The Kerala Story 2; 'ದಿ ಕೇರಳ ಸ್ಟೋರಿ 2' ಬಿಡುಗಡೆಗೆ ಕೇರಳ ಹೈಕೋರ್ಟ್ ಅನುಮತಿ; ಇಂದಿನಿಂದಲೇ ಶೋ ಶುರು

By Staff

'ದಿ ಕೇರಳ ಸ್ಟೋರಿ 2' ಸಿನಿಮಾದ ಸುತ್ತಲಿನ ಕಾನೂನು ಹೋರಾಟವು ಶುಕ್ರವಾರ ಮಹತ್ವದ ತಿರುವು ಪಡೆದುಕೊಂಡಿದೆ. ಕೇರಳ ಹೈಕೋರ್ಟ್‌ನ ವಿಭಾಗೀಯ ಪೀಠವು ಸಿನಿಮಾ ಬಿಡುಗಡೆಯ ಮೇಲಿದ್ದ ಮಧ್ಯಂತರ ತಡೆಯಾಜ್ಞೆಯನ್ನು ತೆರವುಗೊಳಿಸಿದ್ದು, ಶುಕ್ರವಾರ ಸಂಜೆಯಿಂದಲೇ ಪ್ರದರ್ಶನಗಳು ಆರಂಭಗೊಳ್ಳುವುದಕ್ಕೆ ದಾರಿ ಮಾಡಿಕೊಟ್ಟಿದೆ. ಈ ಆದೇಶದ ಬಳಿಕ ಕೊಚ್ಚಿ, ಕೋಝಿಕ್ಕೋಡ್ ಮತ್ತು ತಿರುವನಂತಪುರಂನ ಮಲ್ಟಿಪ್ಲೆಕ್ಸ್ ಚೈನ್‌ಗಳು ಹಾಗೂ ಸಿಂಗಲ್ ಸ್ಕ್ರೀನ್‌ಗಳು ಮತ್ತೆ ಬುಕಿಂಗ್‌ಗಳನ್ನು ಓಪನ್ ಮಾಡುವುದಕ್ಕೆ ಮುಂದಾಗಿವೆ.

ನ್ಯಾಯಮೂರ್ತಿಗಳಾದ ಎಸ್ ಎ ಧರ್ಮಾಧಿಕಾರಿ ಮತ್ತು ಪಿ ವಿ ಬಾಲಕೃಷ್ಣನ್ ಅವರ ಪೀಠವು ಗುರುವಾರದ ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿದೆ. ಈ ಹಿಂದಿನ ಆದೇಶ ಸಿನಿಮಾ ಬಿಡುಗಡೆಯನ್ನು 15 ದಿನಗಳ ಕಾಲ ಸ್ಥಗಿತಗೊಳಿಸಿತ್ತು. ಅಲ್ಲದೆ ಈ ಸೀಕ್ವೆಲ್‌ಗೆ ನೀಡಿದ್ದ U/A ಪ್ರಮಾಣಪತ್ರವನ್ನು ಮರುಪರಿಶೀಲಿಸುವಂತೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಗೆ ಸೂಚಿಸಿತ್ತು. ನಿರ್ಮಾಪಕ ವಿಪುಲ್ ಅಮೃತ್‌ಲಾಲ್ ಶಾ ಅವರ ಮೇಲ್ಮನವಿಯ ಮೇರೆಗೆ ವಿಭಾಗೀಯ ಪೀಠವು ತನ್ನ ತೀರ್ಪು ನೀಡಿದೆ.

Kerala High Court Lifts Stay on Controversial The Kerala Story 2 Releasing today

ಏಕಸದಸ್ಯ ಪೀಠದ ತಡೆಯಾಜ್ಞೆ ರದ್ದು

ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರು ಗುರುವಾರ ಏಕಸದಸ್ಯ ಪೀಠದಲ್ಲಿ ಕುಳಿತು, ಸಿನಿಮಾಗೆ ಪ್ರಮಾಣಪತ್ರ ನೀಡುವಾಗ CBFC "ವಿವೇಚನೆಯನ್ನು ಬಳಸಿಲ್ಲ" ಎಂದು ಆರೋಪಿಸಿತ್ತು. ನಂತರ ಎರಡು ವಾರಗಳ ಕಾಲ ಬಿಡುಗಡೆಗೆ ಮಧ್ಯಂತರ ತಡೆ ನೀಡಿದ್ದರು. ಮತಾಂತರಕ್ಕೆ ಬಲವಂತಪಡಿಸಿದ ಮಹಿಳೆಯರ ಕುರಿತಾದ ಬಹು-ರಾಜ್ಯಕ್ಕೆ ಸಂಬಂಧಿಸಿದ ಕತೆಗೆ ಕೇರಳದ ಟೈಟಲ್ ಯಾಕೆ ಎಂದು ಪ್ರಶ್ನಿಸಿತ್ತು. ಕೆಲವೇ ಗಂಟೆಗಳಲ್ಲಿ, ನಿರ್ಮಾಪಕರು ವಿಭಾಗೀಯ ಪೀಠದ ಮೊರೆ ಹೋಗಿ ತುರ್ತು ಪರಿಹಾರಕ್ಕೆ ಮನವಿ ಮಾಡಿದ್ದರು.

'ದಿ ಕೇರಳ ಸ್ಟೋರಿ 2: ಗೋಸ್ ಬಿಯಾಂಡ್' ಹಲವು ರಾಜ್ಯಗಳ ಘಟನೆಗಳನ್ನು ಹೇಳುತ್ತಿದೆ. ಹಾಗೇ ಕೇರಳ ಅಥವಾ ಯಾವುದೇ ಸಮುದಾಯವನ್ನು ನಿಂದಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ನಿರ್ಮಾಪಕರ ಪರ ವಕೀಲರು ನ್ಯಾಯಾಧೀಶರ ಗಮನ ಸೆಳೆದರು.

Kerala High Court Lifts Stay on Controversial The Kerala Story 2 Releasing today

15 ದಿನಗಳ ತಡೆಯಿಂದ ಹಸಿರು ನಿಶಾನೆವರೆಗೆ

ಫೆಬ್ರವರಿ 26 ರಂದು, ಏಕಸದಸ್ಯ ಪೀಠವು 15 ದಿನಗಳ ಕಾಲ 'ದಿ ಕೇರಳ ಸ್ಟೋರಿ' ಬಿಡುಗಡೆಯನ್ನು ತಡೆ ನೀಡಿತ್ತು. ಆದರೆ, ಫೆಬ್ರವರಿ 27 ರಂದು ಸಿನಿಮಾ ರಿಲೀಸ್ ಆಗಬೇಕಿತ್ತು. ಈ ಆದೇಶ ಸಿನಿಮಾ ಬಿಡುಗಡೆ ಮೇಲೆ ಪರಿಣಾಮ ಬೀರಿತ್ತು. ಫೆಬ್ರವರಿ 27 ರ ಮಧ್ಯಾಹ್ನದ ವೇಳೆಗೆ, ವಿಭಾಗೀಯ ಪೀಠವು ಯಥಾಸ್ಥಿತಿಯನ್ನು ಕಾಯ್ದಿರಿಸಿತ್ತು. ಈಗ ಬಿಡುಗಡೆಗೆ ಅನುಮತಿ ಸಿಕ್ಕಿದ್ದರಿಂದ ವಿತರಕರು ಹಾಗೂ ಪ್ರದರ್ಶಕರು ಸಂಜೆಯಿಂದಲೇ ಶೋಗಳು ಆರಂಭ ಆಗಿವೆ ಎಂದು ಟ್ರೇಡ್ ಎಕ್ಸ್‌ಪರ್ಟ್ ಕೋಮಲ್ ನಾಹ್ತಾ ಖಚಿತಪಡಿಸಿದರು.

ಪ್ರಮುಖ ಕಾನೂನು ಮೈಲಿಗಲ್ಲು ದಿನಾಂಕ (2026) ಚಿತ್ರದ ಮೇಲಿನ ಪರಿಣಾಮ
ಏಕಸದಸ್ಯ ಪೀಠದ ಮಧ್ಯಂತರ ತಡೆ ಫೆಬ್ರವರಿ 26 ಬಿಡುಗಡೆ 15 ದಿನಗಳ ಕಾಲ ಸ್ಥಗಿತ, CBFC ಮರುಪರಿಶೀಲನೆಗೆ ಆದೇಶ
ವಿಭಾಗೀಯ ಪೀಠದ ವಿಚಾರಣೆ ಮತ್ತು ಆದೇಶ ಫೆಬ್ರವರಿ 27 ತಡೆಯಾಜ್ಞೆ ತೆರವು, ಸಂಜೆಯ ಪ್ರದರ್ಶನಗಳಿಂದ ಬಿಡುಗಡೆಗೆ ಅನುಮತಿ

ನಿರ್ಮಾಪಕರಿಂದ ಶ್ಲಾಘನೆ

ನಿರ್ಮಾಪಕ ವಿಪುಲ್ ಅಮೃತ್‌ಲಾಲ್ ಶಾ ಅವರು ಈ ತೀರ್ಪನ್ನು ಸ್ವಾಗತಿಸಿದ್ದಾರೆ. ವಿಭಾಗೀಯ ಪೀಠದ ನಿರ್ಧಾರವನ್ನು "ಸಿನಿಮಾದ ಸತ್ಯಕ್ಕೆ ಮತ್ತು CBFC ಯ ಪರಿಶೀಲನೆಗೆ ದೊರೆತ ದೊಡ್ಡ ಪುರಾವೆ" ಎಂದು ಬಣ್ಣಿಸಿದರು. 2023 ರ ಮೂಲ ಸಿನಿಮಾದಂತೆ ಈ ಸೀಕ್ವೆಲ್ ಕೂಡ ಅಸಹಾಯಕ ಮಹಿಳೆಯರ ಅಸಹಾಯಕತೆಯನ್ನು ಎತ್ತಿ ತೋರಿಸಲು ಪ್ರಯತ್ನಿಸುತ್ತದೆಯೇ ಹೊರತು ಕೇರಳವನ್ನು ದೂಷಿಸುವುದಕ್ಕಲ್ಲ ಎಂದು ಶಾ ಪ್ರತಿಪಾದಿಸಿದರು. ಕಥೆಯು ರಾಜಕೀಯ ಉದ್ದೇಶಗಳಿಗಿಂತ ಹೆಚ್ಚಾಗಿ ಸಾಕ್ಷ್ಯಗಳು ಮತ್ತು ತನಿಖಾಗಳಿಂದ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.

ಕೇರಳದ ಪ್ರದರ್ಶಕರಿಂದ ಶೋ ಗ್ರಿಡ್‌

ಕೇರಳದ ಚಿತ್ರಮಂದಿರ ಮಾಲೀಕರು ಮತ್ತು ಮಲ್ಟಿಪ್ಲೆಕ್ಸ್ ಆಪರೇಟರ್‌ಗಳಿಗೆ ಈ ತೀರ್ಪು ತಕ್ಷಣಕ್ಕೆ ಶೋಗಳನ್ನು ಅರೇಂಜ್ ಮಾಡುವಂತಾಯ್ತು. ಶುಕ್ರವಾರ ತಮ್ಮ ಲಿಸ್ಟ್‌ನಿಂದ 'ದಿ ಕೇರಳ ಸ್ಟೋರಿ 2: ಗೋಸ್ ಬಿಯಾಂಡ್' ಅನ್ನು ತೆಗೆದುಹಾಕಿದ್ದರು. ಹೈಕೋರ್ಟ್ ಆದೇಶದ ಬಳಿಕ ಕೊಚ್ಚಿ, ಕೋಝಿಕ್ಕೋಡ್ ಮತ್ತು ತಿರುವನಂತಪುರಂನಂತಹ ನಗರ ಕೇಂದ್ರಗಳಲ್ಲಿ ಸಂಜೆ ಮತ್ತು ರಾತ್ರಿಯ ಶೋಗಳಿಗೆ ಆದ್ಯತೆ ನೀಡಲಾಯಿತು. ಈ ಬೆಳವಣಿಗೆಗಳು ಬಾಕ್ಸ್ ಆಫೀಸ್ ಮೇಲೆ ಮಿಶ್ರ ಪರಿಣಾಮ ಬೀರಬಹುದು ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ನಿರೀಕ್ಷಿಸಿದ್ದಾರೆ .

More from Filmibeat

English summary
Kerala High Court Lifts Stay on Controversial The Kerala Story 2 Releasing today.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X