ್ ಆಗುತ್ತಿದೆ.

ಹನಿ ರೋಸ್ ಬುಧವಾರ ಪಂದ್ಯ ಆರಂಭಕ್ಕೂ ಮುನ್ನ ಟ್ವಿಟರ್‌ ಖಾತೆಯಲ್ಲಿ ಈ ರೀತಿ ಬರೆದುಕೊಂಡಿದ್ದರು. ಪಂದ್ಯ ಮುಗಿದ ಬಳಿಕ ಹೃದಯ ಒಡೆಯಿತು ಎನ್ನುವಂತೆ ಎಮೋಜಿ ಪೋಸ್ಟ್ ಮಾಡಿದ್ದರು. ಅದರ ಸ್ಕ್ರೀನ್ ಶಾಟ್ ತಡವಾಗಿ ಸದ್ದು ಮಾಡುತ್ತಿದೆ. ಈ ಪೋಸ್ಟ್‌ಗೆ ತರಹೇವಾರಿ ಕಾಮೆಂಟ್‌ಗಳು ಬರ್ತಿವೆ. ಕೆಲವರು ಇದು ಆಕೆಯ ಅಧಿಕೃತ ಟ್ವಿಟರ್ ಖಾತೆ ಅಲ್ಲ ಎನ್ನುತ್ತಿದ್ದಾರೆ. ಯಾರೋ ಅಭಿಮಾನಿಗಳ ಖಾತೆ ಇರಬಹುದು ಎನ್ನುತ್ತಿದ್ದಾರೆ.

Is mollywood actress promised to post her bikini Photos if RCB won IPL eliminator match 2024

ಸದ್ಯ ಹನಿ ರೋಸ್ ಟ್ವಿಟರ್‌ ಖಾತೆಯಿಂದ ಪೋಸ್ಟ್ ಆಗಿದ್ದ ಟ್ವೀಟ್ ಡಿಲೀಟ್ ಆಗಿದೆ. ಪಂದ್ಯದ ಫಲಿತಾಂಶ ಏನಾಗುತ್ತದೆ ಎಂದು ಗೊತ್ತಿದ್ದೇ ಗೊತ್ತಿದ್ದು ಆಕೆ ಆ ಪೋಸ್ಟ್ ಮಾಡಿದ್ರಾ? ಎಂದು ಕೆಲವರು ವ್ಯಂಗ್ಯವಾಡುತ್ತಿದ್ದಾರೆ. ಅಂದಹಾಗೆ ಕೇರಳ ಕುಟ್ಟಿ ಹನಿ ರೋಸ್ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. 2005ರಲ್ಲಿ 'ಬಾಯ್‌ಫ್ರೆಂಡ್' ಎನ್ನುವ ಮಲಯಾಳಂ ಚಿತ್ರದಲ್ಲಿ ಆಕೆ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು.

2009ರಲ್ಲಿ 'ಅಜಂತ' ಎನ್ನುವ ಕನ್ನಡ ಚಿತ್ರದಲ್ಲಿ ಹನಿ ರೋಸ್ ಮಿಂಚಿದ್ದರು. ಮರುವರ್ಷ 'ನಂಜನಗೂಡು ನಂಜುಂಡ' ಎನ್ನುವ ಮತ್ತೊಂದು ಚಿತ್ರಕ್ಕೆ ಕೂಡ ಬಣ್ಣ ಹಚ್ಚಿದ್ದರು. ಬಳಿಕ ಕನ್ನಡ ಸಿನಿಮಾಗಳಲ್ಲಿ ಆಕೆ ನಟಿಸಿರಲಿಲ್ಲ. ಬಳಿಕ ತೆಲುಗು, ಮಲಯಾಳಂ ಸಿನಿಮಾಗಳಲ್ಲೇ ಹನಿ ರೋಸ್ ಹೆಚ್ಚು ಕಾಣಿಸಿಕೊಂಡಿದ್ದರು. ಕಳೆದ ವರ್ಷ ಬಂದ ತೆಲುಗಿನ 'ವೀರಸಿಂಹ ರೆಡ್ಡಿ' ಹನಿ ರೋಸ್ ಮತ್ತೊಮ್ಮೆ ಕಮಾಲ್ ಬಂದಿದ್ದರು. ಮತ್ತೆ ಸೌತ್ ಸಿನಿದುನಿಯಾದಲ್ಲಿ ಈಕೆಯ ಕ್ರೇಜ್ ಶುರುವಾಯಿತು.

More from Filmibeat

English summary
Famous Actress said if RCB wins in eliminator match, she will post bikini pics
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X