Karthika Nair: ಸದ್ದಿಲ್ಲದೇ 'ಬೃಂದಾವನ' ನಟಿ ಕಾರ್ತಿಕಾ ನಿಶ್ಚಿತಾರ್ಥ..! ಹುಡುಗ ಯಾರು?

ಖ್ಯಾತ ನಟಿ ರಾಧಾ ಪುತ್ರಿ ಕಾರ್ತಿಕಾ ನಾಯರ್ ಒಂದಷ್ಟು ಸಿನಿಮಾಗಳಲ್ಲಿ ನಟಿಸಿ ಅದೃಷ್ಟ ಪರೀಕ್ಷೆ ಮಾಡಿಕೊಂಡರು. ಈ ಕೇರಳ ಚೆಲುವೆಗೆ ಚಿತ್ರರಂಗದಲ್ಲಿ ದೊಡ್ಡ ಬ್ರೇಕ್ ಸಿಗಲಿಲ್ಲ. ಕನ್ನಡದ ಒಂದು ಚಿತ್ರದಲ್ಲೂ ಕಾರ್ತಿಕಾ ಮಿಂಚಿದ್ದರು. ಇದೀಗ ಸದ್ದಿಲ್ಲದೇ ಆಕೆ ಉಂಗುರ ಬದಲಿಸಿಕೊಂಡು ಮದುವೆಗೆ ಸಜ್ಜಾಗಿದ್ದಾರೆ ಎನ್ನಲಾಗ್ತಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬ ವ್ಯಕ್ತಿಯನ್ನು ತಬ್ಬಿಕೊಂಡು ಕೈಗೆ ಹಾಕಿಕೊಂಡಿರುವ ಉಂಗುರ ಹೈಲೆಟ್ ಮಾಡಿ ಕಾರ್ತಿಕಾ ಪೋಸ್ಟ್ ಮಾಡಿದ್ದಾರೆ. ಆದರೆ ಎಂಗೇಜ್‌ಮೆಂಟ್ ಆಗಿರುವ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಪರೋಕ್ಷವಾಗಿ ಆಕೆ ತನ್ನ ನಿಶ್ಚಿತಾರ್ಥದ ವಿಚಾರವನ್ನು ಈ ರೀತಿ ಹೇಳಿದ್ದಾರೆ ಎನ್ನಲಾಗ್ತಿದೆ. ಸದ್ಯ ಆಕೆಯ ಪೋಸ್ಟ್ ವೈರಲ್ ಆಗ್ತಿದ್ದು ಹುಡುಗ ಯಾರು ಎನ್ನುವ ಚರ್ಚೆ ನಡೀತಿದೆ.

Karthika Nair Flaunts Her Ring; Fans Wonder If She Is Engaged

ಅಭಿಮಾನಿಗಳು ಕಾರ್ತಿಕಾ ನಾಯರ್‌ಗೆ ಕಂಗ್ರಾಟ್ಸ್ ಹೇಳುತ್ತಿದ್ದಾರೆ. ಮುಂದಿನ ವರ್ಷ ಆಕೆ ಹೊಸ ಬಾಳಿಗೆ ಕಾಲಿಡುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ. ಇತ್ತೀಚೆಗೆ ಕಾರ್ತಿಕಾ ಚಿತ್ರರಂಗದಲ್ಲಿ ಆಕ್ಟೀವ್ ಆಗಿ ಇಲ್ಲ. ಅವಕಾಶಗಳು ಸಿಗದ ಕಾರಣ ಆಕೆ ಬಣ್ಣದ ಲೋಕದಿಂದ ದೂರ ಉಳಿದಿದ್ದಾರೆ. ಇದೀಗ ಹಸೆಮಣೆ ಏರಲು ಸಜ್ಜಾಗಿದ್ದಾರೆ ಎನ್ನುವ ಚರ್ಚೆ ನಡೀತಿದೆ.

ಕಾರ್ತಿಕಾ ನಾಯರ್‌ ಲವ್ ಮ್ಯಾರೇಜ್ ಮ್ಯಾರೇಜ್ ಮಾಡಿಕೊಳ್ಳುತ್ತಿದ್ದಾರಾ? ಅಥವಾ ಇದು ಪೋಷಕರು ನೋಡಿ ಮಾಡುತ್ತಿರುವ ಮದುವೆನಾ? ಎನ್ನುವ ಚರ್ಚೆ ಕೂಡ ಇದೆ. ಆದರೆ ಈ ಬಗ್ಗೆ ಆಕೆಯ ಕುಟುಂಬ ಸದಸ್ಯರಿಂದ ಯಾವುದೇ ಮಾಹಿತಿ ಸಿಕ್ಕಿಲ್ಲ. ತೆಲುಗಿನ 'ಜೋಶ್' ಸಿನಿಮಾ ಮೂಲಕ ಕಾರ್ತಿಕಾ ಚಿತ್ರರಂಗಕ್ಕೆ ಬಂದರು. ಇದು ನಾಗಾರ್ಜುನ ಪುತ್ರ ನಾಗ ಚೈತನ್ಯಾಗೂ ಮೊದಲ ಸಿನಿಮಾ ಆಗಿತ್ತು. ಆದರೆ ಸಿನಿಮಾ ಹೀನಾಯವಾಗಿ ಸೋಲುಂಡಿತ್ತು.

'ಜೋಶ್' ಬಳಿಕ ನಟಿಸಿದ 'ಕೋ' ಸಿನಿಮಾ ಸಕ್ಸಸ್ ಕಂಡಿತ್ತು. ತೆಲುಗಿಗೂ ಡಬ್ ಆಗಿ ಸಿನಿಮಾ ಗೆದ್ದಿತ್ತು. ಬಳಿಕ ಜ್ಯೂ. ಎನ್‌ಟಿಆರ್ ಜೋಡಿಯಾಗಿ 'ಧಮ್ಮು' ಚಿತ್ರದಲ್ಲಿ ಕಾರ್ತಿಕಾ ಮಿಂಚಿದರು. ಕನ್ನಡದಲ್ಲಿ ದರ್ಶನ್ ನಟನೆಯ 'ಬೃಂದಾವನ' ಚಿತ್ರದಲ್ಲಿ ಕಾರ್ತಿಕಾ ನಾಯಕಿಯಾಗಿ ಮಿಂಚಿದ್ದರು. 2013ರಲ್ಲಿ ಸಿನಿಮಾ ತೆರೆಗೆ ಬಂದಿತ್ತು. ತೆಲುಗಿನಲ್ಲಿ ಇದೇ ಹೆಸರಿನಲ್ಲಿ ಬಂದಿದ್ದ ಸಿನಿಮಾ ಸೂಪರ್ ಸಕ್ಸಸ್ ಕಂಡಿತ್ತು. ಆದರೆ ಕನ್ನಡದಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ.

Karthika Nair Flaunts Her Ring; Fans Wonder If She Is Engaged

'ಬೃಂದಾವನ' ಬಳಿಕ ಒಂದು ತೆಲುಗು, ಒಂದು ತಮಿಳು ಸಿನಿಮಾದಲ್ಲಿ ಮಾತ್ರ ಕಾರ್ತಿಕಾ ನಟಿಸಿದರು. ಆ ನಂತರ ಚಿತ್ರರಂಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಬಹಳ ದಿನಗಳ ಬಳಿಕ ನಿಶ್ಚಿತಾರ್ಥದ ಸುದ್ದಿಯಿಂದ ಮತ್ತೆ ಕಾರ್ತಿಕಾ ಸದ್ದು ಮಾಡುತ್ತಿದ್ದಾರೆ.

ಕಾರ್ತಿಕಾ ತಾಯಿ ರಾಧಾ ಪಂಚಭಾಷೆ ತಾರೆಯಾಗಿ ಮೆರೆದವರು. 80ರ ದಶಕದಲ್ಲಿ ಕಮಲ್ ಹಾಸನ್, ಚಿರಂಜೀವಿ, ವಿಷ್ಣುವರ್ಧನ್‌ರಂತಹ ಸ್ಟಾರ್ ನಟರ ಜೊತೆ ಬಣ್ಣ ಹಚ್ಚಿ ಗೆದ್ದಿದ್ದರು. ಕನ್ನಡದಲ್ಲಿ 'ರಣಚಂಡಿ', 'ಸೌಭಾಗ್ಯಲಕ್ಷ್ಮೀ', 'ಸಾವಿರ ಸುಳ್ಳು' ಸೇರಿ ಐದಾರು ಸಿನಿಮಾಗಳಲ್ಲಿ ರಾಧಾ ನಟಿಸಿದ್ದಾರೆ. ರಾಧಾ ಸಹೋದರಿ ಅಂಬಿಕಾ ಕೂಡ ಸ್ಟಾರ್ ನಟಿಯಾಗಿ ಮೆರೆದವರು.

More from Filmibeat

English summary
Karthika Nair engaged? Actress drops hint flaunting her engagement ring with mysterious man
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X