ಇದು ಮನೆಯಲ್ಲ ಅರಮನೆ; ಮಹಾನಟಿ ಕೀರ್ತಿ ಸುರೇಶ್ ಐಷಾರಾಮಿ ಮನೆ ಹೇಗಿದೆ ಗೊತ್ತಾ?

ಸಿನಿಮಾ ತಾರೆಯರಿಗೆ ಕೋಟಿಗಳಿಗೆ ಲೆಕ್ಕವಿಲ್ಲ. ಚಿತ್ರವೊಂದಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ಅದಕ್ಕೆ ತಕ್ಕಂತೆ ಐಷಾರಾಮಿ ಜೀವನ ನಡೆಸುತ್ತಾರೆ. ಅರಮನೆಯಂತಹ ಮನೆ ವಾಸ, ದುಬಾರಿ ಕಾರುಗಳಲ್ಲಿ ಸುತ್ತಾಟ.. ಬಳಸುವ ಒಂದೊಂದು ವಸ್ತು ಕೂಡ ಲಕ್ಷ ಲಕ್ಷ ಬೆಳೆಬಾಳುತ್ತವೆ.

ಮಲಯಾಳಂ ನಟಿ ಕೀರ್ತಿ ಸುರೇಶ್ ತೆಲುಗು, ತಮಿಳು ಮಾತ್ರವಲ್ಲ ಹಿಂದಿ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ವರ್ಷದ ಹಿಂದೆ ಪ್ರಿಯಕರ ಆಂಟೋನಿ ತಟ್ಟಿಲ್ ಕೈ ಹಿಡಿದರು. ಉದ್ಯಮಿ ಆಗಿರುವ ಆಂಟೋನಿ ಕೂಡ ಕೋಟಿ ಕೋಟಿ ವ್ಯವಹಾರ ನಡೆಸುತ್ತಾರೆ. ಅಂದ್ಮೇಲೆ ಜೋಡಿಯ ವಿಲಾಸಿ ಜೀವನ ಹೇಗಿರುತ್ತದೆ ಎಂದು ಬಿಡಿಸಿ ಹೇಳಬೇಕಿಲ್ಲ.

Keerthy Suresh s Luxurious Kochi Home Tour Goes Viral Inside Her Love Story Career and Lifestyle

ಕೀರ್ತಿ ಹಾಗೂ ಆಂಟೊನಿ ಅವರದ್ದು 15 ವರ್ಷಗಳ ಲವ್‌ ಸ್ಟೋರಿ. ಕೊನೆಗೂ ಪೋಷಕರ ಒಪ್ಪಿಗೆ ಪಡೆದು ಇಬ್ಬರೂ ಮದುವೆ ಆಗಿದ್ದರು. ನಮ್ಮ ಕಲ್ಯಾಣ ಅಷ್ಟು ಸೊಗಾಸಾಗಿರುತ್ತದೆ ಎಂದು ಊಹಿಸಿರಲಿಲ್ಲ ಎಂದು ಕೀರ್ತಿ ಸಂತಸ ವ್ಯಕ್ತಪಡಿಸಿದ್ದಾರೆ. ಮದುವೆ ಬಳಿಕ ಕೂಡ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಯಾವುದೇ ಕೆಲಸ ಇಲ್ಲದೇ ಇದ್ದಾಗ ಕೊಚ್ಚಿಯಲ್ಲಿರುವ ನಿವಾಸದಲ್ಲಿ ವಾಸ. ಹೋಮ್ ಟೂರ್ ಮಾಡಿ ದಂಪತಿ ಸಣ್ಣ ಝಲಕ್ ತೋರಿಸಿದ್ದಾರೆ. ಮನೆ ಅಂದರೆ ಫನ್ ಎನ್ನುವ ಕೀರ್ತಿ ಅದನ್ನು ಸೊಗಸಾಗಿ ತಮ್ಮಿಷ್ಟದಂತೆ ನಿರ್ಮಿಸಿಕೊಂಡಿದ್ದಾರೆ. ಟ್ರೆಡೀಷನಲ್, ಮಾಡ್ರನ್ ಎರಡೂ ಮಿಕ್ಸ್ ಮಾಡಿ ಒಳಾಂಗಣ ವಿನ್ಯಾಸ ಮಾಡಿಸಿಕೊಂಡಿದ್ದಾರೆ.

ತಮ್ಮ ವೈಯಕ್ತಿಕ ಜೀವನ, ಸಿನಿ ಜೀವನದ ಸುಂದರ ಕ್ಷಣಗಳ ಫೋಟೊಗಳನ್ನು ಮೆಮೊರಿ ವಾಲ್‌ನಲ್ಲಿ ಹಾಕಿದ್ದಾರೆ. ಇದು ಮನೆಯಲ್ಲಿ ಸಿಕ್ಕಾಪಟ್ಟೆ ಹೈಲೆಟ್ ಎನಿಸಿಕೊಂಡಿದೆ. ಹೋಮ್ ಟೂರ್ ಮಾಡ್ತಾ ಮಾಡ್ತಾ ತಮ್ಮಿಬ್ಬರು ಲವ್- ಮ್ಯಾರೇಜ್ ಸ್ಟೋರಿ ಬಿಚ್ಚಿಟ್ಟಿದ್ದಾರೆ. ಬೆಡ್‌ ರೂಮ್, ಹಾಲ್, ಡೈನಿಂಗ್ ಏರಿಯಾ, ಬಾಲ್ಕನಿ, ಬಾರ್ ಕೌಂಟರ್ ಎಲ್ಲದರ ದರ್ಶನ ಮಾಡಿಸಿದ್ದಾರೆ. ಮನೆಯ ಗೋಡೆಗಳಲ್ಲಿರುವ ಫೋಟೊಗಳು, ಪೇಂಟಿಂಗ್, ಆರ್ಟ್ ವರ್ಕ್, ಅಕ್ವೇರಿಯಂ ಎಲ್ಲದರ ಗ್ಲಿಂಪ್ಸ್ ನೋಡಬಹುದು. ಬಾಲ್ಕನಿಯಲ್ಲಿ ಒಂದಷ್ಟು ಗಿಡಗಳನ್ನು ಇಟ್ಟುಕೊಂಡಿದ್ದಾರೆ. ನಮ್ಮ ಸಾಕು ನಾಯಿಗಳು ಮಕ್ಕಳ ಸಮಾನ, ಅವುಗಳನ್ನು ಕಂಡ ಕೂಡಲೇ ನೋವೆಲ್ಲಾ ದಣಿವು ಮರೆತು ಹೋಗುತ್ತದೆ ಎಂದು ದಂಪತಿ ಹೇಳಿದ್ದಾರೆ.

'ಮಹಾನಟಿ' ನನ್ನ ವೃತ್ತಿ ಜೀವನಕ್ಕೆ ತಿರುವು ನೀಡಿದ ಸಿನಿಮಾ. ನಾನು ಎಷ್ಟೇ ಯಶಸ್ಸು ಗಳಿಸಿದ್ದರೂ ಆ ಸಿನಿಮಾವನ್ನು ಮರೆಯೋಕೆ ಸಾಧ್ಯವಿಲ್ಲ ಎಂದು ಆ ನೆನಪುಗಳನ್ನು ಹಂಚಿಕೊಂಡಿದ್ದಾರೆ. ನಟಿ ಕೀರ್ತಿ ಸುರೇಶ್ ಹೋಮ್ ಟೂರ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ತಂದೆ ಸುರೇಶ್ ಕುಮಾರ್ ನಟ ಹಾಗೂ ನಿರ್ಮಾಪಕರಾಗಿದ್ದರು. ತಾಯಿ ಮೇನಕಾ ಕೂಡ ನಟಿಯಾಗಿ ಗುರ್ತಿಸಿಕೊಂಡಿದ್ದರು. ಹಾಗಾಗಿ ಕೀರ್ತಿ ಸುರೇಶ್ ಚಿತ್ರರಂಗಕ್ಕೆ ಬರುವುದು ಕಷ್ಟವಾಗಲಿಲ್ಲ. ಆದರೆ ಯಶಸ್ಸು ಅಷ್ಟು ಸುಲಭವಾಗಿ ಸಿಗಲಿಲ್ಲ.

ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದಿದ್ದ ಕೀರ್ತಿ 13 ವರ್ಷಗಳ ಹಿಂದೆ ನಾಯಕಿಯಾಗಿದ್ದರು. 'ಗೀತಾಂಜಲಿ' ಎಂಬ ಚಿತ್ರದಲ್ಲಿ ಮಿಂಚಿದ್ದರು. ಅಲ್ಲಿಂದ ಮುಂದೆ ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿದರೂ ಆರಕ್ಕೇರದ ಮೂರಕ್ಕಿಳಿದ ನಟಿ ಎನಿಸಿಕೊಂಡಿದ್ದರು. 2018ರಲ್ಲಿ ಬಂದ 'ಮಹಾನಟಿ' ಸಿನಿಮಾ ದೊಡ್ಡ ಬ್ರೇಕ್ ಕೊಟ್ಟಿತ್ತು. ಬಳಿಕ ಅವಕಾಶಗಳ ಸುರಿಮಳೆ ಆಯಿತು. ಚಿತ್ರದಲ್ಲಿ ಖ್ಯಾತ ನಟಿ ಸಾವಿತ್ರಿ ಪಾತ್ರದಲ್ಲಿ ನಟಿಸಿ ಕೀರ್ತಿ ಕಮಾಲ್ ಮಾಡಿದ್ದರು.

ದಳಪತಿ ವಿಜಯ್, ರಜನಿಕಾಂತ್, ಚಿರಂಜೀವಿ ಹೀಗೆ ಸ್ಟಾರ್ ನಟರ ಸಿನಿಮಾಗಳಲ್ಲಿ ಕೀರ್ತಿ ನಟಿಸಿ ಗೆದ್ದರು. ಬಾಬಿ ಜಾನ್ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಿದ್ದರು. ಸದ್ಯ 3 ಸಿನಿಮಾಗಳು ಮಹಾನಟಿಯ ಕೈಯಲ್ಲಿವೆ.

More from Filmibeat

Read more about: keerthy suresh mollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X