ಮೋಹನ್ ಲಾಲ್ ಸೊಸೆಯಾಗ್ತಾರಾ 'ಲೋಕಃ' ಸುಂದರಿ ಕಲ್ಯಾಣಿ ? ಕೊನೆಗೂ ಸಿಕ್ತು ಉತ್ತರ

ಬಣ್ಣದ ಲೋಕ ಅಂದರೆ ಅದು ಸತ್ಯ-ಮಿಥ್ಯದ ಸಂಘರ್ಷ. ಇಲ್ಲಿ ದಿನಕ್ಕೊಂದು ಸುದ್ದಿಯ ಉಗಮವಾಗುತ್ತೆ. ಆ ಪೈಕಿ ಕೆಲವು ಸತ್ಯ ಆದರೆ ಇನ್ನೂ ಕೆಲವು ಕೇವಲ ಅಂತೆ-ಕಂತೆಗಷ್ಟೇ ಸೀಮಿತವಾಗುತ್ತವೆ. ಆದರೂ ಕೂಡ ಈ ಸುದ್ದಿಗಳೇ ಚಿತ್ರರಂಗದ ಜೀವಾಳ. ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸುವ ಈ ಸುದ್ದಿಗಳಲ್ಲಿ ಲವ್ ಮತ್ತು ಬ್ರೇಕಪ್‌ ಕಥೆಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಯಾರಾದರೂ ಜೊತೆಯಾಗಿ ಕಾಣಿಸಿಕೊಂಡರೆ ಸಾಕು ಇಬ್ಬರ ನಡುವೆ ಪ್ರೇಮಾಂಕುರವಾಗಿದೆ ಎನ್ನುವ ಪುಕಾರು ಹಬ್ಬುತ್ತೆ.

ಕೆಲ ಒಮ್ಮೆ ಹೀಗೆ ಹಬ್ಬಿದ ಸುದ್ದಿ ನಿಜಾ ಕೂಡ ಆಗಿದೆ. ಉದಾಹರಣೆಗೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ. ಇನ್ನೂ ಕೆಲ ಒಮ್ಮೆ ಈ ಸುದ್ದಿಗಳಲ್ಲಿ ಯಾವ ಸತ್ಯಾಂಶವೂ ಇರುವುದಿಲ್ಲ. ಸುಖಾ ಸುಮ್ಮನೆ ಸುದ್ದಿಗಳನ್ನು ಇಲ್ಲಿ ತೇಲಿ ಬಿಡಲಾಗಿರುತ್ತೆ. ತಮ್ಮ ಕುರಿತು ಹಬ್ಬಿರುವ ಇಂತಹ ಸುದ್ದಿಗಳನ್ನು ಕಂಡು ಕೆಲ ತಾರೆಯರು, ಅವರ ಮನೆಯ ಸದಸ್ಯರು ಉರಿದು ಬಿದ್ದಿದ್ದು ಇದೆ. ಉದಾಹರಣೆಗೆ ಕಲ್ಯಾಣಿ ಪ್ರಿಯದರ್ಶನ್ ಅವರ ಮದುವೆ ವಿಚಾರವನ್ನೇ ತೆಗೆದುಕೊಳ್ಳಿ.

Kalyani Priyadarshan amp amp Pranav Mohanlal Marriage Rumors The Lokah Star s Mother Breaks Silence

ಹೌದು, ಕಲ್ಯಾಣಿ ಪ್ರಿಯದರ್ಶನ್ .. ಪುರುಷ ಪ್ರಧಾನ ಚಿತ್ರರಂಗದಲ್ಲಿ ಮಹಿಳಾ ಕಥೆಯನ್ನಾಧರಿಸಿದ ''ಲೋಕ : ಚಾಪ್ಟರ್ 1'' ಚಿತ್ರದ ಮೂಲಕ ಎಲ್ಲರನ್ನು ನಿಬ್ಬೇರಗಾಗಿಸಿದ ಚೆಲುವೆ. ಮಲಯಾಳಂ ಚಿತ್ರರಂಗದ ಇತಿಹಾಸದಲ್ಲಿಯೇ 300 ಕೋಟಿ ಹಣವನ್ನು ಕೊಳ್ಳೆ ಹೊಡೆದ ಮೊದಲ ಚಿತ್ರ ಎನ್ನುವ ಹೆಗ್ಗಳಿಕೆ ಈ ಚಿತ್ರಕ್ಕಿದೆ.

2017ರಲ್ಲಿ ''ಹಲೋ'' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಕಲ್ಯಾಣಿ ಇಲ್ಲಿಯವರೆಗೆ 3 ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡಿದ್ದಾರೆ. 2 ಸೂಪರ್ ಹಿಟ್ ಮತ್ತೊಂದು ಹಿಟ್ ಚಿತ್ರಗಳನ್ನು ಕೂಡ ನೀಡಿದ್ದಾರೆ. ಮಲಯಾಳಂ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಮಿಂಚಿದ್ದಾರೆ.

ನಿಜಾ, ಕಲ್ಯಾಣಿ ಅವರ ತಂದೆ ಬೇರೆ ಯಾರು ಅಲ್ಲ, ಬದಲಿಗೆ ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಪ್ರಿಯದರ್ಶನ್ ಅವರ ಮಗಳು. ಇವರ ತಾಯಿ ಲಿಸ್ಸಿ ಲಕ್ಷ್ಮೀ ರಕ್ತದಲ್ಲಿ ಕೂಡ ಕಲೆಯೇ ಇದೆ. ತಂದೆ-ತಾಯಿಯ ಈ ಪ್ರಭಾವಳಿಯಿಂದ ಕಲ್ಯಾಣಿ ಪಾಲಿಗೆ ಚಿತ್ರರಂಗದ ಭಾಗಿಲು ಸುಲಭವಾಗಿ ತೆರೆದಿರಬಹುದು. ಆದರೆ. ಆ ನಂತರ ಕಲ್ಯಾಣಿ ಸಾಧನೆಯ ಕಂಬವನ್ನೇರಿದ್ದು ತನ್ನ ಪರಿಶ್ರಮದಿಂದಲೇ. ಇದನ್ನು ಯಾರು ಅಲ್ಲಗೆಳೆಯಲು ಸಾಧ್ಯ ಇಲ್ಲ

ಇಂಥಾ ಕಲ್ಯಾಣಿ ಪ್ರಿಯದರ್ಶನ್ ಸದ್ಯ ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರ ಮನೆಯ ಸೊಸೆಯಾಗಲಿದ್ದಾರೆ, ಮೋಹನ್ ಲಾಲ್ ಅವರ ಮಗ ಪ್ರಣವ್ ಜೊತೆ ಕಲ್ಯಾಣಿ ಶೀಘ್ರದಲ್ಲಿಯೇ ಸಪ್ತಪದಿಯನ್ನು ತುಳಿಯಲಿದ್ದಾರೆ ಎನ್ನುವ ಸುದ್ದಿ ಸದ್ಯ ಗುಲ್ಲಾಗಿದೆ. ಕಲ್ಯಾಣಿಯ ಮದುವೆಯ ಸುತ್ತ ಮುತ್ತ ಕೇರಳಿಗರಲ್ಲಿ ಕುತೂಹಲ ಮನೆ ಮಾಡಿದೆ.

Kalyani Priyadarshan amp amp Pranav Mohanlal Marriage Rumors The Lokah Star s Mother Breaks Silence

ಇದಕ್ಕೆ ಪೂರಕವಾಗಿ ಕಲ್ಯಾಣಿ ಮತ್ತು ಪ್ರಣವ್ ಜೊತೆಯಲ್ಲಿಯೇ ಎರಡು ಚಿತ್ರಗಳನ್ನು ಮಾಡಿದ್ದಾರೆ. ಆ ಪೈಕಿ 2022ರಲ್ಲಿ ಬಂದ ''ಹೃದಯಂ'' ಬ್ಲಾಕ್‌ಬಸ್ಟರ್ ಆದರೆ 2024ರಲ್ಲಿ ಬಂದ ''ವರ್ಷಂಗಲ್ಕು ಶೇಷಂ'' ಚಿತ್ರ ಸೂಪರ್ ಹಿಟ್ ಸ್ಥಾನವನ್ನು ಅಲಂಕರಿಸಿದೆ.

ಇನ್ನು ಪ್ರಣವ್ ಮತ್ತು ಕಲ್ಯಾಣಿ ಬಾಲ್ಯದ ಗೆಳೆಯರು. ಎಲ್ಲಕ್ಕಿಂತ ಮುಖ್ಯವಾಗಿ ಮೋಹನ್ ಲಾಲ್ ಮತ್ತು ಪ್ರಿಯದರ್ಶನ್ ನಡುವೆ ಗಳಸ್ಯ ಕಂಠಸ್ಯ ಸ್ನೇಹ ಇದೆ. 45 ಬಾರಿ ಮೋಹನ್ ಲಾಲ್‌ಗೆ ಆಕ್ಷನ್ ಕಟ್ ಹೇಳಿದ ಹೆಗ್ಗಳಿಕೆ ಪ್ರಿಯದರ್ಶನ್ ಅವರಿಗಿದೆ.

ಈ ಎಲ್ಲ ಕಾರಣಗಳಿಂದ ಕಲ್ಯಾಣಿ ಮತ್ತು ಪ್ರಣವ್ ಮದುವೆಯಾಗಲಿದ್ದಾರೆ, ಹೊಸ ಬದುಕಿಗೆ ಶೀಘ್ರದಲ್ಲಿಯೇ ಮುನ್ನುಡಿ ಬರೆಯಲಿದ್ದಾರೆ ಎನ್ನುವ ಸುದ್ದಿ ಸದ್ಯ ಹಬ್ಬಿದೆ. ಇಷ್ಟೇ ಅಲ್ಲ ಕಲ್ಯಾಣಿ ಅವರ ತಾಯಿ ಲಿಸ್ಸಿ, ವಿಷು ಹಬ್ಬದ ಪ್ರಯುಕ್ತ ಶುಭ ಕೋರಿದರೆ ಅಲ್ಲಿಯೂ ಬಂದು ಕಲ್ಯಾಣಿ ಮತ್ತು ಪ್ರಣವ್ ಮದುವೆ ಚರ್ಚೆಯನ್ನು ಸದ್ಯ ಕೇರಳ ಚಿತ್ರ ರಸಿಕರು ಮಾಡಿದ್ದಾರೆ.

ಹೀಗಾಗಿಯೇ ವದಂತಿಗಳಿಗೆ ಬ್ರೇಕ್ ಹಾಕುವ ಕೆಲಸವನ್ನು ಲಿಸ್ಸಿ ಲಕ್ಷ್ಮಿ ಮಾಡಿದ್ದು ತಮ್ಮ ಮಗಳ ಮದುವೆಯ ಕುರಿತು ಹರಿದಾಡುತ್ತಿರುವ ಸುದ್ದಿ ಸಂಪೂರ್ಣ ಸುಳ್ಳು ಎಂದು ಹೇಳಿದ್ದಾರೆ. ಈ ಮೂಲಕ ಕೇವಲ ಊಹಾಪೋಹಗಳಷ್ಟೇ ಎಂಬ ಸಂದೇಶವನ್ನು ರವಾನೆ ಮಾಡಿದ್ದಾರೆ. ಇನ್ನಾದರೂ ಇವರ ಮದುವೆ ಚರ್ಚೆಗೆ ಪೂರ್ಣ ವಿರಾಮ ಬೀಳುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

Kalyani Priyadarshan amp amp Pranav Mohanlal Marriage Rumors The Lokah Star s Mother Breaks Silence

English summary
Lissy Lakshmi shuts down Kalyani Priyadarshan and Pranav Mohanlal marriage rumors. Stop the speculation—see why the actress's mother is calling it "false news" once and for all.` `
Read more about: mohan lal rumours mollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X