Jailer: ಕೇರಳ ಬಾಕ್ಸ್ ಆಫೀಸ್‌ನಲ್ಲಿ ವಿಕ್ರಮ್ ದಾಖಲೆ ಮುರಿದ ಜೈಲರ್ ಈಗ ಹೊಸ ಇಂಡಸ್ಟ್ರಿ ಹಿಟ್!
ಸದ್ಯ ಭಾರತದಾದ್ಯಂತ ಅತಿಹೆಚ್ಚು ಸದ್ದು ಮಾಡುತ್ತಿರುವ ಸಿನಿಮಾವೆಂದರೆ ಅದು ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್. ಹೌದು, ಆಗಸ್ಟ್ 10ರಂದು ವಿಶ್ವದಾದ್ಯಂತ ಬಿಡುಗಡೆಯಾದ ಜೈಲರ್ ಸಿನಿಮಾ ಸದ್ಯ 9 ದಿನಗಳು ಕಳೆದಿದ್ದರೂ ಸಹ ತನ್ನ ಸದ್ದನ್ನು ಸ್ವಲ್ಪವೂ ತಗ್ಗಿಸುವ ಹಾಗೆ ಕಾಣುತ್ತಿಲ್ಲ.
ಜೈಲರ್ ಸಿನಿಮಾ ಮೊದಲ ವಾರವನ್ನು ಮುಕ್ತಾಯಗೊಳಿಸಿದ್ದು, ಮೊದಲ 9 ದಿನಗಳಲ್ಲಿ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 468 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿ ಗೆದ್ದು ಬೀಗಿದೆ. ಜೈಲರ್ ತಮಿಳಿನಾಡಿನಲ್ಲಿ ಮಾತ್ರವಲ್ಲದೇ ಕರ್ನಾಟಕ, ತೆಲುಗು ರಾಜ್ಯಗಳು ಹಾಗೂ ಕೇರಳದಲ್ಲಿಯೂ ಸಹ ಅಬ್ಬರದ ಪ್ರದರ್ಶನವನ್ನು ಕಾಣುತ್ತಿದೆ.

ಹೌದು, ಜೈಲರ್ ವಿವಿಧ ರಾಜ್ಯಗಳಲ್ಲಿ ಅಬ್ಬರದ ಕಲೆಕ್ಷನ್ ಮಾಡಿದ್ದು, ಕರ್ನಾಟಕದಲ್ಲಿ ಮೊದಲ 9 ದಿನಗಳಲ್ಲಿ 52 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದೆ. ತೆಲುಗು ರಾಜ್ಯಗಳಲ್ಲಿ ಜೈಲರ್ ಮೊದಲ 9 ದಿನಗಳಲ್ಲಿ 59 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದೆ. ಕೇರಳದಲ್ಲಿ ಮೊದಲ 9 ದಿನಗಳಲ್ಲಿ ಜೈಲರ್ 40.35 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ.
ಇಷ್ಟು ದೊಡ್ಡ ಮಟ್ಟದ ಗಳಿಕೆ ಮಾಡಿರುವ ಜೈಲರ್ ಕೇರಳ ಬಾಕ್ಸ್ ಆಫೀಸ್‌ನಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ತಮಿಳ ಸಿನಿಮಾ ಎಂಬ ದಾಖಲೆಯನ್ನು ಬರೆದಿದ್ದು, ಕೇರಳ ಬಾಕ್ಸ್ ಆಫೀಸ್‌ನಲ್ಲಿ ಕಾಲಿವುಡ್‌ನ ನೂತನ ಇಂಡಸ್ಟ್ರಿ ಹಿಟ್ ಆಗಿ ಹೊರಹೊಮ್ಮಿದೆ. ಈ ಮೂಲಕ ಜೈಲರ್ ಕೇರಳ ಬಾಕ್ಸ್ ಆಫೀಸ್‌ನಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ತಮಿಳು ಸಿನಿಮಾ ಎನಿಸಿಕೊಂಡಿದ್ದ ವಿಕ್ರಮ್ ಚಿತ್ರದ ದಾಖಲೆಯನ್ನು ಮುರಿದು ಹಾಕಿದೆ.
ಹಾಗಿದ್ದರೆ ಕೇರಳ ಬಾಕ್ಸ್ ಆಫೀಸ್‌ನಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ತಮಿಳಿನ ಟಾಪ್ 5 ಚಿತ್ರಗಳು ಯಾವುವು ಎಂಬ ಮಾಹಿತಿ ಈ ಕೆಳಕಂಡ ಪಟ್ಟಿಯಲ್ಲಿದೆ.
1. ಜೈಲರ್ - 40.35 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ( 9 ದಿನಗಳಲ್ಲಿ )
2. ವಿಕ್ರಮ್ - 40.05 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್
3. ಪೊನ್ನಿಯಿನ್ ಸೆಲ್ವನ್ 1 - 24.2 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್
4. ಬಿಗಿಲ್ - 19.7 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್
5. ಐ - 19.65 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್
9 ದಿನಕ್ಕೆ ಜೈಲರ್ ಯಾವ ರಾಜ್ಯಗಳಲ್ಲಿ ಎಷ್ಟು ಗಳಿಸಿತು ಎಂಬ ಮಾಹಿತಿ:
ತಮಿಳುನಾಡು - 147 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್
ಕರ್ನಾಟಕ - 52 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್
ತೆಲುಗು ರಾಜ್ಯಗಳು - 59 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್
ಕೇರಳ - 40 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್
ಉತ್ತರ ಭಾರತ - 8 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್
ವಿದೇಶ - 162 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್
ಒಟ್ಟಾರೆ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಜೈಲರ್ 9 ದಿನಗಳಲ್ಲಿ ಮಾಡಿದ ಕಲೆಕ್ಷನ್: 468 ಕೋಟಿ


Click it and Unblock the Notifications











