ಕಂಠಪೂರ್ತಿ ಕುಡಿದ ಮನೆಯ ಬಾಲ್ಕನಿಯಲ್ಲಿ ಅಸಹ್ಯವಾಗಿ ವರ್ತಿಸಿದ ಜೈಲರ್ ಚಿತ್ರದ ವಿಲನ್ 'ವಿನಾಯಕನ್'..!
ನಾಯಿ ಬಾಲ ಯಾವತ್ತಿದ್ದರೂ ಡೊಂಕು ಎಂಬ ಗಾದೆ ಮಾತು ಆಗಾಗ ನಿಜಾ ಎಂದು ಸಾಬೀತು ಮಾಡುವವರು ವಿನಾಯಕನ್. ಕಳೆದ ವರ್ಷ ಕುಡಿದು ರಂಪ ಮಾಡಿ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿ ಪೊಲೀಸರ ಅತಿಥಿಯಾಗಿದ್ದ ವಿನಾಯಕನ್ನನ್ನ ಮೇಲೆ ಸಿಐಎಸ್ಎಫ್ ಸಿಬ್ಬಂದಿಯೇ ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದರು. ಬೇಕಿದ್ದರೆ ಸಿಸಿಟಿವಿ ಫುಟೇಜ್ ನೋಡಿ. ಪೊಲೀಸರು ನನ್ನನ್ನು ಯಾಕೆ ವಶಕ್ಕೆ ಪಡೆದರು ಎನ್ನುವುದು ಗೊತ್ತಿಲ್ಲ ಎಂದು ಹೇಳಿದ್ದರು.
ಇನ್ನು ಇದಕ್ಕೂ ಮುನ್ನಕೇರಳ ಪೊಲೀಸರ ಆತಿಥ್ಯವನ್ನು ಕೂಡ ವಿನಾಯಕನ್ ಸ್ವೀಕರಿಸಿದ್ದರು. ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಕುಡಿದು ಗಲಾಟೆ ಮಾಡಿ ನೆರೆಹೊರೆಯವರಿಗೆ ತಲೆ ನೋವಾಗಿದ್ದರು. ಎರ್ನಾಕುಲಂ ಟೌನ್ ನಾರ್ತ್ ಪೊಲೀಸ್ ಠಾಣೆಗೆ ವಿಚಾರಣೆಗೆ ತೆರಳಿ ಅಲ್ಲಿಯೂ ಕೂಡ ರಂಪ ರಾಮಾಯಣ ಮಾಡಿದ್ದರು. ಇಷ್ಟೇ ಅಲ್ಲ ಗೋವಾದಲ್ಲಿ ಕಂಠಪೂರ್ತಿ ಕುಡಿದು ರಸ್ತೆ ಬದಿ ಟೀ ಮಾರುವ ವ್ಯಾಪಾರಿ ಜೊತೆ ಕಿರಿಕ್ ಮಾಡಿಕೊಂಡಿದ್ದ ವಿನಾಯಕನ್ ಮಾಡೆಲ್ ಮತ್ತು ಅವರ ತಾಯಿಯನ್ನು ಮಂಚಕ್ಕೆ ಕರೆದು ಸುದ್ದಿಯಾಗಿದ್ದರು. ವಿವಾದಕ್ಕೀಡಾಗಿದ್ದರು. ಮೀಟೂ ಸುಳಿಯಲ್ಲಿ ಸಿಲುಕಿದ್ದರು. ತಮ್ಮ ಈ ವಿವಾದ-ಪ್ರಮಾದ ಮತ್ತು ಕುಡಿತದ ಚಟದಿಂದ ಅನೇಕ ಬಾರಿ ಮಲಯಾಳಂ ಚಿತ್ರರಂಗವನ್ನು ಮುಜುಗರಕ್ಕೀಡು ಮಾಡಿದ್ದರು.

ಇಂಥಾ ಚರಿತ್ರೆಯನ್ನು ಹೊಂದಿರುವ ವಿನಾಯಕನ್ ಈಗ ತಮ್ಮ ಮನೆಯ ಬಾಲ್ಕನಿಯಲ್ಲಿ ಅಸಭ್ಯವಾಗಿ ವರ್ತಿಸಿದ್ದಾರೆ. ನೆರೆಹೊರೆಯವರಿಗೆ ಅಶ್ಲೀಲ ಪದಗಳಿಂದ ನಿಂದಿಸುತ್ತಾ ನಗ್ನರಾಗಿದ್ದಾರೆ. ಕುಡಿದ ಮತ್ತಿನಲ್ಲಿ ಸರಿಯಾದ ನಿಲ್ಲಲು ಆಗದೆ, ಕುಳಿತುಕೊಳ್ಳಲು ಕೂಡ ಬಾರದೇ ನೆಲದ ಮೇಲೆ ಬಿದ್ದು ಹೊರಳಾಡಿದ್ದಾರೆ.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿನಾಯಕನ್ ಅಸಭ್ಯ ವರ್ತನೆಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಕೇವಲ ಚಿತ್ರದಲ್ಲಿ ಮಾತ್ರವಲ್ಲ ನಿಜ ಜೀವನದಲ್ಲಿ ಕೂಡ ಖಳನಾಯಕನಂತೆ ವರ್ತಿಸುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಕೇಳುತ್ತಿರುವ ಅನೇಕರು ವಿನಾಯಕನ್ ಮಾನಸಿಕ ಅಸ್ವಸ್ಥರಾಗಿದ್ದಾರೆ ಅವರಿಗೆ ಚಿಕಿತ್ಸೆಯ ಅವಶ್ಯಕತೆ ಇದೆ ಎನ್ನುವ ಅಭಿಪ್ರಾಯವನ್ನು ಅನೇಕರು ವ್ಯಕ್ತಪಡಿಸಿದ್ದಾರೆ. ಈ ವಿಚಾರವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ವಿನಾಯಕನ್‌ಗೆ ಬುದ್ದಿ ಕಲಿಸಬೇಕೆನ್ನುತ್ತಿದ್ದಾರೆ.
ಅಂದ್ಹಾಗೇ ಸದಾ ವಿವಾದಗಳಿಂದ ಸುದ್ದಿಯಾಗುವ ವಿನಾಯಕನ್ತಮ್ಮ ಚಿತ್ರ ಜೀವನವನ್ನು ಡ್ಯಾನ್ಸರ್ ಆಗಿ ಶುರು ಮಾಡಿದ್ದರು. ಬ್ಲ್ಯಾಕ್ ಮರ್ಕುರಿ ಎಂಬ ಡ್ಯಾನ್ಸ್ ತಂಡವನ್ನು ಮುನ್ನಡೆಸುತ್ತಿದ್ದ ವಿನಾಯಕನ್ ಆ ನಂತರ 'ಮಾಂತ್ರಿಕಮ್' ಎನ್ನುವ ಚಿತ್ರದಲ್ಲಿ ಮೊದಲಿಗೆ ಬಣ್ಣ ಹಚ್ಚಿದ್ದರು. 'ಸ್ಟಾಪ್ ವೈಲೆನ್ಸ್', 'ವೆಲ್ಲಿತಿರಾ', 'ಚಾತಿಕಥಾ ಚಂತು', 'ಛೋಟಾ ಮುಂಬೈ' ಮತ್ತು 'ತೊಟ್ಟಪ್ಪನ್' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದರು. ಮಲಯಾಳಂ ಬಿಟ್ಟರೆ ಕೆಲ ತಮಿಳು ಸಿನಿಮಾಗಳಲ್ಲಿ ಕೂಡ ಅಬ್ಬರಿಸಿರುವ ವಿನಾಯಕನ್‌ಗೆ ಧನುಷ್ ಅಭಿನಯದ 'ಮರಿಯಾನ್' ತಮಿಳುನಾಡಿನಲ್ಲಿ ಹೆಸರು ತಂದು ಕೊಟ್ಟಿತ್ತು. 'ತಿಮಿರು', 'ಕಾಳೈ', 'ಸಿರುತೈ' 'ಸಿಲಂ ಪಟ್ಟಂ', ವಿನಾಯಕನ್ ಅಭಿನಯದ ಕೆಲ ಪ್ರಮುಖ ತಮಿಳು ಚಿತ್ರಗಳು.
ಇನ್ನು ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ ಚಿತ್ರದಲ್ಲಿ ಪ್ರಮುಖ ವಿಲನ್ ಪಾತ್ರದಲ್ಲಿ ಅಬ್ಬರಿಸಿದ್ದ ವಿನಾಯಕನ್, ವರ್ಮಾ ಪಾತ್ರದ ಮೂಲಕ ಜನ ಮನ ಗೆದ್ದಿದ್ದರು. ಇಂಥಾ ಪ್ರತಿಭಾವಂತ ನಟ ಮತ್ತು ಡ್ಯಾನ್ಸರ್ ಕುಡಿತಕ್ಕೆ ದಾಸನಾಗಿ ಕಂಡ ಕಂಡಲೆಲ್ಲ ರಂಪ-ರಾಮಾಯಣ ಮಾಡಿಕೊಂಡು ಸುದ್ದಿಯಾಗುತ್ತಿರುವುದು ದುರಂತ.


Click it and Unblock the Notifications











