ನಟ ಮೋಹನ್‌ಲಾಲ್‌ಗಾಗಿ ನಿಯಮ ಸಡಿಲಿಸಲು ಮುಂದಾದ ಕೇರಳ ಸರ್ಕಾರ!

ಕೋರೊನಾ ಲಾಕ್‌ಡೌನ್‌ ನಿಯಮಗಳನ್ನು ಕಠಿಣವಾಗಿ ಹೇರಿದ, ಪಾಲಿಸಿದ ರಾಜ್ಯಗಳಲ್ಲಿ ಕೇರಳ ಸಹ ಒಂದು. ಹಠಾತ್ತನೆ ಏರಿಕೆಯಾದ ಕೊರೊನಾ ಪ್ರಕರಣಗಳು ಇದಕ್ಕೆ ಕಾರಣ.

ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ಚಿತ್ರಮಂದಿರಗಳು ಪೂರ್ಣ ಆಸನ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಆದರೆ ಕೇರಳದಲ್ಲಿ ಮಾತ್ರ ಇನ್ನೂ 50% ಸೀಟು ಸಾಮರ್ಥ್ಯದೊಂದಿಗೆ ಚಿತ್ರಮಂದಿರಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಇದೀಗ ನಟ ಮೋಹನ್‌ಲಾಲ್‌ಗಾಗಿ ಕೇರಳ ಸರ್ಕಾರವು ನಿಯಮ ಸಡಿಲಿಸಲು ಮುಂದಾಗಿದೆ.

ಮೋಹನ್‌ಲಾಲ್ ನಟನೆಯ ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ 'ಮರಕ್ಕರ್' ಬಿಡುಗಡೆ ಕೇರಳದಲ್ಲಿ ವಿವಾದವಾಗಿತ್ತು. ನಿರ್ಮಾಪಕ ಆಂಟೊನಿ ಪೆರಂಬವೂರ್, 'ಮರಕ್ಕರ್' ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆಗೆ ಮುಂದಾಗಿದ್ದರು. ಇದಕ್ಕೆ ಚಿತ್ರಮಂದಿರ ಮಾಲೀಕರು, ವಿತರಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಸರ್ಕಾರವು ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು.

Kerala Government To Allow Theaters To Operate In Full Seat Occupancy Soon

ಸಂಸ್ಕೃತಿ ಇಲಾಖೆ ಸಚಿವರು ಚಿತ್ರಮಂದಿರ ಮಾಲೀಕರ ಸಂಘ, ವಿತರಕರ ಸಂಘ ಹಾಗೂ ಮೋಹನ್‌ಲಾಲ್, ನಿರ್ಮಾಪಕ ಆಂಟೊನಿ ಜೊತೆಗೆ ಸಂಧಾನ ನಡೆಸಿ ಸಿನಿಮಾವು ಚಿತ್ರಮಂದಿರದಲ್ಲಿಯೇ ಬಿಡುಗಡೆ ಮಾಡುವಂತೆ ಮನವೊಲಿಸಿದ್ದಾರೆ. ಆದರೆ ಈ ಸಂಧಾನದ ವೇಳೆ ಸಿನಿಮಾ ಬಿಡಗುಡೆ ವೇಳೆಗೆ ಚಿತ್ರಮಂದಿರಗಳಲ್ಲಿ 100% ಆಸನ ಭರ್ತಿಗೆ ಸರ್ಕಾರ ಅವಕಾಶ ಕೊಡಬೇಕೆಂಬ ಷರತ್ತನ್ನು ನಿರ್ಮಾಪಕರು ಇಟ್ಟಿದ್ದರು, ಷರತ್ತಿಗೆ ಸಚಿವರು ಒಪ್ಪಿಗೆ ಸೂಚಿಸಿದ್ದಾರೆ.

ಇದೀಗ 50% ಸೀಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಕೇರಳ ಚಿತ್ರಮಂದಿರಗಳು ಡಿಸೆಂಬರ್ ಆರಂಭದ ವೇಳೆಗೆ ಪೂರ್ಣ ಸೀಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲಿವೆ. ಡಿಸೆಂಬರ್ 02 ರಂದು 'ಮರಕ್ಕರ್' ಸಿನಿಮಾ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

ಅದೇ ಸಮಯಕ್ಕೆ ಸರಿಯಾಗಿ ತೆಲುಗಿನ 'ಪುಷ್ಪ' ಸಿನಿಮಾ ಸಹ ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಆಗಲಿದ್ದು, ಆ ಸಿನಿಮಾಕ್ಕೂ ಪೂರ್ಣ ಸೀಟು ಸಾಮರ್ಥ್ಯದೊಂದಿಗೆ ಸಿನಿಮಾ ಬಿಡಗುಡೆ ಮಾಡುವ ಅವಕಾಶ ಲಭ್ಯವಾಗಲಿದೆ. ಅಲ್ಲು ಅರ್ಜುನ್‌ಗೆ ಕೇರಳದಲ್ಲಿಯೂ ಬಹಳ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ.

2018 ರಲ್ಲಿ ಚಿತ್ರೀಕರಣ ಆರಂಭಿಸಿದ 'ಮರಕ್ಕರ್' ಸಿನಿಮಾ 2019 ರಲ್ಲಿ ಚಿತ್ರೀಕರಣ ಮುಗಿಸಿ ಅದೇ ವರ್ಷದಲ್ಲಿ ಸೆನ್ಸಾರ್ ಸಹ ಪೂರ್ಣಗೊಳಿಸಿ ಬಿಡುಗಡೆಗೆ ತಯಾರಾಗಿತ್ತು. ಆದರೆ ಕೊರೊನಾ ಕಾರಣದಿಂದಾಗಿ ಬಿಡುಗಡೆ ತಡವಾಗುತ್ತಲೇ ಬಂದಿದೆ. ಪ್ರಿಯದರ್ಶನ್ ನಿರ್ದೇಶನದ ಈ ಸಿನಿಮಾಕ್ಕೆ ಅತ್ಯುತ್ತಮ ಸಿನಿಮಾ ರಾಷ್ಟ್ರಪ್ರಶಸ್ತಿ ಸಹ ಲಭಿಸಿದೆ. ಸಿನಿಮಾದಲ್ಲಿ ಅರ್ಜುನ್ ಸರ್ಜಾ, ಸುನಿಲ್ ಶೆಟ್ಟಿ, ಕೀರ್ತಿ ಸುರೇಶ್, ಪ್ರಭು, ಮಂಜು ವಾರಿಯರ್ ಇನ್ನೂ ಹಲವು ಸ್ಟಾರ್ ನಟರ ದಂಡೇ ಇದೆ. ಸಿನಿಮಾದಲ್ಲಿ ನಾಲ್ಕನೇ ಕುಂಜಳಿ ಮರಕ್ಕರ್ ಪಾತ್ರದಲ್ಲಿ ಮೋಹನ್‌ಲಾಲ್ ನಟಿಸಿದ್ದಾರೆ.

More from Filmibeat

English summary
Kerala government will allow theaters to operate in full seat occupancy very soon. Mohanlal starer bug budget movie Marakkar releasing on December 02.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X