ಸದ್ದಿಲ್ಲದೇ ಮನ ಮೆಚ್ಚಿದ ಹುಡುಗಿ ಜೊತೆ ಸರಳವಾಗಿ ರಿಜಿಸ್ಟರ್ ಮ್ಯಾರೇಜ್ ಆದ ನಟ..!

ದೊಡ್ಡವರ ಹಾಗೂ ದುಡ್ಡಿದ್ದವರ ಕುಟುಂಬಗಳ 'ಮದುವೆ' ಮತ್ತು 'ಮನೆ' ಎರಡೂ ಈಗ ಗಂಟೆ ಗಟ್ಟಲೆ 'ಬ್ರೇಕಿಂಗ್ ನ್ಯೂಸ್' ಆಗುವ ಕಾಲ ಘಟ್ಟವಿದು. ಉಳ್ಳವರು ಮಾಡುವ ಅದ್ಧೂರಿ ಮದುವೆಯ ಕಣ್ಣು ಕೋರೈಸುವಂತಹ ಆಚರಣೆಗಳು ಬಡ-ಮಧ್ಯಮ ವರ್ಗದ ಕುಟುಂಬಗಳ ಸಾವಿರಾರು ಹೆಣ್ಣು ಮಕ್ಕಳ ಮದುವೆಯ ಸನ್ನಿವೇಶ ನರಕಗೊಳಿಸುವುದಲ್ಲದೆ, ಮದುವೆಯ ನಂತರವೂ ಅವರ ಬದುಕಿನಲ್ಲಿ ಕತ್ತಲು ಕವಿಯುವಂತೆ ಮಾಡುತ್ತವೆ.

ಇಂತಹ ಕಾಲಘಟ್ಟದಲ್ಲಿ 'ಮದುವೆ' ಎಂಬ ಮೂರಕ್ಷರದ ನಂಟಿನ ಜತೆ ಎರಡು ಜೀವ ಬೆಸೆದುಕೊಳ್ಳಲು ಅಲ್ಲಲ್ಲಿ ಕೆಲವರು ಸರಳ ಮದುವೆಯನ್ನು ಮಾಡಿಕೊಳ್ಳುತ್ತಾರೆ. ಮಂತ್ರ ಮಾಂಗಲ್ಯ, ವಚನ ಮಾಂಗಲ್ಯ, ದೇಗುಲದಲ್ಲಿ ನಡೆಯುವ ಸರಳ ವಿವಾಹ, ರಿಜಿಸ್ಟರ್ಡ್‌ ಮದುವೆ, ಸಾಮೂಹಿಕ ವಿವಾಹ, ಗೋ ಗ್ರೀನ್‌ ಜಾಗೃತಿಯ ಪರಿಸರ ಮದುವೆಗಳು, ಹಳ್ಳಿಗಳಲ್ಲಿ ನಡೆಯುವ ಸರಳ ರೈತ ಮದುವೆಗಳು... ಹೀಗೆ ಹಲವು ರೀತಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ಉದಾಹರಣೆಗೆ ವಿಷ್ಣು ಗೋವಿಂದನ್ ಅವರ ಮದುವೆಯೇ ತೆಗೆದುಕೊಳ್ಳಿ.

just-married-malayalam-actor-vishnu-govindan-ties-the-knot-with-anjali-geetha-at-registrar-s-office

ಹೌದು, ವಿಷ್ಣು ಗೋವಿಂದನ್.. ಮಲಯಾಳಂ ಚಿತ್ರರಂಗದಲ್ಲಿ ಹೆಸರು ಮಾಡಿದ ವ್ಯಕ್ತಿ. ಒರು ಮೆಕ್ಸಿಕನ್ ಅಪರಥ ಚಿತ್ರದ ಮೂಲಕ ಕೇರಳದೆಲ್ಲೆಡೆ ಮನೆ ಮಾತಾದ ಕಲಾವಿದ. ಮಿಸ್ಟರ್ ಅಂಡ್ ಮಿಸ್ ರೌಡಿ, ವಲ್ಲಿ ಕುಡಿಲಿಲೆ ವೆಳ್ಳಕ್ಕರನ್, ಉಪಚಾರಪೂರ್ವಂ ಗುಂಡಜಯನ್, ಕುರಿ, ಅಟೆನ್ಶನ್ ಪ್ಲೀಸ್ ಮತ್ತು ಜಿಗರ್‌ತಾಂಡಾ ಡಬಲ್ ಎಕ್ಸ್ ಹೀಗೆ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ವಿಷ್ಣು ಗೋವಿಂದನ್ ಹಿಸ್ಟರಿ ಆಫ್ ಜಾಯ್ ಚಿತ್ರದ ನಿರ್ದೇಶಕ ಕೂಡ ಹೌದು.

ಇಂಥಾ ವಿಷ್ಣು ಗೋವಿಂದನ್ ಸದ್ಯ ಸದ್ದಿಲ್ಲದೇ ಸಪ್ತಪದಿಯನ್ನು ತುಳಿದಿದ್ದಾರೆ. ಸರಳವಾಗಿ ಅಂಜಲಿ ಗೀತಾ ಅವರ ಜೊತೆ ರಿಜಿಸ್ಟರ್ ಮದುವೆಯಾಗಿದ್ದಾರೆ. ಮೇ ಎರಡರಂದು ವಿಷ್ಣು ಗೋವಿಂದನ್ ಮತ್ತು ಅಂಜಲಿ ಅವರ ಮದುವೆ ನಡೆದಿದ್ದು, ಮದುವೆ ಸಮಾರಂಭದ ಫೋಟೊಗಳನ್ನು ವಿಷ್ಣು ಗೋವಿಂದನ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 2/5/25 ಸರಳ ಮತ್ತು ಸಿಹಿ ಎಂದು ಫೋಟೊಗಳಿಗೆ ಕ್ಯಾಪ್ಷನ್ ನೀಡಿದ್ದಾರೆ.

ಇನ್ನು ಗುರು ಹಿರಿಯರ ಸಮ್ಮುಖದಲ್ಲಿ ವಿಷ್ಣು ಗೋವಿಂದನ್ ಮದುವೆಯಾಗಿದ್ದು ಈ ಮದುವೆ ಸಮಾರಂಭದಲ್ಲಿ ಇಬ್ಬರ ಆಪ್ತ ಸ್ನೇಹಿತರು ಕೂಡ ಭಾಗವಹಿಸಿದ್ದರು. ಸದ್ಯ ಇವರೆಲ್ಲ ಕ್ಲಿಕಿಸಿಕೊಂಡ ಸೆಲ್ಫಿ ಫೋಟೊಗಳು ಅನೇಕರ ಗಮನ ಸೆಳೆಯುತ್ತಿದ್ದು ಹಲವಾರು ಜನ ನವ ಜೋಡಿಗೆ ಶುಭಾಶಯವನ್ನು ಕೋರುತ್ತಿದ್ದಾರೆ.ಇಬ್ಬರದ್ದು ಹೇಳಿ ಮಾಡಿಸಿದ ಜೋಡಿ ಎನ್ನುತ್ತಿದ್ದಾರೆ. ಆಡಂಬರದ ಮದುವೆಗೆ ಬ್ರೇಕ್ ಹಾಕಿ ಸರಳವಾಗಿ ಮದುವೆಯಾಗಿದ್ದಕ್ಕೆ ಕೂಡ ಹಲವಾರು ಜನ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.

ಮಲಯಾಳಂ ಸ್ಟಾರ್ ಟೋವಿನೋ ಥಾಮಸ್ ಕೂಡ ವಿಷ್ಣು ಗೋವಿಂದನ್ ಅವರಿಗೆ ಶುಭಾಶಯವನ್ನು ಹೇಳಿದ್ದಾರೆ. ನೀರಜ್ ಮಾಧವ್, ಅನುಮೋಲ್, ಅಶ್ವಿನ್ ಕುಮಾರ್, ಗಣಪತಿ ಹೀಗೆ ಚಿತ್ರರಂಗದ ಹಲವಾರು ಜನ ಕೂಡ ಕಾಮೆಂಟ್ ಮಾಡಿದ್ದಾರೆ. ತಮ್ಮ ಮದುವೆಯ ವಿಡಿಯೋವನ್ನು ಕೂಡ ವಿಷ್ಣು ಗೋವಿಂದನ್ ಹಂಚಿಕೊಂಡಿದ್ದು ಕೇವಲ ಪ್ರೀತಿ, ಯಾವುದೇ ಗಡಿಬಿಡಿ ಇಲ್ಲ, ಎರಡು ಹೃದಯಗಳು, ಪಕ್ಕದಲ್ಲಿ ಪೋಷಕರು ಎಂದು ಬರೆದುಕೊಂಡಿದ್ದಾರೆ.

ಒಟ್ನಲ್ಲಿ ಮದುವೆ ಎಂಬುದು ಗಂಡು ಮತ್ತು ಹೆಣ್ಣು ಬದುಕಿನುದ್ದಕ್ಕೂ ಒಟ್ಟಿಗೆ ಸಾಗಬೇಕಿರುವ ದಾರಿ. ಈ ಪ್ರಯಾಣ ತುಂಬಾ ಪರಸ್ಪರ ಪ್ರೀತಿ, ನಂಬಿಕೆ, ಮತ್ತು ವಿಶ್ವಾಸಗಳೇ ಗಟ್ಟಿ ಬೇರುಗಳಾಗಬೇಕು. ಮದುವೆ ಖಾಸಗಿ ಮತ್ತು ಭಾವಾನಾತ್ಮಕ ವಿಚಾರವೇನೋ ಸರಿ. ಆದರೆ, ಅದು ಧ್ವನಿಸುವ ಸಂದೇಶ ಸಮಾಜದ ಮಟ್ಟಿಗೆ ದೊಡ್ಡದು. ಅದೇ ಕಾರಣಕ್ಕೆ ಪ್ರತಿಷ್ಠೆ, ಅಂತಸ್ತನ್ನು ಪ್ರದರ್ಶನಕ್ಕೆ ಇಡುವಂತೆ ಅದ್ಧೂರಿ ಮದುವೆಗಳು ನಡೆಯುತ್ತಿರುವ ಹೊತ್ತಲ್ಲೇ ಹೀಗೆ ನಡೆಯುವ ಸರಳ ಮದುವೆಗಳು ಮಹತ್ವ ಪಡೆದುಕೊಳ್ಳುತ್ತವೆ ಎಂದರೆ ತಪ್ಪಾಗಲಿಕ್ಕಿಲ್ಲ.

More from Filmibeat

English summary
Malayalam actor Vishnu Govindan, who rose to fame with his notable performance in Oru Mexican Aparatha, has entered into matrimony. The actor tied the knot with Anjali Geetha in a modest and intimate ceremony held on May 2, 2025. The wedding took place at the Cherthala Sub-Registrar Office in Kerala, attended by close family members and friends.
Read more about: marriage mollywood wedding
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X