'ಮರಕ್ಕರ್' ಮೊದಲ ನೋಟದಲ್ಲೇ ಹೃದಯ ಕದ್ದ ಕೀರ್ತಿ ಸುರೇಶ್
ರಾಷ್ಟ್ರ ಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್ ಮಲಯಾಳಂ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸೂಪರ್ ಸ್ಟಾರ್ ಮೋಹನ್ ಲಾಲ್ ಅಭಿನಯದ 'ಮರಕ್ಕರ್: ಅರಬಿಕಡಲಿಂಟೆ ಸಿಂಹಮ್' ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಇದೀಗ, ಮರಕ್ಕರ್ ಚಿತ್ರದಲ್ಲಿ ಕೀರ್ತಿ ಸುರೇಶ್ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಮರಕ್ಕರ್ ಚಿತ್ರದ ಹೊಸ ಪೋಸ್ಟರ್ ಬಹಿರಂಗವಾಗಿದ್ದು, ಈ ಪೋಸ್ಟರ್ ನಲ್ಲಿ ಮೋಹನ್ ಲಾಲ್ ವಾರಿಯರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ರೆ, ಕೀರ್ತಿ ಸುರೇಶ್ ಸಂಪ್ರದಾಯಸ್ಥ ಯುವತಿಯಾಗಿ ಬಣ್ಣ ಹಚ್ಚಿದ್ದಾರೆ. ಕೆಂಪು ಬಣ್ಣದ ಸೀರೆ, ಆಭರಣ, ಹಣೆಯಲ್ಲಿ ಬಿಂದಿಯಿಟ್ಟಿರುವ ಕೀರ್ತಿ ಸುರೇಶ್ ಚಿತ್ರರಸಿಕರ ಹೃದಯ ಕದ್ದಿದ್ದಾರೆ.
ಇದು ಐತಿಹಾಸಿಕ ಕಥೆಯಾಧರಿತ ಚಿತ್ರವಾಗಿದ್ದು, ಕುಂಜಲಿ ಮರಕ್ಕರ್-IV ಜೀವನದ ಸುತ್ತ ಸಿನಿಮಾ ಮಾಡಲಾಗಿದೆಯಂತೆ. ಮೂಲಗಳ ಪ್ರಕಾರ ಕೀರ್ತಿ ಸುರೇಶ್ ಪೂರ್ತಿ ಸಿನಿಮಾದಲ್ಲಿ ಇರಲ್ಲವಂತೆ. ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದು, ಯುವರಾಣಿ ಪಾತ್ರ ಮಾಡಿದ್ದಾರೆ ಎನ್ನಲಾಗಿದೆ.

ಬಹುತೇಕ ಚಿತ್ರೀಕರಣ ಮುಗಿಸಿರುವ ಮರಕ್ಕರ್ ಚಿತ್ರ ಅಂತಿಮ ಹಂತದಲ್ಲಿದೆ. ಪ್ರಿಯಾದರ್ಶನ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಐದು ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಸುನೀಲ್ ಶೆಟ್ಟಿ, ಅರ್ಜುನ್ ಸರ್ಜಾ, ಪ್ರಭು, ಮಂಜು ವಾರಿಯರ್, ಸುಹಾಸಿನಿ, ಪ್ರಣಾವ್ ಮೋಹನ್ ಲಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಆಶೀರ್ವಾದ ಸಿನಿಮಾಸ್ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹಾಕಿದೆ. ಎಲ್ಲ ಅಂದುಕೊಂಡಂತೆ ಆದರೆ ಈ ಹಿಂದೆಯೇ ಘೋಷಿಸಿರುವಂತೆ ಮಾರ್ಚ್ 26 ರಂದು ಮರಕ್ಕರ್ ಸಿನಿಮಾ ವರ್ಲ್ಡ್ ವೈಡ್ ತೆರೆಕಾಣಲಿದೆ.


Click it and Unblock the Notifications











