ಮಾಲಿವುಡ್ ನಟ ದುಲ್ಕರ್ ಸಲ್ಮಾನ್‌ಗೆ ಏನಾಯ್ತು? ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ

ಮಲಯಾಳಂ ನಟ ದುಲ್ಕರ್ ಸಲ್ಮಾನ್ ಪರಭಾಷಾ ಸಿನಿರಸಿಕರಿಗೂ ಚಿರಪರಿಚಿತ. 'ಉಸ್ತಾದ್ ಹೋಟೆಲ್', 'ಕಲಿ', 'ಬೆಂಗಳೂರು ಡೇಸ್', 'ಮಹಾನಟಿ', 'ಸೀತಾರಾಮ' ರೀತಿಯ ಹಿಟ್ ಸಿನಿಮಾಗಳಿಂದ ಮೊಮ್ಮುಟಿ ಮಗ ಸ್ಟಾರ್ ನಟರಾಗಿ ಗುರ್ತಿಸಿಕೊಂಡಿದ್ಧಾರೆ. ದುಲ್ಕರ್ ಇತ್ತೀಚೆಗೆ ಭಾವನಾತ್ಮಕವಾಗಿ ಮಾತನಾಡಿರುವ ವಿಡಿಯೋ ಪೋಸ್ಟ್ ಮಾಡಿ ನಂತರ ಡಿಲೀಟ್ ಮಾಡಿದ್ದಾರೆ. ಆದರೆ ವಿಡಿಯೋ ವೈರಲ್ ಆಗಿ ಅಭಿಮಾನಿಗಳು ಆತಂಕಗೊಂಡಿದ್ದಾರೆ.

ಭಾವನಾತ್ಮಕವಾಗಿ ಮಾತನಾಡುವ ವೀಡಿಯೊ ಒಂದನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ ನೋವಿನೊಂದಿಗೆ ಎಮೋಜಿಗಳನ್ನು ಶೇರ್ ಮಾಡಿದರು. "ನಾನು ನಿದ್ದೆ ಮಾಡದೇ ಬಹಳ ಸಮಯ ಕಳೆದಿದೆ. ನಾನು ಇದೇ ಮೊದಲ ಬಾರಿಗೆ ಇಂತಹ ಅನುಭವವಾಗಿದೆ. ಇದು ನನ್ನ ಮನಸ್ಸಿನಿಂದ ಹೊರಬರಲು ಸಾಧ್ಯವಾಗದ ಹಂತವನ್ನು ತಲುಪಿದೆ. ನಾನು ಹೆಚ್ಚು ಹೇಳಲು ಬಯಸುತ್ತೇನೆ, ಆದರೆ ನನಗೆ ಅದಕ್ಕೆ ಅನುಮತಿ ಇದೆಯೋ ಅಥವಾ ಇಲ್ಲವೋ ಗೊತ್ತಿಲ್ಲ" ಎಂದಷ್ಟೇ ದುಲ್ಕರ್ ಹೇಳಿದ್ದಾರೆ. ಕೆಲ ನಿಮಿಷಗಳ ಬಳಿಕ ಅದನ್ನು ಡಿಲೀಟ್ ಮಾಡಿದ್ಧಾರೆ.

King of Kotha actor Dulquer Salmaan leaves fans worried with cryptic video

ದುಲ್ಕರ್ ವಿಡಿಯೀ ಡಿಲೀಟ್ ಮಾಡಿದರೂ ಅಷ್ಟರಲ್ಲಾಗಲೇ ಅಭಿಮಾನಿಗಳನ್ನು ಅದನ್ನು ಡೌನ್‌ಲೋಡ್ ಮಾಡಿಟ್ಟುಕೊಂಡಿದ್ದಾರೆ. ಆ ವಿಡಿಯೋ ಈಗ ವೈರಲ್ ಆಗ್ತಿದ್ದು ನೆಚ್ಚಿನ ನಟನಿಗೆ ಏನಾಯಿತು? ಈ ವಿಡಿಯೋ ಪೋಸ್ಟ್ ಮಾಡಿದ್ಯಾಕೆ? ವಿಡಿಯೋದಲ್ಲಿ ಏನನ್ನು ಹೇಳಲು ಬಯಸಿದ್ದರು? ಎಂದು ಆಂತಕಗೊಂಡಿದ್ಧಾರೆ. ಈ ಬಗ್ಗೆ ಆ ಬಳಿಕ 'ಸೀತಾರಾಮಂ' ಏನು ಪ್ರತಿಕ್ರಿಯಿಸಿಲ್ಲ.

ಅಭಿಮಾನಿಗಳಲ್ಲಿ ಆತಂಕ

ದುಲ್ಕರ್ ವಿಡಿಯೋಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡ್ತಿದ್ದಾರೆ. "ಅಷ್ಟಕ್ಕೂ ದುಲ್ಕರ್‌ಗೆ ಏನಾಯ್ತು. ಯಾಕಿಂತ ಪೋಸ್ಟ್ ಮಾಡಿದ್ದಾರೆ?" ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ದುಲ್ಕರ್ ಎಲ್ಲಾ ಓಕೆನಾ? ಏನಾದರೂ ಸಮಸ್ಯೆನಾ?" ಎಂದು ಪ್ರಶ್ನಿಸಿದ್ದಾರೆ. ದುಲ್ಕರ್ ಪೋಸ್ಟ್‌ಗೆ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ಕಾಮೆಂಟ್ ಬಂದಿತ್ತು. ಅದಕ್ಕೆ ಕೂಡಲೇ ಡಿಲೀಟ್ ಮಾಡಿದ್ದಾರೆ ಎನ್ನಲಾಗ್ತಿದೆ. ಮತ್ತೆ ಕೆಲವರು ನಿಜಕ್ಕೂ ನಟನಿಗೆ ಏನಾದರೂ ಸಮಸ್ಯೆನಾ? ಅಥವಾ ಇದೆಲ್ಲಾ ಪ್ರಚಾರದ ಗಿಮಿಕ್ಕಾ? ಎಂದು ಅನುಮಾನ ವ್ಯಕ್ತಪಡಿಸ್ತಿದ್ದಾರೆ.

King of Kotha actor Dulquer Salmaan leaves fans worried with cryptic video

'ಕಿಂಗ್ ಆಫ್ ಕೋತ' ಟೀಸರ್

ಅಂದಹಾಗೆ ದುಲ್ಕರ್ ಸಲ್ಮಾನ್ ನಟನೆಯ 'ಕಿಂಗ್ ಆಫ್ ಕೋತ' ಸಿನಿಮಾ ಟೀಸರ್ ಇತ್ತೀಚೆಗೆ ರಿಲೀಸ್ ಆಗಿತ್ತು. ಕೆಲವೇ ನಿಮಿಷಗಳಲ್ಲಿ ಲಕ್ಷ ಲಕ್ಷ ವೀವ್ಸ್ ಸಾಧಿಸಿತ್ತು. ಮಲಯಾಳಂ ಮಾತ್ರವಲ್ಲದೇ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರ್ತಿದೆ. ಕನ್ನಡದಲ್ಲಿ ರಕ್ಷಿತ್ ಶೆಟ್ಟಿ, ತೆಲುಗಿನಲ್ಲಿ ಮಹೇಶ್ ಬಾಬು, ತಮಿಳಿನಲ್ಲಿ ಸಿಂಬು, ಮಲಯಾಳಂ ಮೊಮ್ಮಟ್ಟಿ ಟೀಸರ್ ಶೇರ್ ಮಾಡಿ ತಂಡಕ್ಕೆ ಶುಭ ಹಾರೈಸಿದ್ದರು. ಟೀಸರ್ 24 ಗಂಟೆಗಳಲ್ಲಿ 9 ಮಿಲಿಯನ್‌ಗೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ.

ಗ್ಯಾಂಗ್‌ಸ್ಟರ್ ಅವತಾರದಲ್ಲಿ ದುಲ್ಕರ್

ಅಭಿಲಾಷ್ ಜೋಷಿ ನಿರ್ದೇಶನದ 'ಕಿಂಗ್ ಆಫ್ ಕೋತ' ಚಿತ್ರವನ್ನು ಜೀ ಸ್ಟೂಡಿಯೋಸ್ ಜೊತೆ ಸೇರಿ ಸ್ವತಃ ದುಲ್ಕರ್ ನಿರ್ಮಿಸಿದ್ದಾರೆ. 'KGF' ಶೈಲಿಯಲ್ಲಿ ಈ ಗ್ಯಾಂಗ್‌ಸ್ಟರ್ ಡ್ರಾಮಾ ಮೂಡಿ ಬಂದಿದೆ. ಟೀಸರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಚಿತ್ರದಲ್ಲಿ ಗ್ಯಾಂಗ್‌ಸ್ಟರ್ ಆಗಿ ದುಲ್ಕರ್ ಅಬ್ಬರಿಸಿದ್ದಾರೆ. ಅಂದಾಜು 50 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ಆಗಸ್ಟ್ 25ಕ್ಕೆ ತೆರೆಗಪ್ಪಳಿಸಲಿದೆ. ಪ್ರಸನ್ನ, ಗೋಕುಲ್ ಸುರೇಶ್, ಸರಣ್ ಶಕ್ತಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

More from Filmibeat

English summary
King of Kotha actor Dulquer Salmaan leaves fans worried with cryptic video. He Shared video in instagram and delete it shortly. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X