King Of Kotha: ಬಿಡುಗಡೆಗೂ ಮುನ್ನ ಕೇರಳದ ಕೆಜಿಎಫ್ ಎಂಬ ಬಿಲ್ಡಪ್; ಕಲೆಕ್ಷನ್‌ನಲ್ಲಿ ಕೆಜಿಎಫ್‌ಗಿಂತ ಹಿಂದೆ!

ಆಗಸ್ಟ್ 24ರ ಗುರುವಾರ ಮಲಯಾಳಂನ ಸ್ಟಾರ್‌ ನಟ ದುಲ್ಕರ್ ಸಲ್ಮಾನ್ ನಟನೆಯ ಬಹು‌ ನಿರೀಕ್ಷಿತ ಚಿತ್ರ 'ಕಿಂಗ್ ಆಫ್ ಕೊತ್ತಾ' ಬಿಡುಗಡೆಗೊಂಡಿತು.

ಚಿತ್ರ ಸೆಟ್ಟೇರಿದಾಗಿನಿಂದಲೂ ತನ್ನ ವಿಭಿನ್ನ ಪೋಸ್ಟರ್ ಹಾಗೂ ಮಾಸ್ ಎನಿಸುವ ಅಂಶಗಳಿಂದ ಸಿಕ್ಕಾಪಟ್ಟೆ ಹೈಪ್ ಹುಟ್ಟುಹಾಕಿತ್ತು. ಹೆಚ್ಚು ಮಾಸ್ ಸಿನಿಮಾಗಳನ್ನು ನಿರ್ಮಿಸದ ಮಲಯಾಳಂ ಚಿತ್ರರಂಗದಲ್ಲಿ ಹಲವು ದಿನಗಳ ನಂತರ ತಯಾರಾದ ಔಟ್ ಅಂಡ್ ಔಟ್ ಮಾಸ್ ಸಿನಿಮಾ ಇದಾಗಲಿದೆ ಎಂಬ ನಿರೀಕ್ಷೆಯನ್ನು ಹುಟ್ಟುಹಾಕಿತ್ತು ಕಿಂಗ್ ಆಫ್ ಕೊತ್ತಾ. ಭಿನ್ನ ವಿಭಿನ್ನ ಕಥಾ ಹಂದರವಿರುವ ಚಿತ್ರಗಳನ್ನು ಯಾವಾಗಲೂ ಆಯ್ದುಕೊಳ್ಳುವ ದುಲ್ಕರ್ ಸಲ್ಮಾನ್ ಮಾಸ್ ಸಿನಿಮಾವೊಂದರಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದು ಕಮ್ಮಾಟಿಪಾಡಂ ಸಿನಿಮಾದಲ್ಲಿ.

King Of Kotha collection: Movie fails to beat KGF Chapter 2 on day 1 in Kerala Box Office

ಈ ಸಿನಿಮಾ ಬಳಿಕ ದುಲ್ಕರ್ ಸಲ್ಮಾನ್ ಪ್ಯೂರ್ ಮಾಸ್ ಸಿನಿಮಾವನ್ನು ಈ ಬಾರಿ ಆಯ್ದುಕೊಂಡಿದ್ದಾರೆ. ಇನ್ನು ಈ ಚಿತ್ರದ ಟ್ರೈಲರ್ ಹಾಗೂ ಹಾಡುಗಳು ಮತ್ತು ಅವುಗಳಲ್ಲಿನ ದೃಶ್ಯ, ಕಲಾವಿದರ ವೇಷಭೂಷಣ ಸಿನಿ ರಸಿಕರಲ್ಲಿ ಕುತೂಹಲ ಕೆರಳಿಸಿತ್ತು. ತೊಂಬತ್ತರ ದಶಕದ ಸಮಯದ ರೌಡಿಸಂ ಕಥೆಯನ್ನು ಬೆಳ್ಳಿ ತೆರೆ ಮೇಲೆ ವೀಕ್ಷಿಸಲು ದುಲ್ಕರ್ ಸಲ್ಮಾನ್ ಅಭಿಮಾನಿಗಳು ಹಾಗೂ ಸಿನಿ ರಸಿಕರು ಕಾತರರಾಗಿದ್ದರು.

ಇನ್ನು ಕಿಂಗ್ ಆಫ್ ಕೊತ್ತಾ ಚಿತ್ರ ಹಾಡುಗಳು ಹಾಗೂ ಟ್ರೈಲರ್‌ನಿಂದಲೇ ಸಿಕ್ಕಾಪಟ್ಟೆ ಹವಾ ಎಬ್ಬಿಸಿತ್ತು. ಪಕ್ಕಾ ಗ್ಯಾಂಗ್‌ಸ್ಟರ್ ಸಿನಿಮಾ ಎಂಬುದನ್ನು ಟ್ರೈಲರ್‌ನ ವಿಷ್ಯುಯಲ್ಸ್ ತಿಳಿಸಿದ್ದವು. ಈ ಅಂಶಗಳನ್ನು ಕಂಡ ಮಲಯಾಳಂ ಸಿನಿ ರಸಿಕರು ಚಿತ್ರವನ್ನು ಕಿಂಗ್ ಆಫ್ ಕೊತ್ತಾ ಕೇರಳದ ಕೆಜಿಎಫ್ ಆಗಲಿದೆ, ಹೊಸ ಇತಿಹಾಸ ಬರೆಯಲಿದೆ ಎಂದು ಊಹಿಸಿದ್ದರು. ಈ ಹೈಪ್‌ಗೆ ತಕ್ಕಂತೆ ಚಿತ್ರ ಒಳ್ಳೆಯ ಮುಂಗಡ ಬುಕಿಂಗ್ ಅನ್ನೂ ಸಹ ಪಡೆದುಕೊಂಡಿತ್ತು.

ಈ ಅಡ್ವಾನ್ಸ್ ಟಿಕೆಟ್ ಬುಕಿಂಗ್ ವೇಗವನ್ನು ಕಂಡ ಮಲಯಾಳಂ ಸಿನಿ ರಸಿಕರು ಕೇರಳ ಬಾಕ್ಸ್‌ ಆಫೀಸ್‌ನಲ್ಲಿ ಮೊದಲ ದಿನ ಅತಿಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ದಾಖಲೆ ನಿರ್ಮಿಸಿರುವ ಕೆಜಿಎಫ್ ಅನ್ನು ಹಿಂದಿಕ್ಕಲಿದೆ ಎಂದೂ ಸಹ ಊಹಿಸಿದ್ದರು. ಆದರೆ ಚಿತ್ರ ಬಿಡುಗಡೆಯಾದ ಬಳಿಕ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡು ಈ ಎರಡೂ ನಿರೀಕ್ಷೆಗಳನ್ನೂ ಸಹ ಮುಟ್ಟುವಲ್ಲಿ ವಿಫಲವಾಗಿದೆ.

ಹೌದು, ಕಿಂಗ್ ಆಫ್ ಕೊತ್ತಾ ಮೊದಲ ದಿನ ಕೆಜಿಎಫ್ ಚಾಪ್ಟರ್ 2 ಚಿತ್ರದ ಕೇರಳದ ಕಲೆಕ್ಷನ್ ದಾಖಲೆಯನ್ನು ಹಿಂದಿಕ್ಕುವಲ್ಲಿ ವಿಫಲವಾಗಿದ್ದು, ಮಲಯಾಳಂ ಸಿನಿ ರಸಿಕರು ಊಹಿಸಿದ ಹಾಗೆ ಅದು ಕೇರಳದ ಕೆಜಿಎಫ್ ಸಹ ಆಗಲಿಲ್ಲ. ಅಂದಹಾಗೆ ಕಿಂಗ್ ಆಫ್ ಕೊತ್ತಾ ಕೇರಳ ಬಾಕ್ಸ್ ಅಫೀಸ್‌ನಲ್ಲಿ ಮೊದಲ ದಿನ 5.75 ಕೋಟಿ ಗಳಿಸಿತ್ತು ಹಾಗೂ ಎರಡನೇ ದಿನ ಕೇವಲ 2.05 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಕಿಂಗ್ ಆಫ್ ಕೊತ್ತಾ ಮೊದಲ ಎರಡು ದಿನಗಳಲ್ಲಿ ಕೇರಳ ಬಾಕ್ಸ್ ಆಫೀಸ್‌ನಲ್ಲಿ 7.80 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಇನ್ನು ಕೆಜಿಎಫ್ ಚಾಪ್ಟರ್ 2 ಕೇರಳದಲ್ಲಿ ಮೊದಲ ದಿನವೇ ಬರೋಬ್ಬರಿ 7.30 ಕೋಟಿ ಗಳಿಕೆ ಮಾಡಿತ್ತು. ಇಂದಿಗೂ ಸಹ ಕೇರಳ ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನ ಅತಿಹೆಚ್ಚು ಗಳಿಸಿದ ದಾಖಲೆ ಈ ಚಿತ್ರದ ಹೆಸರಿನಲ್ಲಿಯೇ ಇದೆ.

More from Filmibeat

English summary
King Of Kotha collection: Movie fails to beat KGF Chapter 2 on day 1 in Kerala Box Office .
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X