For Quick Alerts
  ALLOW NOTIFICATIONS  
  For Daily Alerts

  29 ಲಕ್ಷ ಹಣ ವಂಚನೆ: ಸನ್ನಿ ಲಿಯೋನ್ ಹೇಳಿಕೆ ದಾಖಲಿಸಿಕೊಂಡ ಕೇರಳ ಪೊಲೀಸ್

  |

  ಕಾರ್ಯಕ್ರಮ ಆಯೋಜಕರೊಬ್ಬರಿಗೆ 29 ಲಕ್ಷ ರೂಪಾಯಿ ಹಣ ವಂಚಿಸಿದ್ದಾರೆ ಎಂಬ ದೂರಿನ ವಿಚಾರಣೆ ನಡೆಸುತ್ತಿರುವ ಕೇರಳ ಪೊಲೀಸರು ನಟಿ ಸನ್ನಿ ಲಿಯೋನ್ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

  ನಟಿ ಸನ್ನಿ ಲಿಯೋನ್ ಗೆ ತಾವು 29 ಲಕ್ಷ ಹಣ ಕೊಟ್ಟು ಎರಡು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು, ಕಾರ್ಯಕ್ರಮಗಳಿಗೆ ಬರುತ್ತೇನೆಂದು ಹೇಳಿ ಹಣ ಪಡೆದ ನಟಿ ಸನ್ನಿ ಲಿಯೋನ್ ಆ ನಂತರ ಗೈರಾದರು. ನಟಿಯು ನನಗೆ 29 ಲಕ್ಷ ರೂ ಹಣ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಪೆರಂಬವೂರ್ ನ ಶಿಯಾಸ್ ಎರ್ನಾಕುಲಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

  ಇತ್ತೀಚೆಗೆ ಕೆಲ ದಿನಗಳ ಹಿಂದೆ ನಟಿ ಸನ್ನಿ ಲಿಯೋನ್ ಚಿತ್ರೀಕರಣಕ್ಕೆಂದು ಕೇರಳದ ತಿರುವನಂತಪುರಂ ನ ತೂವೂರ್ ಗೆ ಬಂದಿದ್ದಾಗ ಅಲ್ಲಿಗೆ ತೆರಳಿದ ಎರ್ನಾಕುಲಂ ಪೊಲೀಸರು ಪ್ರಕರಣ ಸಂಬಂಧ ನಟಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.

  ಪೊಲೀಸರ ಬಳಿ ಹೇಳಿಕೆ ನೀಡಿರುವ ಸನ್ನಿ ಲಿಯೋನ್, 'ಆ ಕಾರ್ಯಕ್ರಮವು ಹಲವು ಬಾರಿ ಮುಂದೂಡಲ್ಪಟ್ಟಿತು. ನನ್ನ ಇತರೆ ಚಿತ್ರೀಕರಣ ಹಾಗೂ ಕಾರ್ಯಕ್ರಮಗಳಿಗೆ ಆ ಕಾರ್ಯಕ್ರಮ ತೊಡಕಾಗಿತ್ತು. ಕೊನೆಗೆ ಒಂದು ದಿನ ಕಾರ್ಯಕ್ರಮ ನಡೆದು ನಾನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ನನಗೆ ಆಯೋಜನರಿಂದ ಇನ್ನೂ 12.50 ಲಕ್ಷ ಹಣ ಪಾವತಿಯಾಗಬೇಕು' ಎಂದಿದ್ದಾರೆ.

  2019 ರ ಪ್ರೇಮಿಗಳ ದಿನಾಚರಣೆ ದಿನಕ್ಕೆ ಕಾರ್ಯಕ್ರಮವನ್ನು ಆಯೋಜಿಸಿ ಸನ್ನಿ ಲಿಯೋನ್ ಗೆ ಸಂಭಾವನೆ ನೀಡಿ ಆಹ್ವಾನಿಸಲಾಗಿತ್ತು. ಆದರೆ ಆಕೆ ಆ ಕಾರ್ಯಕ್ರಮಕ್ಕೆ ಬರಲಿಲ್ಲ.

  ಸಲಾರ್ ಗೆ ಎಂಟ್ರಿ ಕೊಟ್ಟ ಕನ್ನಡದ ಸ್ಟಾರ್ ವಿಲನ್ | Filmibeat Kannada

  ಈ ಹಿಂದೆ 2018 ರಲ್ಲಿ ನಟಿ ಸನ್ನಿ ಲಿಯೋನ್ ಕೇರಳದ ಕೊಚ್ಚಿಗೆ ಕಾರ್ಯಕ್ರಮವೊಂದಕ್ಕೆ ಹೋಗಿದ್ದರು. ಆ ದಿನ ಕೊಚ್ಚಿಯಲ್ಲಿ ಸನ್ನಿ ಲಿಯೋನ್ ಅನ್ನು ನೋಡಲು ಜನಜಾತ್ರೆಯೇ ನೆರೆದಿತ್ತು. ಸಾವಿರಾರು ಮಂದಿ ಒಮ್ಮೆಲೆ ಸನ್ನಿಯನ್ನು ನೋಡಲು ಬಂದಿದ್ದದಿಂದ ಇಡೀಯ ನಗರದೆಲ್ಲೆಡೆ ಟ್ರಾಫ್ ಜಾಮ್ ಆಗಿತ್ತು. ಮಾರನೇಯ ದಿನ ಹಲವಾರು ದಿನಪತ್ರಿಕೆಗಳಲ್ಲಿ ಅದೇ ಪ್ರಮುಖ ಸುದ್ದಿಯಾಗಿಬಿಟ್ಟಿತ್ತು.

  English summary
  Kerala police record statement of actress Sunny Leone in 29 lakh rs cheating case filed by a event organizer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X