For Quick Alerts
  ALLOW NOTIFICATIONS  
  For Daily Alerts

  ಕೇರಳ ಚುನಾವಣೆಯಲ್ಲಿ ಮತ ಚಲಾಯಿಸಿದ ಮಲಯಾಳಂ ಸ್ಟಾರ್ಸ್

  |

  ಕೇರಳ ವಿಧಾನಸಭೆ ಚುನಾವಣೆ ಇಂದು (ಏಪ್ರಿಲ್ 6) ನಡೆದಿದೆ. ಮಲಯಾಳಂ ಸಿನಿಮಾ ತಾರೆಯರು ಮತದಾನ ಮಾಡುವ ಮೂಲಕ ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ.

  ಮಲಯಾಳಂ ಇಂಡಸ್ಟ್ರಿಯ ಸೂಪರ್ ಸ್ಟಾರ್ ಮಮ್ಮುಟ್ಟಿ ತನ್ನ ಪತ್ನಿ ಜೊತೆ ಮತಗಟ್ಟೆಗೆ ಆಗಮಿಸಿ ವೋಟ್ ಹಾಕಿದ್ದಾರೆ. ಮತದಾನಕ್ಕೆ ಆಗಮಿಸಿದ ವೇಳೆ ಮುಖಕ್ಕೆ ಮಾಸ್ಕ್ ಧರಿಸಿದ್ದ ಮಮ್ಮುಟ್ಟಿ ಕೊರೊನಾ ಬಗ್ಗೆ ಮುಂಜಾಗ್ರತೆ ವಹಿಸಿದ್ದರು.

  ಮಾಲಿವುಡ್ ಮತ್ತೊಬ್ಬ ನಟ ಪೃಥ್ವಿರಾಜ್ ಸುಕುಮಾರ್ ಸಹ ಮತದಾನ ಮಾಡಿದ್ದಾರೆ. ಮತ ಚಲಾಯಿಸಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಕೈಬೆರಳಿನ ಫೋಟೋ ಹಂಚಿಕೊಂಡಿದ್ದಾರೆ.

  ನಟ ಉನ್ನಿ ಮುಕುಂದನ್ ಅವರು ಸಹ ಕೇರಳ ಚುನಾವಣೆಯಲ್ಲಿ ಮತದಾನ ಮಾಡಿದ್ದು, ಇನ್ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

  ಮಲಯಾಳಂ ನಟಿ ಕೀರ್ತಿ ಸುರೇಶ್ ಸಹ ತಮ್ಮ ಕುಟುಂಬ ಸಮೇತ ಮತಗಟ್ಟೆಗೆ ತೆರಳಿ ವೋಟ್ ಮಾಡಿದ್ದಾರೆ. ನಂತರ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

  Kerala Elections 2021: Mammootty, Keerthy suresh and others cast their votes

  ಇನ್ನುಳಿದಂತೆ ಸೌಬಿನ್ ಶಾಹೀರ್, ಜಯಸೂರ್ಯ, ಟೋವಿನೋ ಥಾಮಸ್ ಮತ್ತು ಕಾಳಿದಾಸ್ ಜಯರಾಮ್ ಅವರು ಸಹ ಇಂದು ನಡೆದ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಿದ್ದಾರೆ.

  Recommended Video

  Madhagaja ಶೂಟಿಂಗ್ ಸೆಟ್ ನಲ್ಲಿ ಫೈಟಿಂಗ್ ಮಾಡುವಾಗ ಶ್ರೀ ಮುರುಳಿ ಕಾಲಿಗೆ ಪೆಟ್ಟು | Filmibeat Kannada

  ತಮಿಳುನಾಡಿನಲ್ಲಿ ಚುನಾವಣೆ ನಡೆದಿದ್ದು, ಕಮಲ್ ಹಾಸನ್, ರಜನಿಕಾಂತ್, ವಿಜಯ್, ಅಜಿತ್ ಕುಮಾರ್-ಶಾಲಿನಿ ದಂಪತಿ, ವಿಜಯ್ ಸೇತುಪತಿ, ಶ್ರುತಿ ಹಾಸನ್, ಸೂರ್ಯ ಮತ್ತು ಕಾರ್ತಿ ಸಹೋದರರು ವೋಟ್ ಮಾಡಿದ್ದಾರೆ.

  English summary
  Kerala Elections 2021: Malayalam Superstar Mammootty, Keerthy suresh, Prithviraj sukumaran and others cast their votes.
  Tuesday, April 6, 2021, 18:05
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X