Pushpa 2 vs Kantara 1; 'ಪುಷ್ಪ'- 2 ಮಾಡದ ಆ ದಾಖಲೆ ಮಾಡಿ 4ನೇ ಸ್ಥಾನಕ್ಕೇರಿದ 'ಕಾಂತಾರ- 1'

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ- 1' ಸಿನಿಮಾ ನಾನಾ ದಾಖಲೆಗಳನ್ನು ಬರೆದಿದೆ. 2 ವಾರಕ್ಕೆ ಸಿನಿಮಾ 717 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡ ಅಧಿಕೃತ ದಾಖಲೆ ನೀಡಿದೆ. 3 ನೇ ವಾರವೂ ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದ್ದು ಹಲವು ದಾಖಲೆ ನಿರ್ಮಾಣ ಮಾಡ್ತಿದೆ.

'ಕಾಂತಾರ- 1' ಸಿನಿಮಾ 1000 ಕೋಟಿ ರೂ. ಕಲೆಕ್ಷನ್ ಮಾಡುವ ಲೆಕ್ಕಾಚಾರ ನಡೆದಿತ್ತು. ಆದರೆ ಅದು ಕಷ್ಟಸಾಧ್ಯ ಎನ್ನುವಂತಾಗಿದೆ. ಆದರೂ ಕನ್ನಡ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡ್ತಿದೆ. ಬಾಕ್ಸಾಫೀಸ್‌ ಗಳಿಕೆಗಿಂತ ಪ್ರೇಕ್ಷಕರ ಮನಗೆಲ್ಲುವಲ್ಲಿ ಸಕ್ಸಸ್ ಕಂಡಿದೆ. ಚಿತ್ರಕ್ಕೆ ಬಹುತೇಕ ಪಾಸಿಟಿವ್ ರೆಸ್ಪಾನ್ಸ್ ಇದೆ. ಸಾಮಾನ್ಯವಾಗಿ ದೊಡ್ಡ ಸಿನಿಮಾಗಳು ಬಂದಾಗ ಬೇರೆ ಸಿನಿಮಾಗಳ ಕಲೆಕ್ಷನ್ ಜೊತೆ ಹೋಲಿಕೆ ಮಾಡಿ ಚರ್ಚೆ ನಡೆಸುವುದು ಸಾಮಾನ್ಯ.

Kantara-1 Beats Pushpa-2 in Kerala Rishab Shetty Outshines Allu Arjun in South Box Office Battle

'ಕಾಂತಾರ- 1' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡುತ್ತಿದ್ದಂತೆ ಕೆಲ ಸಿನಿಮಾಗಳ ಜೊತೆ ಹೋಲಿಕೆ ಮಾಡಲಾಯಿತು. ತೆಲುಗಿನ 'ಪುಷ್ಪ'- 2 ಕಲೆಕ್ಷನ್ ಜೊತೆಗೂ ಕೆಲವರು ಹೋಲಿಸಿದ್ದರು. ಪುಷ್ಪರಾಜ್ ಆಗಿ ಅಲ್ಲು ಅರ್ಜುನ್ ಹಾಗೂ ಬೆರ್ಮೆ ಆಗಿ ರಿಷಬ್ ಶೆಟ್ಟಿ ಇಬ್ಬರಲ್ಲಿ ಯಾರ ನಟನೆ ಚೆನ್ನಾಗಿದೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿತ್ತು. ಇದರಲ್ಲಿ ರಿಷಬ್ ಶೆಟ್ಟಿ ಗೆದ್ದು ಬೀಗಿದ್ದಾರೆ. ತೆಲುಗು ಪ್ರೇಕ್ಷಕರೇ ರಿಷಬ್ ನಟನೆಗೆ ಬಹುಪರಾಕ್ ಎನ್ನುತ್ತಿದ್ದಾರೆ.

'ಪುಷ್ಪ'-2 ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಆದರೂ ಬಾಕ್ಸಾಫೀಸ್‌ನಲ್ಲಿ ಸಖತ್ ಸದ್ದು ಮಾಡಿತ್ತು. ಉತ್ತರ ಭಾರತದಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿತ್ತು. ವಿಶ್ವದಾದ್ಯಂತ 1700 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಚಿತ್ರತಂಡ ಮಾಹಿತಿ ನೀಡಿತ್ತು. ಪುಷ್ಪರಾಜ್ ಅವತಾರದಲ್ಲಿ ಅಲ್ಲು ಅರ್ಜುನ್ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು.

Kantara-1 Beats Pushpa-2 in Kerala Rishab Shetty Outshines Allu Arjun in South Box Office Battle

ದೇಶವಿದೇಶಗಳಲ್ಲಿ 'ಪುಷ್ಪ'- 2 ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಆದರೆ ಕೇರಳದಲ್ಲಿ ಪುಷ್ಪರಾಜ್ ಆಟ ನಡೆಯಲಿಲ್ಲ. ಅಂದಹಾಗೆ ಕೇರಳದಲ್ಲಿ ಅಲ್ಲು ಅರ್ಜುನ್‌ಗೆ ದೊಡ್ಡ ಅಭಿಮಾನಿ ಬಳಗವಿದ್ದು ಭಾರೀ ಕ್ರೇಜ್ ಇದೆ. ಅವರನ್ನು ಮಲ್ಲು ಅರ್ಜುನ್ ಎಂದು ಅಲ್ಲಿನ ಅಭಿಮಾನಿಗಳು ಕರೆಯುತ್ತಾರೆ. ಆದರೆ ಯಾಕೋ 'ಪುಷ್ಪ' ಸರಣಿ ಸಿನಿಮಾಗಳು ಅಲ್ಲಿ ಸದ್ದು ಮಾಡಲಿಲ್ಲ.

'ಕಾಂತಾರ' ಹಾಗೂ ಪ್ರೀಕ್ವೆಲ್ ಎರಡಕ್ಕೂ ಕೇರಳದಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಚಾಪ್ಟರ್- 1 ಅಂದಾಜು 50 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ. ಈ ಮೂಲಕ ದಕ್ಷಿಣ ಭಾರತದ 4 ರಾಜ್ಯಗಳಲ್ಲಿ 50 ಕೋಟಿ ರೂ. ಕಲೆಕ್ಷನ್ ಮಾಡಿದ ಸಿನಿಮಾ ಎನ್ನುವ ಹೆಗ್ಗಳಿಕೆಗೆ ರಿಷಬ್ ಶೆಟ್ಟಿ ಸಿನಿಮಾ ಪಾತ್ರವಾಗಿದೆ. ಆದರೆ 'ಪುಷ್ಪ'-2 ಈ ವಿಚಾರದಲ್ಲಿ ಹಿಂದೆ ಬಿದ್ದಿತ್ತು. ಅಲ್ಲು ಅರ್ಜುನ್ ಸಿನಿಮಾ ಕೇರಳದಲ್ಲಿ 15ರಿಂದ 20 ಕೋಟಿ ರೂ. ಮಾತ್ರ ಗಳಿಕೆ ಕಂಡಿತ್ತು.

'ಬಾಹುಬಲಿ- 2', 'ಕೆಜಿಎಫ್- 2' ಹಾಗೂ 'ಜೈಲರ್' ಬಳಿಕ ದಕ್ಷಿಣದ 4 ಸಿನಿಮಾ ಮಾರ್ಕೆಟ್‌ನಲ್ಲಿ 50 ಕೋಟಿ ರೂ. ಕಲೆಕ್ಷನ್ ಮಾಡಿದ ಸಿನಿಮಾ ಎನ್ನುವ ಪಟ್ಟಿಗೆ 'ಕಾಂತಾರ- 1 ಸೇರಿಕೊಂಡಿದೆ. ಇನ್ನು 17ನೇ ದಿನವೂ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. 3ನೇ ವೀಕೆಂಡ್ ಹಾಗೂ ದೀಪಾವಳಿ ಹಬ್ಬದ ರಜೆ ಚಿತ್ರಕ್ಕೆ ವರವಾಗುವ ಸುಳಿವು ಸಿಕ್ಕಿದೆ. ಈ ವರ್ಷ ಅತಿಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರುವ ಎಲ್ಲಾ ಅವಕಾಶ ರಿಷಬ್ ಶೆಟ್ಟಿ ಚಿತ್ರಕ್ಕಿದೆ.

ವಿಕ್ಕಿ ಕೌಶಲ್ ನಟನೆಯ 'ಛಾವ' ಸಿನಿಮಾ 800 ಕೋಟಿ ರೂ. ಗಳಿಕೆ ಕಂಡು ವರ್ಷದ ಅತಿದೊಡ್ಡ ಹಿಟ್ ಸಿನಿಮಾ ಎನಿಸಿಕೊಂಡಿದೆ. ಇನ್ನು 70 ಕೋಟಿ ರೂ. ಗಳಿಸಿದರೆ ಆ ದಾಖಲೆಯನ್ನು 'ಕಾಂತಾರ- 1' ಮುರಿದು ಮೊದಲ ಸ್ಥಾನಕ್ಕೆ ಏರಲಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X