Vinayakan: 'ಜೈಲರ್' ಸಿನಿಮಾ ಖಳನಟ ವಿನಾಯಕನ್ ಬಂಧನ

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಜೈಲರ್' ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿದ್ದ ನಟ ವಿನಾಯಕನ್ ಬಂಧನವಾಗಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಗಲಾಟೆ ಮಾಡಿದ ಆರೋಪದ ಮೇಲೆ ನಟ ವಿನಾಯಕನ್ ಅವರನ್ನು ಎರ್ನಾಕುಲಂ ನಗರ ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಕುಡಿದು ಬಂದು ಪೊಲೀಸ್ ಠಾಣೆಯಲ್ಲಿ ಗಲಾಟೆ ಮಾಡಿದ್ದ ಕಾರಣಕ್ಕೆ ನಟ ವಿನಾಯಕನ್ ಬಂಧನವಾಗಿದೆ. ತಾನು ಉಳಿದುಕೊಂಡಿದ್ದ ಅಪಾರ್ಟ್‌ಮೆಂಟ್‌ನಲ್ಲಿ ವಿನಾಯಕನ್ ಜೋರು ಶಬ್ಧ ಮಾಡಿ ತೊಂದರೆ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ನಟನನ್ನು ಠಾಣೆಗೆ ಹಾಜರಾಗುವಂತೆ ಹೇಳಿದ್ದರು. ಆದರೆ ಕುಡಿದು ಠಾಣೆಗೆ ಬಂದ ನಟ ಮತ್ತೆ ಗಲಾಟೆ ಮಾಡಿದ್ದಾರೆ ಎನ್ನಲಾಗ್ತಿದೆ. ನಟ ನಟನನ್ನು ವೈದ್ಯಕೀಯ ಪರೀಕ್ಷೆಗಾಗಿ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.

Jailer Fame Vinayakan arrested for creating nuisance at Ernakulam Police Station

ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ನಟನನ್ನು ಬಂಧಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ. ಸದ್ಯ ವಿನಾಯಕನ್ ಬಂಧನ ವಿಚಾರ ಕೇರಳದಲ್ಲಿ ಸದ್ದು ಮಾಡ್ತಿದೆ. ಪೊಲೀಸರು ನಟನ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದು ಮುಂದೆ ಏನಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. 'ಜೈಲರ್' ಚಿತ್ರದ ವರ್ಮನ್ ಪಾತ್ರದಲ್ಲಿ ವಿನಾಯಕನ್ ಗಮನ ಸೆಳೆದಿದ್ದರು.

ಕೊಚ್ಚಿ ಮೂಲಕ ವಿನಾಯಕನ್ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ 'ಜೈಲರ್' ಸಿನಿಮಾ ದೊಡ್ಡಮಟ್ಟದಲ್ಲಿ ಹೆಸರು ತಂದುಕೊಟ್ಟಿತ್ತು. ಮಲಯಾಳಂ, ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ವಿನಾಯಕನ್ ನಟಿಸಿದ್ದಾರೆ. ಸಣಕಲು ದೇಹ ಹಾಗೂ ರಗಡ್ ಲುಕ್‌ನಿಂದ ಗಮನ ಸೆಳೆಯುವ ವಿನಾಯಕನ್ ತಮ್ಮ ಅಭಿನಯದಿಂದಲೂ ಮೋಡಿ ಮಾಡಿದ್ದಾರೆ. 1995ರಲ್ಲಿ 'ಮಂತ್ರಿಕಂ' ಎನ್ನುವ ಮಲಯಾಳಂ ಚಿತ್ರದಲ್ಲಿ ಮೊದಲಿಗೆ ನಟಿಸಿದ್ದರು.

ಡ್ಯಾನ್ಸರ್ ಆಗಿ ಚಿತ್ರರಂಗಕ್ಕೆ ಬಂದ ವಿನಾಯಕನ್ ಬಳಿಕ ನಟನಾಗಿ ಭಡ್ತಿ ಪಡೆದಿದ್ದರು. ಇನ್ನು ನಟನೆಯ ಜೊತೆಗೆ ಆತನಿಗೆ ಸಂಗೀತದ ಬಗ್ಗೆಯೂ ಹೆಚ್ಚಿನ ಒಲವಿದೆ. ಒಂದೆರಡು ಹಾಡುಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿರುವ ವಿನಾಯಕನ್ ಹಾಡುಗಳನ್ನು ಹಾಡಿದ್ದಾರೆ. ನಟನೆಗಾಗಿ ಸಾಕಷ್ಟು ಪ್ರಶಸ್ತಿ ಗೌರವ ಕೂಡ ದಕ್ಕಿದೆ. ತೆರೆಮೇಲೆ ವಿಲನ್ ಪಾತ್ರಗಳಲ್ಲಿ ಅಬ್ಬರಿಸಿ ಸದ್ದು ಮಾಡುತ್ತಿದ್ದ ನಟ ಈಗ ತಪ್ಪು ಮಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿರುವುದು ಅಭಿಮಾನಿಗಳಿಗೆ ಬೇಸರ ತಂದಿದೆ.

ತಮಿಳಿನ 'ಧ್ರುವ ನಕ್ಷತ್ರಿರಂ' ಹಾಗೂ ಮಲಯಾಳಂನ 'ಕರಿತಾಂಡನ್' ಸೇರಿದಂತೆ ಒಂದಷ್ಟು ಸಿನಿಮಾಗಳು ವಿನಾಯಕನ್ ಕೈಯಲ್ಲಿವೆ. 'ಜೈಲರ್' ಸಿನಿಮಾ ಬಳಿಕ ಸಾಕಷ್ಟು ಅವಕಾಶಗಳು ಈ ಮಾಲಿವುಡ್ ನಟನನ್ನು ಅರಸಿ ಬರ್ತಿವೆ. ಇದೆಲ್ಲದರ ನಡುವೆ ಪೊಲೀಸ್ ಠಾಣೆಯಲ್ಲಿ ಗಟಾಟೆ ಮಾಡಿಕೊಂಡು ಪೊಲೀಸರ ಅತಿಥಿಯಾಗಿರುವುದು ವಿಪರ್ಯಾ.

More from Filmibeat

English summary
Jailer Fame Actor Vinayakan Has Been Arrested
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X