KGF 2 v/s Beast: ಕೇರಳದಲ್ಲಿ 'ಬೀಸ್ಟ್'ಗೆ ಹೆಚ್ಚು ಚಿತ್ರಮಂದಿರ, ಆದರೂ 'ಕೆಜಿಎಫ್ 2'ದೇ ಹವಾ
'ಕೆಜಿಎಫ್ 2' ಹಾಗೂ ತಮಿಳಿನ 'ಬೀಸ್ಟ್' ಸಿನಿಮಾ ಒಟ್ಟೊಟ್ಟಿಗೆ ತೆರೆಗೆ ಬರುತ್ತಿವೆ. ಎರಡೂ ಸಿನಿಮಾಗಳ ನಿರ್ದೇಶಕರು, ತಮ್ಮ ಸಿನಿಮಾಗಳು ಪರಸ್ಪರ ಸ್ಪರ್ಧೆಗಿಳಿದಿಲ್ಲ ಎಂದು ಹೇಳಿದ್ದಾವದರೂ ಪೈಪೋಟಿ ಇರುವುದಂತೂ ಪಕ್ಕಾ.
Recommended Video

'ಕೆಜಿಎಫ್ 2' ಸಿನಿಮಾ ಏಪ್ರಿಲ್ 14 ರಂದು ಬಿಡುಗಡೆ ಆಗುತ್ತಿದ್ದರೆ, ವಿಜಯ್ ನಟನೆಯ 'ಬೀಸ್ಟ್' ಸಿನಿಮಾ ಏಪ್ರಿಲ್ 13 ರಂದು ತೆರೆಗೆ ಬರುತ್ತಿದೆ. ಹಲವು ತಿಂಗಳ ಮುಂಚೆಯೇ 'ಕೆಜಿಎಫ್ 2' ತಂಡ ಬಿಡುಗಡೆ ದಿನಾಂಕವನ್ನು ಘೋಷಿಸಿತ್ತು. ಹಾಗಿದ್ದರೂ 'ಬೀಸ್ಟ್' ಸಿನಿಮಾವನ್ನು ಉದ್ದೇಶಪೂರ್ವಕವಾಗಿ 'ಕೆಜಿಎಫ್ 2' ಸಿನಿಮಾದೆದುರು ಬಿಡುಗಡೆ ಮಾಡಲಾಗುತ್ತಿದೆ.
ಕರ್ನಾಟಕದಲ್ಲಿ ಸಹಜವಾಗಿಯೇ 'ಕೆಜಿಎಫ್ 2' ಸಿನಿಮಾದ್ದೆ ಹವಾ ಇರಲಿದೆ ಎಂಬುದು ಖಾತ್ರಿ, ಆದರೆ ನೆರೆಯ ರಾಜ್ಯಗಳಲ್ಲಿ ಹಿರಿಯ ನಟ ವಿಜಯ್‌ರ ಸಿನಿಮಾದ ಬಗ್ಗೆ ಪ್ರೇಕ್ಷಕರು ಒಲವು ತೋರಿಸಬಹುದು ಎನ್ನಲಾಗಿತ್ತು. ಆದರೆ ಅದು ಸುಳ್ಳಾಗಿದೆ. 'ಕೆಜಿಎಫ್ 2'ಗೆ ನೆರೆ ರಾಜ್ಯಗಳಲ್ಲಿ ಚಿತ್ರಮಂದಿರಗಳು ಕಡಿಮೆ ಸಿಕ್ಕರೂ ಹವಾ ಮಾತ್ರ 'ಕೆಜಿಎಫ್ 2'ನದ್ದೇ ಆಗಿದೆ.

ಕೊಚ್ಚಿಯಲ್ಲಿ 'ಕೆಜಿಎಫ್ 2' ಮುಂದೆ ಮಂಕಾದ 'ಬೀಸ್ಟ್'
ಕೇರಳ ರಾಜ್ಯದ ಕೊಚ್ಚಿಯ ಉದಾಹರಣೆ ನೋಡುವುದಾದರೆ, ಏಪ್ರಿಲ್ 08 ರವರೆಗಿನ ಮಾಹಿತಿಯಂತೆ ಕೊಚ್ಚಿಯಲ್ಲಿ ತಮಿಳಿನ 'ಬೀಸ್ಟ್' ಸಿನಿಮಾಕ್ಕೆ 842 ಶೋಗಳನ್ನು ನೀಡಲಾಗಿದೆ. ಆದರೆ 'ಕೆಜಿಎಫ್ 2' ಸಿನಿಮಾದ ಮಲಯಾಳಂ ಆವೃತ್ತಿಗೆ ಇಲ್ಲಿ ಸಿಕ್ಕಿರುವುದು ಕೇವಲ 490 ಶೋಗಳು. ಆದರೆ ಕೊಚ್ಚಿಯ ಜನ 'ಬೀಸ್ಟ್'ಗಿಂತಲೂ 'ಕೆಜಿಎಫ್ 2' ಸಿನಿಮಾ ವೀಕ್ಷಿಸಲು ಹೆಚ್ಚು ಕಾತರರಾಗಿದ್ದಾರೆ. ಅಂಕಿ-ಸಂಖ್ಯೆಗಳು ಇದನ್ನೇ ಹೇಳುತ್ತಿವೆ.

ಯಾವ ಸಿನಿಮಾಕ್ಕೆ ಎಷ್ಟು ಶೋ?
'ಬೀಸ್ಟ್' ಸಿನಿಮಾಕ್ಕೆ 842 ಶೋ, 'ಕೆಜಿಎಫ್ 2' ಸಿನಿಮಾಕ್ಕೆ 490 ಶೋಗಳಷ್ಟೆ ಸಿಕ್ಕರೂ ಸಹ ಈವರೆಗೆ ಅತಿ ಹೆಚ್ಚು ಟಿಕೆಟ್ ಸೇಲ್ ಆಗಿರುವುದು 'ಕೆಜಿಎಫ್ 2' ಸಿನಿಮಾದ್ದೆ. ಹೆಚ್ಚು ಚಿತ್ರಮಂದಿರಗಳು ಸಿಕ್ಕರೂ ಸಹ 'ಬೀಸ್ಟ್' ಸಿನಿಮಾದ 51969 ಟಿಕೆಟ್‌ಗಳಷ್ಟೆ ಈವರೆಗೆ ಸೇಲ್ ಆಗಿದೆ. ಅದೇ 'ಕೆಜಿಎಫ್ 2' ಸಿನಿಮಾದ 55,585 ಟಿಕೆಟ್‌ಗಳು ಮುಂಗಡವಾಗಿ ಮಾರಾಟಕೊಂಡಿದೆ. ಆ ಮೂಲಕ ಸ್ಪಷ್ಟವಾಗಿ 'ಬೀಸ್ಟ್' ಸಿನಿಮಾವನ್ನು 'ಕೆಜಿಎಫ್ 2' ಹಿಂದಿಕ್ಕಿದೆ.

ಕೊಚ್ಚಿಯಲ್ಲಿ ಈವರೆಗೆ 'ಕೆಜಿಎಫ್ 2' ಗಳಿಸಿದ್ದೆಷ್ಟು?
ಹೆಚ್ಚು ಚಿತ್ರಮಂದಿರ, ಹೆಚ್ಚು ಶೋಗಳು ಸಿಕ್ಕರೂ ಸಹ ಈವರೆಗೆ ಅಡ್ವಾನ್ಸ್ ಟಿಕೆಟ್ ಬುಕಿಂಗ್‌ನಿಂದ ಕೊಚ್ಚಿಯಲ್ಲಿ 'ಬೀಸ್ಟ್' ಗಳಿಸಿರುವುದು 75.90 ಲಕ್ಷ ರುಪಾಯಿಗಳಾದರೆ, 'ಕೆಜಿಎಫ್ 2' ಈವರೆಗೆ ಕೊಚ್ಚಿಯಲ್ಲಿ ಅಡ್ವಾನ್ಸ್ ಬುಕಿಂಗ್‌ನಿಂದ ಗಳಿಸಿರುವುದು 81.30 ಲಕ್ಷ ರುಪಾಯಿ. ಪ್ರತಿ ಚಿತ್ರಮಂದಿರದ ಆಕ್ಯುಪೆನ್ಸಿ ಲೆಕ್ಕಾಚಾರದಲ್ಲಿಯೂ 'ಬೀಸ್ಟ್' ಅನ್ನು 'ಕೆಜಿಎಫ್ 2' ಬೀಟ್ ಮಾಡಿದೆ. 'ಬೀಸ್ಟ್' ಸಿನಿಮಾ 23.11 ಪ್ರತಿಶತ ಆಕ್ಯುಪೆನ್ಸಿ ಹೊಂದಿದ್ದರೆ, 'ಕೆಜಿಎಫ್ 2' 40.84% ಆಕ್ಯುಪೆನ್ಸಿ ಹೊಂದಿದೆ.

ಒಂದು ಲಕ್ಷಕ್ಕೂ ಹೆಚ್ಚು ಟಿಕೆಟ್ ಮಾರಾಟ
'ಕೆಜಿಎಫ್ 2' ಸಿನಿಮಾ ದಕ್ಷಿಣ ಭಾರತದಲ್ಲಿ ಮಾತ್ರವಲ್ಲ ಉತ್ತರ ಭಾರತದಲ್ಲಿಯೂ ಭಾರಿ ಹವಾ ಸೃಷ್ಟಿಸುತ್ತಿದೆ. ಉತ್ತರ ಭಾರತದಲ್ಲಿ ಈಗಾಗಲೇ 1 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮುಂಗಡವಾಗಿ ಮಾರಾಟವಾಗಿವೆ. ಸಿನಿಮಾ ಬಿಡುಗಡೆ ವೇಳೆಗೆ ಈ ಟಿಕೆಟ್ ಸಂಖ್ಯೆ ದುಪ್ಪಟ್ಟಾಗುವ ನಿರೀಕ್ಷೆ ಇದೆ. ಇನ್ನು ಕರ್ನಾಟಕದಲ್ಲಿ ಕೆಲವು ಚಿತ್ರಮಂದಿರಗಳು ಇಂದು ಬುಕಿಂಗ್ ಓಪನ್ ಮಾಡಿದ್ದವಾದರೂ, ಏಪ್ರಿಲ್ 10 ರಿಂದ ಪೂರ್ಣವಾಗಿ ಬುಕಿಂಗ್ ಓಪನ್ ಆಗಲಿದೆ.


Click it and Unblock the Notifications











