ನಟಿಯ ಅತ್ಯಾಚಾರಕ್ಕೆ ಯತ್ನ: ನಟ ದಿಲೀಪ್‌ಗೆ ಹೈಕೋರ್ಟ್ ಶಾಕ್
ಮಲಯಾಳಂ ಚಿತ್ರರಂಗದ ಸ್ಟಾರ್ ನಟಿಯ ಅತ್ಯಾಚಾರ ಯತ್ನ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಮಲಯಾಳಂ ಸ್ಟಾರ್ ನಟ ದಿಲೀಪ್‌ಗೆ ಕೇರಳ ಹೈಕೋರ್ಟ್ ಶಾಕ್ ನೀಡಿದೆ.
ಕೆಲವು ದಿನಗಳ ಹಿಂದಷ್ಟೆ ನಟ ದಿಲೀಪ್ ಅನ್ನು ಫೆಬ್ರವರಿ 07ರ ವರೆಗೆ ಬಂಧಿಸಬಾರದೆಂದು ಆದೇಶ ಹೊರಡಿಸಿ ದಿಲೀಪ್‌ಗೆ ನಿರಾಳತೆ ಒದಗಿಸಿದ್ದ ಕೇರಳ ಹೈಕೋರ್ಟ್ ಇದೀಗ ಮತ್ತೊಂದು ಆದೇಶ ಹೊರಡಿಸಿ ದಿಲೀಪ್‌ಗೆ ಶಾಕ್ ನೀಡಿದೆ.
2017 ರಲ್ಲಿ ನಡೆದಿದ್ದ ನಟಿಯ ಅತ್ಯಾಚಾರ ಯತ್ನ ಹಾಗೂ ಹಲ್ಲೆ ಪ್ರಕರಣದ ಪ್ರಮುಖ ಆರೋಪಿ ಪಲ್ಸರ್ ಸುನಿಯು ಆ ಕೃತ್ಯವನ್ನು ನಟ ದಿಲೀಪ್ ಆದೇದಿಂದಲೇ ಎಸಗಿದ್ದ ಎಂಬ ಆರೋಪವನ್ನು ಪೊಲೀಸರು ಮಾಡಿದ್ದಾರೆ. ಅಂದು ನಟಿಯ ಮೇಲೆ ಮಾಡಿದ ಹಲ್ಲೆ, ಅತ್ಯಾಚಾರ ಯತ್ನದ ವಿಡಿಯೋವನ್ನು ಮಾಡಿಕೊಂಡಿದ್ದ ಪಲ್ಸರ್ ಸುನಿ ಆ ವಿಡಿಯೋವನ್ನು ನಟ ದಿಲೀಪ್‌ಗೆ ತಲುಪಸಿದ್ದ ಎನ್ನಲಾಗುತ್ತಿದೆ. ಆದರೆ ದಿಲೀಪ್ ಇದನ್ನು ಅಲ್ಲಗಳೆದಿದ್ದಾರೆ.

ಇದೀಗ ಕೇರಳ ಹೈಕೋರ್ಟ್ ಈ ಬಗ್ಗೆ ಮಹತ್ವದ ಆದೇಶವೊಂದನ್ನು ನೀಡಿದ್ದು, ನಟ ದಿಲೀಪ್ ತನ್ನ ಎಲ್ಲ ಮೊಬೈಲ್ ಫೋನ್ ಅನ್ನು ನ್ಯಾಯಾಲಯದ ಸುಪರ್ಧಿಗೆ ಒಪ್ಪಿಸಬೇಕು ಎಂದು ಆದೇಶಿಸಿದೆ. ದಿಲೀಪ್ ಮಾತ್ರವೇ ಅಲ್ಲ ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ದಿಲೀಪ್‌ರ ಹತ್ತಿರದ ಸಂಬಂಧಿಗಳಾದ ಅನುಪ್ ಮತ್ತು ಸೂರಜ್‌ರ ಮೊಬೈಲ್‌ಗಳನ್ನು ಸಹ ನ್ಯಾಯಾಲಯದ ಸುಪರ್ಧಿಗೊಪ್ಪಿಸಲು ಆದೇಶ ನೀಡಿದೆ.
ವಿಶೇಷವೆಂದರೆ ನ್ಯಾಯಾಲಯವು ಈ ಆದೇಶವನ್ನು ನಟಿಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿಲ್ಲ. ಬದಲಿಗೆ ಪೊಲೀಸರು ದಿಲೀಪ್ ಮೇಲೆ ದಾಖಲಿಸಿರುವ ಸಂಚಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಲಾಗಿದೆ. ನಟಿಯ ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರ ಕೊಲೆಗೆ ದಿಲೀಪ್ ಸಂಚು ರೂಪಿಸಿದ್ದ ಎಂಬ ಆರೋಪವನ್ನು ಪೊಲೀಸರು ಮಾಡಿದ್ದು, ಈ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಮೊಬೈಲ್ ಫೋನ್ ಅನ್ನು ನೀಡುವಂತೆ ನ್ಯಾಯಾಲಯವು ದಿಲೀಪ್‌ಗೆ ಆದೇಶ ನೀಡಿದೆ.
ದಿಲೀಪ್, ಅನುಪ್ ಮತ್ತು ಸೂರಜ್ ಅವರುಗಳು ಜನವರಿ 31ರ ಬೆಳಿಗ್ಗೆ 10:15 ರ ಒಳಗೆ ಮೊಬೈಲ್ ಅನ್ನು ನ್ಯಾಯಾಲಯಕ್ಕೆ ಒಪ್ಪಿಸಬೇಕಾಗಿದೆ. ಅಸಲಿಗೆ ತನ್ನ ಫೋನನ್ನು ಪೊಲೀಸರಿಗೆ ಅಥವಾ ನ್ಯಾಯಾಲಯಕ್ಕೆ ಒಪ್ಪಿಸದೇ ಇರಲು ಪ್ರಯತ್ನಗಳನ್ನು ದಿಲೀಪ್ ಮಾಡಿದ್ದರು. ಆದರೆ ನ್ಯಾಯಾಲಯವು ಇದಕ್ಕೆ ಒಪ್ಪದೆ. ಜನವರಿ 31ರಂದು ಫೋನ್ ಅನ್ನು ಒಪ್ಪಿಸಲೇ ಬೇಕು ಎಂದು ಸೂಚಿಸಿತು.
ಈ ಮೊದಲು ತನ್ನ ಮೂರು ಮೊಬೈಲ್ ಫೋನ್‌ಗಳನ್ನು ಲ್ಯಾಬ್‌ಗೆ ನೀಡಲು ನಿರಾಕರಿಸಿದ್ದ ದಿಲೀಪ್, ಫೊರ್ಯಾನ್ಸಿಕ್ ಲ್ಯಾಬ್ ಪೊಲೀಸರ ನಿಯಂತ್ರಣದಲ್ಲಿದ್ದು ಅವರು ಫೋನ್‌ನಲ್ಲಿರುವ ಮಾಹಿತಿಗಳನ್ನು ಅಳಿಸುವ ಅಥವಾ ತಿರುಚುವ ಸಾಧ್ಯತೆ ಇದೆಯೆಂದು ವಾದಿಸಿದ್ದರು. ಆದರೆ ಈಗ ದಿಲೀಪ್ ತಮ್ಮ ಮೂರು ಫೋನ್‌ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲೇ ಬೇಕಾಗಿದೆ.
ನಟ ದಿಲೀಪ್ ಆದೇಶದ ಮೇರೆಗೆ ಪಲ್ಸರ್ ಸುನಿ ಎಂಬಾತ ಹಾಗೂ ಇನ್ನು ಕೆಲವರು 2017 ರ ಫೆಬ್ರವರಿಯಲ್ಲಿ ಕೊಚ್ಚಿಯ ಬಳಿ ಚಿತ್ರೀಕರಣ ಮುಗಿಸಿ ಮನೆಗೆ ಹೋಗುತ್ತಿದ್ದ ಮಲಯಾಳಂ ನಟಿಯ ಕಾರನ್ನು ಹಿಂಬಾಲಿಸಿ ಆಕೆಯನ್ನು ತಮ್ಮ ಕಾರಿಗೆ ಎಳೆದುಕೊಂಡು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಅದನ್ನು ವಿಡಿಯೋ ಸಹ ಮಾಡಿದ್ದರು. ಆ ವಿಡಿಯೋವನ್ನು ಆರೋಪಿಗಳು ನಟ ದಿಲೀಪ್‌ಗೆ ತಲುಪಿಸಿದ್ದರು. ಆದರೆ ಈ ಆರೋಪ ಇನ್ನೂ ಸಾಬೀತಾಗಿಲ್ಲ. ವಿಡಿಯೋಕ್ಕಾಗಿ ಕೊಚ್ಚಿ ಪೊಲೀಸರು ಕೆಲವು ದಿನಗಳ ಹಿಂದೆಯಷ್ಟೆ ದಿಲೀಪ್ ಮನೆಯ ಹುಡುಕಾಟ ನಡೆಸಿದರು. ಕೆಲವು ದಿನಗಳ ಹಿಂದೆಯಷ್ಟೆ ಪಲ್ಸರ್ ಸುನಿಯ ತಾಯಿ ಶೋಭನಾ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದು, ನನ್ನ ಮಗ ಎಲ್ಲ ವಿಷಯವನ್ನು ನ್ಯಾಯಾಲಯಕ್ಕೆ ತಿಳಿಸಲಿದ್ದಾನೆ. ನನ್ನ ಮಗನನ್ನು ದಿಲೀಪ್ ಸಿಕ್ಕಿ ಹಾಕಿಸಿದ್ದಾನೆ ಎಂದಿದ್ದರು.
ಇದರ ಹೊರತಾಗಿ, ದಿಲೀಪ್‌ಗೆ ಆತ್ಮೀಯರಾಗಿದ್ದ ನಿರ್ದೇಶಕ ಬಾಲಚಂದ್ರ ಕುಮಾರ್ ಸಹ ಸಾಕ್ಷ್ಯ ನುಡಿಯಲು ಮುಂದೆ ಬಂದಿದ್ದಾರೆ. ತಮಗೆ ನಟಿಯ ಅತ್ಯಾಚಾರ ವಿಷಯ ಮೊದಲೇ ಗೊತ್ತಿತ್ತೆಂದು, ದಿಲೀಪ್, ಪಲ್ಸರ್ ಸುನಿಗೆ ನಟಿಗೆ ತೊಂದರೆ ಕೊಡೆಂದು ಸೂಚಿಸಿದ್ದಾಗಿ ಹೇಳಿದ್ದ ಎಂದಿದ್ದಾರೆ. ದಿಲೀಪ್ ಪತ್ನಿಯ ಸಂಸ್ಥೆಯಲ್ಲಿ ತಾವು ಪಲ್ಸರ್ ಸುನಿಯನ್ನು ನೋಡಿದ್ದು, ದಿಲೀಪ್ ಬಳಿ ಆ ಘಟನೆಯ ವಿಡಿಯೋ ಇದ್ದುದನ್ನು ತಾನು ನೋಡಿದ್ದಾಗಿಯೂ ಬಾಲಚಂದ್ರ ಕುಮಾರ್ ಹೇಳಿದ್ದರು. ಕೆಲವು ಆಡಿಯೋ ದಾಖಲೆಗಳನ್ನು ಸಹ ಬಿಡುಗಡೆ ಮಾಡಿದ್ದರು. ಬಾಲಚಂದ್ರ ಹೇಳಿಕೆಯ ಮೇರೆಗೆ ಪೊಲೀಸರು ದಿಲೀಪ್ ಮನೆಯ ಹುಡುಕಾಟ ನಡೆಸಿದ್ದರು. ಬಾಲಚಂದ್ರ ಕುಮಾರ್ ಹೇಳಿಕೆ ನೀಡಿದ ಬಳಿಕ ನಟ ದಿಲೀಪ್ ಹೈಕೋರ್ಟ್‌ನಲ್ಲಿ ಬಾಲಚಂದ್ರ ವಿರುದ್ಧ ಸುಲಿಗೆ, ಬೆದರಿಕೆ ಪ್ರಕರಣ ದಾಖಲಿಸಿದ್ದಾರೆ.


Click it and Unblock the Notifications











