KG George: ಮಲಯಾಳಂ ಖ್ಯಾತ ನಿರ್ದೇಶಕ ಕೆಜಿ ಜಾರ್ಜ್ (77) ನಿಧನ
ಮಲಯಾಳಂ ಚಿತ್ರರಂಗಕ್ಕೆ ಭಾನುವಾರ ಆಘಾತಕಾರಿ ದಿನವಾಗಿದೆ. ಮಲಯಾಳಂನ ಖ್ಯಾತ ನಿರ್ದೇಶಕ ಕೆಜಿ ಜಾರ್ಜ್ (77) ನಿಧನರಾಗಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸೆಪ್ಟೆಂಬರ್ 24 ರಂದು ವಿಧಿವಶರಾಗಿದ್ದಾರೆ.
ಎರ್ನಾಕುಲಂನ ಕಾಕ್ಕನಾಡ್‌ನಲ್ಲಿರುವ ವೃದ್ಧಾಶ್ರಮದಲ್ಲಿ ನಿರ್ದೇಶಕ ಕೆಜಿ ಜಾರ್ಜ್ ಕೊನೆಯುಸಿರೆಳೆದಿದ್ದಾರೆ. ವರದಿಗಳ ಪ್ರಕಾರ, ಮಲಯಾಳಂ ಚಿತ್ರರಂಗದ ದಂತಕಥೆಯಾದ ಕೆಜಿ ಜಾರ್ಜ್ ಪಾರ್ಶ್ವವಾಯುವಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಜೊತೆಗೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು.

ಕೆಜಿ ಜಾರ್ಜ್ ಮಲಯಾಳಂ ಚಲನಚಿತ್ರ ಇತಿಹಾಸದಲ್ಲಿ ಅತ್ಯಂತ ಮೆಚ್ಚುಗೆ ಪಡೆದ ನಿರ್ದೇಶಕರಲ್ಲಿ ಒಬ್ಬರು. ಅವರ ನಂತರ ಬಂದ ಅನೇಕ ಚಿತ್ರ ನಿರ್ದೇಶಕರಿಗೆ ಅವರ ಚಿತ್ರಗಳು ಸ್ಫೂರ್ತಿಯ ಮೂಲವಾಗಿದೆ. ಆದರೆ, ಅವರ ನಿಧನ ಮಲಯಾಳಂ ಚಲನಚಿತ್ರೋದ್ಯಮಕ್ಕೆ ತುಂಬಲಾರದ ನಷ್ಟವಾಗಿದೆ.
ಕೆಜಿ ಜಾರ್ಜ್ ನಿಧನಕ್ಕೆ ಗಣ್ಯರಿಂದ ಸಂತಾಪ
ಕೆಜಿ ಜಾರ್ಜ್ ನಿಧನಕ್ಕೆ ಅನೇಕ ಗಣ್ಯರು ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಸಂತಾಪ ಸೂಚಿಸಿ ಗೌರವ ಸಲ್ಲಿಸಿದ್ದಾರೆ. ಅವರ ನಿಧನದಿಂದ ಆದ ನಷ್ಟಕ್ಕೆ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಶೋಕ ವ್ಯಕ್ತಪಡಿಸಿದ್ದಾರೆ.
'ನಮ್ಮ ದೇಶದ ಶ್ರೇಷ್ಠ ಮತ್ತು ಪ್ರಭಾವಿ ಚಲನಚಿತ್ರ ನಿರ್ಮಾಪಕರಲ್ಲಿ ಒಬ್ಬರು. RIP ಕೆಜಿ ಜಾರ್ಜ್ ಸರ್" ಎಂದು ಬರಹಗಾರ ವಿವೇಕ್ ರಂಜಿತ್ ಟ್ವಿಟ್ ಮಾಡಿದ್ದಾರೆ. ಇವರ ಜೊತೆಗೆ ಮಲಯಾಳಂ ಸಿನಿರಂಗದ ಹಲವರು ದುಃಖ ವ್ಯಕ್ತಪಡಿಸಿದ್ದಾರೆ. ಚಿತ್ರರಂಗದ ಕೊಂಡಿಯೊಂದು ಕಳಚಿದೆ ಎಂದಿದ್ದಾರೆ.
ಕೆ.ಜಿ.ಜಾರ್ಜ್ ಮತ್ತು ಮಲಯಾಳಂ ಚಿತ್ರರಂಗ
ನಿರ್ದೇಶಕ ಕೆಜಿ ಜಾರ್ಜ್ ಚಿತ್ರರಂಗದಲ್ಲಿ ಪ್ರಭಾವಿ ವ್ಯಕ್ತಿಯಾಗಿದ್ದರು. ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಅನೇಕ ಪ್ರಮುಖ ನಿರ್ದೇಶಕರು ತಾವು ಸಿನಿಮಾ ರಂಗಕ್ಕೆ ಪ್ರವೇಶಿಸಲು ಕೆಜಿ ಜಾರ್ಜ್ ದೊಡ್ಡ ಪ್ರಭಾವ ಎಂದು ಹಲವು ಬಾರಿ ಉಲ್ಲೇಖಿಸಿದ್ದಾರೆ. 1980 ರ ದಶಕದಲ್ಲಿ, ಕೆಜಿ ಜಾರ್ಜ್, ಭರತನ್ ಮತ್ತು ಪದ್ಮರಾಜನ್ ಅವರಂತಹ ಇತರ ನಿರ್ದೇಶಕರ ಜೊತೆಗೆ ಮಲಯಾಳಂ ಚಿತ್ರರಂಗದಲ್ಲಿ ಚಲನಚಿತ್ರ ನಿರ್ಮಾಣದ ಹೊಸ ಶಾಲೆಯನ್ನು ಸ್ಥಾಪಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ಕೆಜಿ ಜಾರ್ಜ್ ಅವರ ನಿರ್ದೇಶನದ ಚೊಚ್ಚಲ ಚಿತ್ರ 1975 ರಲ್ಲಿ ಸ್ವಪ್ನಾದನಂ. ಈ ಚಿತ್ರವು ಕೇರಳ ರಾಜ್ಯದ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಮತ್ತು ಮಲಯಾಳಂನ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಎರಡನ್ನೂ ಗೆದ್ದುಕೊಂಡಿತು. ಚಿತ್ರವು ವಿಮರ್ಶಾತ್ಮಕ ಹಿಟ್ ಮಾತ್ರವಲ್ಲದೆ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಗಳಿಸಿತು.
ಸ್ವಪ್ನದಾನಂ ಅವರು ಕೆಜಿ ಜಾರ್ಜ್ ರೀತಿಯ ಇತರ ನಿರ್ದೇಶಕರಿಗೂ ದಾರಿ ಮಾಡಿಕೊಟ್ಟರು. ಕೆಜಿ ಜಾರ್ಜ್ ಮುಖ್ಯವಾಹಿನಿಯ ಸಿನಿಮಾದ ಸಂಪ್ರದಾಯಗಳನ್ನು ಅನುಸರಿಸಲಿಲ್ಲ. ಜೊತೆಗೆ ಜನಪ್ರಿಯ ಸಿನಿಮಾ ಅಲೆಗೆ ವಿರುದ್ಧವಾಗಿ ಸಿನಿಮಾಗಳನ್ನು ಜನರ ಮುಂದಿಟ್ಟವರು. ಈ ಮೂಲಕ ಕೆ.ಜಿ.ಜಾರ್ಜ್ ಸಿನಿಮಾರಂಗದಲ್ಲಿ ನಿಜವಾದ ಮಾರ್ಗದರ್ಶಕರಾಗಿ ಹೊರಹೊಮ್ಮಿದ್ದರು.
ಕೆಜಿ ಜಾರ್ಜ್ ಕೆಲವು ನೆನಪಿನಲ್ಲಿರಬೇಕಾದ ಸಿನಿಮಾಗಳಲ್ಲಿ ರೋಮ್ಯಾಂಟಿಕ್ ಫಿಲಂ ಉಲ್ಕ್ಕಡಲ್, ರಾಜಕೀಯ ವಿಡಂಬನೆ ಪಂಚವಡಿ ಪಾಲಂ ಮತ್ತು ಸೈಕಲಾಜಿಕಲ್ ಥ್ರಿಲ್ಲರ್ ಇರಕಲ್ ಸೇರಿವೆ. ಕೆಜಿ ಜಾರ್ಜ್ ಅವರ ಇತರ ಚಿತ್ರಗಳೆಂದರೆ ಮೇಳ, ಯವನಿಕಾ, ಲೇಖನುದೆ ಮರಣಂ ಓರು ಫ್ಲ್ಯಾಶ್‌ಬ್ಯಾಕ್, ಆದಮಿಂತೆ ವಾರಿಯೆಲ್ಲು ಮತ್ತು ಮತ್ತೋರಲ್. ಕೆ ಜಿ ಜಾರ್ಜ್ ಅವರ ಕೊನೆಯ ಚಿತ್ರ 1998 ರಲ್ಲಿ ಬಂದ ಎಲವಂಕೋಡು ದೇಶಂ. ನಟ ಮಮ್ಮುಟ್ಟಿ ಜೊತೆಗೆ ಹೆಚ್ಚು ಆಪ್ತರಾಗಿದ್ದ ಅವರು ಹೆಚ್ಚು ಸಿನಿಮಾಗಳಲ್ಲಿ ನಾಯಕನನ್ನಾಗಿ ಮಾಡಿದ್ದಾರೆ. ಇದರ ಜೊತೆಗೆ ರಾಜೀವ್, ಖುಷ್ಬು, ತಿಲಕನ್ ಮತ್ತು ಬಾಬು ನಂಬೂತಿರಿ ಅವರ ಜೊತೆಗೆ ಹೆಚ್ಚು ಕೆಲಸ ಮಾಡಿದವರು.


Click it and Unblock the Notifications










