ಆ ಯುವ ರಾಜಕಾರಣಿ ನನಗೆ ಅಶ್ಲೀಲ ಮೆಸೇಜ್ ಕಳಿಸಿದ್ದ, ನನ್ನ ಹೊಟೇಲ್ ರೂಮ್‌ಗೆ ಕರೆದಿದ್ದ, ಬಾಂಬ್ ಎಸೆದ ನಟಿ
ಥಳುಕು ಬಳುಕಿನ ಚಿತ್ರರಂಗದಲ್ಲಿ ಹಲವಾರು ಕರಾಳ ಸತ್ಯಗಳು ಅಡಗಿವೆ. ಆ ಸತ್ಯಗಳು ಹೊರ ಬರಲು ಸಮಯ ಸಂದರ್ಭ ಕೂಡಿ ಬರಬೇಕಷ್ಟೇ. ಇದಕ್ಕೆ ಇನ್ನೊಂದು ಉದಾಹರಣೆ ಎನ್ನುವಂತೆ ಸದ್ಯ ಚಿತ್ರರಂಗದಲ್ಲಿ ನೆಲೆಯೂರುವ ಪ್ರಯತ್ನ ಮಾಡುವ ನಾಯಕಿಯರಿಗೆ ಕೇವಲ ಚಿತ್ರರಂಗದವರು ಮಾತ್ರ ಅಲ್ಲ, ರಾಜಕೀಯ ರಂಗದವರು ಕೂಡ ಹೇಗೆಲ್ಲಾ ಕಾಡುತ್ತಾರೆ ಎನ್ನುವ ವಿಚಾರವೊಂದು ಜಗಜ್ಜಾಹೀರಾಗಿದೆ. ಸಂಚಲನ ಸೃಷ್ಟಿಸುವುದಲ್ಲದೇ ಭಾರೀ ಚರ್ಚೆಯನ್ನು ಕೂಡ ಈ ಸುದ್ದಿ ಹುಟ್ಟು ಹಾಕಿದೆ.
ಹೌದು, ''ರಿನಿ ಆನ್ ಜಾರ್ಜ್''.. ಮಲಯಾಳಂನ ಚೆಲುವೆ. ''916 ಕುಂಜೂಟ್ಟನ್'' ಎಂಬ ಮಲಯಾಳಿ ಚಿತ್ರದಲ್ಲಿ ಅಭಿನಯಿಸಿರುವ ರಿನಿ ಹಲವು ಜಾಹೀರಾತುಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಇನ್ನು ರಿನಿ ಕೇವಲ ನಟಿ ಮಾತ್ರ ಅಲ್ಲ ''ಪತ್ರಕರ್ತೆ''ಯೂ ಹೌದು. ಜರ್ನಲಿಸ್ಟ್ ಆಗಿ ಕೂಡ ಹೆಸರು ಮಾಡಿರುವ ರಿನಿ ಆನ್ ಜಾರ್ಜ್‌ಗೆ ರಾಜಕಾರಣಿಗಳ ಸಖ್ಯ ಕೂಡ ಇದೆ.

ಇಂಥಾ ರಿನಿ ಸದ್ಯ ಯುವರಾಜಕಾರಣಿಯಿಂದ ತಮಗಾದ ಕಿರುಕುಳದ ಕುರಿತು ಮಾತನಾಡಿದ್ದಾರೆ. ಈ ಕುರಿತು ಕೌಮುದಿ ಮೂವೀಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರಿನಿ ಚಿತ್ರರಂಗ ಇರಲಿ ರಾಜಕೀಯ ಇರಲಿ ಎರಡು ಕಡೆ ಹೆಣ್ಣು ಬಾಕರು ಇದ್ದೇ ಇದ್ದಾರೆ, ಪ್ರತಿಭೆ ಇದ್ದರೂ ಕೂಡ ಮುಂದೆ ಬರಲು ಬಿಡುವುದಿಲ್ಲ ಬದಲಿಗೆ ರಾಕಿ ಮಾಡಿಕೊಳ್ಳುವಂತೆ ಒತ್ತಾಯ ಮಾಡುತ್ತಾರೆ ಎಂದು ಹೇಳಿದ್ದಾರೆ.
ಮುಂದುವರೆದು ಮೂರು ವರ್ಷದ ಹಿಂದೆ ಯುವರಾಜಕಾರಣಿಯೊಬ್ಬ ಹೊಟೇಲ್‌ನಲ್ಲಿ ನನ್ನ ಭೇಟಿಯಾಗುವಂತೆ ಹೇಳಿದ್ದ ಎಂದಿರುವ ರಿನಿ ಇದು ಮಾತ್ರವಲ್ಲದೇ ಆ ರಾಜಕಾರಣಿ ನನಗೆ ನಿರಂತರವಾಗಿ ಅಶ್ಲೀಲ ಅಸಭ್ಯ ಮೆಸೇಜ್‌ಗಳನ್ನು ಕಳುಹಿಸುತ್ತಿದ್ದ, ಸೋಶಿಯಲ್ ಮೀಡಿಯಾದಲ್ಲಿ ಕೂಡ ಕಾಡಲು ಶುರು ಮಾಡಿದ್ದ ಎಂದು ಹೇಳಿದ್ದಾರೆ.
ಇನ್ನೂ ಈ ವಿಚಾರವನ್ನು ಅವರ ಪಕ್ಷದ ಮುಖಂಡರಿಗೆ ಹೇಳುವುದಾಗಿ ನಾನು ಹೇಳಿದರೂ ಕೂಡ ಹೇಳು ಎಂದು ಆತ ಸವಾಲು ಹಾಕಿದ್ದ, ಅದರಿಂದ ಏನಾಗುತ್ತೆ ಎಂದು ವ್ಯಂಗ್ಯ ಮಾಡುತ್ತಿದ್ದ ಎಂದಿರುವ ರಿನಿ ನಾನು ಈ ಕುರಿತು ಅವರ ಪಕ್ಷದವರಿಗೆ ಮಾಹಿತಿಯನ್ನು ನೀಡಿದರು ಕೂಡ ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಬದಲಿಗೆ ವಿಷಯ ಇತ್ಯರ್ಥ ಮಾಡುತ್ತೇವೆ ಎಂದು ಹೇಳಿ ಇನ್ನು ಒಳ್ಳೆಯ ಸ್ಥಾನ ಮಾನವನ್ನು ಆ ಯುವ ರಾಜಕಾರಣಿಗೆ ಅವರು ನೀಡಿದರು ಎಂದು ಹೇಳಿದ್ದಾರೆ.
ಹಲವಾರು ಮಹಿಳೆಯರ ಜೊತೆ ಆತ ಇದೇ ರೀತಿ ವರ್ತಿಸಿದ್ದಾನೆ ಆದರೆ ಯಾರು ಮಾತನಾಡಲು ಮುಂದೆ ಬರುವುದಿಲ್ಲ, ಹಾಗಾಗಿ ನಾನು ಎಲ್ಲರ ಪರ ಮಾತನಾಡುತ್ತಿದ್ದೇನೆ ಎಂದು ಹೇಳಿರುವ ರಿನಿ ಆ ಯುವ ರಾಜಕಾರಣಿ ಮತ್ತು ಪಕ್ಷದ ಹೆಸರನ್ನು ಹೇಳಲು ನಿರಾಕರಿಸಿದ್ದಾರೆ. ಈ ವರ್ಷದ ಫೆಬ್ರುವರಿಯವರೆಗೆ ಆ ರಾಜಕಾರಣಿಯಿಂದ ನನಗೆ ಮೆಸೇಜ್‌ಗಳು ಬಂದಿವೆ ಎಂದು ಹೇಳಿದ್ದಾರೆ.

ಪೊಲೀಸರಿಗೆ ದೂರು ನೀಡಬಹುದಿತ್ತಲ್ಲ ಎನ್ನುವ ಪ್ರಶ್ನೆಗೆ ಕೂಡ ಉತ್ತರ ನೀಡಿರುವ ರಿನಿ ನಾನು ದೂರು ದಾಖಲಿಸಿದರೆ, ಅಪಾಯ ಆಗುವುದು ನನಗೆ ಮಾತ್ರ ಅದರಿಂದ ಯಾವುದೇ ಪ್ರಯೋಜನಾವಾಗುವುದಿಲ್ಲ ಎಂದು ಹೇಳಿದ್ದಾರೆ. ನಿಮ್ಮ ಜನಪ್ರತಿನಿಧಿಯನ್ನು ಜವಾಬ್ಧಾರಿಯಿಂದ ಎಚ್ಚರಿಕೆಯಿಂದ ಆಯ್ಕೆ ಮಾಡಿ ಎಂದು ಕರೆಯನ್ನು ನೀಡಿದ್ದಾರೆ.
ಸದ್ಯ ರಿನಿ ಎಲ್ಲಿಯೂ ಕೂಡ ಆ ರಾಜಕಾರಣಿಯ ಹೆಸರು ಹೇಳಿಲ್ಲವಾದರೂ, ರಿನಿಯ ಈ ಮಾತು ಕೇರಳ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಪಾಲಕ್ಕಾಡ್‌ನ ಕಾಂಗ್ರೆಸ್ ಶಾಸಕ, ಯುವ ಕಾಂಗ್ರೆಸ್ ಅಧ್ಯಕ್ಷ ''ರಾಹುಲ್ ಮಮ್‌ಕೂಟ್‌ತಿಲ್'' ಅವರ ಕಡೆ ಬಿಜೆಪಿ ಬೆರಳು ಮಾಡಿ ತೋರಿಸಿದ್ದು ರಾಜಿನಾಮೆ ನೀಡುವಂತೆ ಆಗ್ರಹಿಸಿದೆ. ಇನ್ನು ಇದಕ್ಕೆ ಪೂರಕವಾಗಿ ಲೇಖಕಿ ''ಹನಿ ಭಾಸ್ಕರನ್'' ಕೂಡ ರಾಹುಲ್ ವಿರುದ್ದ ಆರೋಪ ಮಾಡಿದ್ದು ರಾಹುಲ್ ವಿರುದ್ಧ ಹಲವು ಮಹಿಳೆಯರು ಆರೋಪ ಮಾಡಿದ್ದರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.


Click it and Unblock the Notifications











