For Quick Alerts
  ALLOW NOTIFICATIONS  
  For Daily Alerts

  ಮತ್ತೆ ಒಂದಾಗುತ್ತಿದೆ 'ದೃಶ್ಯಂ' ಜೋಡಿ: ಈ ಬಾರಿ ಬೇರೆಯದ್ದೇ ಕತೆ

  |

  'ದೃಶ್ಯಂ' ಸಿನಿಮಾ ಮೂಲಕ ಮೋಡಿ ಮಾಡಿರುವ ಜೀತು ಜೋಸೆಫ್ ಹಾಗೂ ಮೋಹನ್‌ಲಾಲ್ ಜೋಡಿ ಈಗ ಮತ್ತೊಂದು ಅಂಥಹುದೇ ಸಿನಿಮಾಕ್ಕಾಗಿ ಒಂದಾಗುತ್ತಿದೆ.

  'ದೃಶ್ಯಂ', 'ದೃಶ್ಯಂ 2' ಸಿನಿಮಾಗಳ ಮೂಲಕ ಈ ಜೋಡಿ ಮೋಡಿಯನ್ನೇ ಮಾಡಿದೆ. ಇದೀಗ ಮತ್ತೊಂದು ಸಸ್ಪೆನ್ಸ್ ಸಿನಿಮಾ ಮಾಡಲಿದೆ ಈ ನಿರ್ದೇಶಕ-ನಟನ ಜೋಡಿ.

  ಹೊಸ ಸಿನಿಮಾವು 'ದೃಶ್ಯಂ' ಸಿನಿಮಾ ಸರಣಿಗಿಂತಲೂ ಭಿನ್ನವಾಗಿರಲಿದೆ ಮತ್ತು 'ದೃಶ್ಯಂ' ಜೊತೆಗೆ ಯಾವುದೇ ಸಂಭಂಧ ಹೊಂದಿರುವುದಿಲ್ಲ ಎಂದು ಚಿತ್ರತಂಡ ಹೇಳಿದೆ. ಸಿನಿಮಾವನ್ನು ಮೋಹನ್‌ಲಾಲ್‌ರ ಆತ್ಮೀಯ ಆಂಟೋನಿ ಪೆರವಂಬೂರ್ ನಿರ್ಮಾಣ ಮಾಡಲಿದ್ದಾರೆ.

  ಈ ಸಿನಮಾವು ನೇರವಾಗಿ ಒಟಿಟಿಯಲ್ಲಿ ಬಿಡಗುಡೆ ಆಗಲಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲು ನಿರಾಕರಿಸಿರುವ ನಿರ್ದೇಶಕ ಜೀತು ಜೋಸೆಫ್, ''ಸಿನಿಮಾವನ್ನು ಹೇಗೆ ಮತ್ತು ಎಲ್ಲಿ ಬಿಡುಗಡೆ ಮಾಡಬೇಕು ಎಂಬುದು ಪೂರ್ಣವಾಗಿ ನಿರ್ಮಾಪಕನ ನಿರ್ಧಾರ'' ಎಂದಿದ್ದಾರೆ.

  ಲಾಕ್‌ಡೌನ್ ಅಂತ್ಯವಾಗುತ್ತಲೇ ನಟ ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ 'ಬ್ರೋ ಡ್ಯಾಡಿ' ಸಿನಿಮಾದಲ್ಲಿ ಮೋಹನ್‌ಲಾಲ್ ನಟಿಸುತ್ತಾರೆ ಎನ್ನಲಾಗಿತ್ತು. ಆದರೆ ಮೋಹನ್‌ಲಾಲ್ ಮೊದಲಿಗೆ ಜೀತು ಜೋಸೆಫ್‌ ಜೊತೆಗೆ ಸಿನಿಮಾ ಮಾಡಲಿದ್ದಾರೆ. ಆ ನಂತರವೇ 'ಬ್ರೋ ಡ್ಯಾಡಿ' ಕಡೆಗೆ ಹೋಗಲಿದ್ದಾರೆ.

  ಅಪ್ಪು ಅಭಿಮಾನಿಗಳ ಖುಷಿ ಹೆಚ್ಚಿಸಿದ ವಿಜಯ್ ಕಿರಗಂದೂರ್ | Filmibeat Kannada

  ಮೋಹನ್‌ಲಾಲ್ ಅಭಿನಯದ ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ 'ಮರಕ್ಕರ್' ಆಗಸ್ಟ್ 12 ಕ್ಕೆ ಬಿಡುಗಡೆ ಆಗಲಿದೆ. ಅದರ ನಂತರ ಮೋಹನ್‌ಲಾಲ್ ಮೊದಲ ಬಾರಿಗೆ ನಿರ್ದೇಶಿಸಿರುವ 'ಬಾರೋಜ್' ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಮೋಹನ್‌ಲಾಲ್ ಜೊತೆಗೆ ಪೃಥ್ವಿರಾಜ್ ಸುಕುಮಾರನ್ ನಟಿಸಿದ್ದಾರೆ.

  English summary
  Director Jeethu Joseph and actor Mohanlal teaming up for a suspense thriller movie. This will be very different from Drishyam series.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X