ವೈರಲ್ ಆಯ್ತು ಕಿರಾತಕ ನಟಿ ಓವಿಯಾ ಅವರ ಮತ್ತೊಂದು ವಿಡಿಯೋ, ಫ್ಯಾನ್ಸ್ ತಬ್ಬಿಬ್ಬು...!

ಜಾಹಿರಾತಿನ ಸಲುವಾಗಿ, ಸೋಶಿಯಲ್ ಸಂದೇಶವನ್ನು ನೀಡುವುದಕ್ಕಾಗಿ ಸಿನಿಮಾ ತಾರೆಯರು ಸಾಮಾಜಿಕ ಸಮಸ್ಯೆಗಳ ವಿರುದ್ಧ, ಆರೋಗ್ಯಕ್ಕೆ ಸಂಬಂಧಿಸಿದ ವಿಚಾರವಾಗಿ ಪರ ನಿಂತು ಮಾತನಾಡುತ್ತಲೇ ಇರುತ್ತಾರೆ. ತಮ್ಮ ನೆಚ್ಚಿನ ತಾರೆಯರ ಮೇಲಿನ ಪ್ರೀತಿಯಿಂದ ಬಹಳಷ್ಟು ಬದಲಾವಣೆಗಳು ಈಗಾಗಲೇ ಆಗಿವೆ. ಆಗುತ್ತಿವೆ. ಆದರೆ ಹೀಗೆ ಮಾಡಬೇಡಿ.. ಹಾಗೇ ಮಾಡಬೇಡಿ ಎಂದು ಲೆಕ್ಚರ್ ಮಾಡಿದ್ದ ಸಿನಿತಾರೆಯರೇ ಆ ಕೆಲಸ ಮಾಡಿಬಿಟ್ಟರೇ ಹೇಗೆ?

ಸದ್ಯ ಇಂತಹದ್ದೇ ವಿಚಾರವೇ ಸೋಶಿಯಲ್ ಮೀಡಿಯಾದಲ್ಲಿ ಪ್ರವರ್ಧಮಾನಕ್ಕೆ ಬಂದು ಓವಿಯಾ ಅವರ ಕಾಲೆಳೆಯುವಂತಾಗಿದೆ. ಹೌದು, ಓವಿಯಾ.. ಮಲಯಾಳಂನ ಚೆಲುವೆ. ಕಿರಾತಕ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್‌ಗೆ ಜೋಡಿಯಾಗುವ ಮೂಲಕ ಕನ್ನಡಿಗರ ಹೃದಯಕ್ಕೂ ಕನ್ನ ಹಾಕಿದವರು ಇವರು. ತಮ್ಮ ಒಂದೂವರೆ ದಶಕದ ಸಿನಿಮಾ ಪ್ರಯಾಣದಲ್ಲಿ ಖ್ಯಾತಿಯ ತುತ್ತ ತುದಿಯನ್ನೂ ತಲುಪಿ, ಏಕಾಏಕಿ ದೊಪ್ಪನೆ ಬಿದ್ದ ಓವಿಯಾ ಬಿಗ್ ಬಾಸ್‌ ಮನೆಯನ್ನೂ ಪ್ರವೇಶಿಸಿದರು. ಆದರೆ ಅಲ್ಲಿ ತಮಿಳು ನಟ ಆರವ್ ಅವರನ್ನೂ ಓನ್ ಸೈಡ್ ಲವ್ ಮಾಡಿದ್ದಷ್ಟೇ ಬಂತೇ ಹೊರತು ಬೇರೇನೂ ಗಿಟ್ಟಿರಲಿಲ್ಲ.

Kirataka actress Oviya s latest smoking video from the beach goes viral

ಇಂಥಾ ಓವಿಯಾ ಸದ್ಯ ಸಾರ್ವಜನಿಕ ಸ್ಥಳದಲ್ಲಿ ಆರಾಮಾಗಿ ಸಿಗರೇಟ್ ಸೇದಿದ್ದಾರೆ. ಧಮ್ ಎಳೆದು ಬೀಚ್‌ನಲ್ಲಿ ಓಡಾಡಿದ್ದಾರೆ. ಮೀನುಗಾರರ ಜೊತೆ ಮಾತನಾಡಿದ್ದಾರೆ. ಫೋಟೊ ತೆಗೆಸಿಕೊಂಡಿದ್ದಾರೆ. ಕಡಲ ಕಿನಾರೆಯಲ್ಲಿ ತಮ್ಮ ಸ್ನೇಹಿತೆಯ ಜೊತೆ ಸುತ್ತಾಡುತ್ತಾ ಅಲ್ಲಿಯೇ ಇದ್ದ ನಾಯಿಯ ಜೊತೆ ಆಟವನ್ನು ಆಡಿದ್ದಾರೆ. ಸದ್ಯಕ್ಕೆ ಓವಿಯಾ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಓವಿಯಾ ಖುಲ್ಲಂ ಖುಲ್ಲಾ ಸಿಗರೇಟ್ ಹೊಡೆಯುತ್ತಿರುವುದನ್ನು ಕಂಡು ಇವರ ಅಭಿಮಾನಿ ಬಳಗ ತಬ್ಬಿಬ್ಬಾಗಿದೆ.

ಇದಕ್ಕೆ ಕೈಗನ್ನಡಿ ಎನ್ನುವಂತೆ ಅನೇಕರು ಓವಿಯಾ ಅವರ ಈ ಅವತಾರ ಕಂಡು ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ. ನೀವು ಎಣ್ಣೆ ಹೊಡೆಯುತ್ತೀರಾ, ಸಿಗರೇಟ್ ಸೇದುತ್ತಿರಾ ಎನ್ನುವುದು ಗೊತ್ತಿತ್ತು ಆದರೆ ಹೀಗೆ ಸಾರ್ವಜನಿಕವಾಗಿ ಕ್ಯಾಮರಾ ಎದುರು ಧಮ್ ಎಳೆದು ಅದನ್ನು ಹಂಚಿಕೊಳ್ಳುತ್ತೀರಾ ಎಂದು ನಾವು ಅಂದುಕೊಂಡಿರಲಿಲ್ಲ ಎಂದು ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಸೆಲೆಬ್ರಿಟಿಗಳನ್ನು ಅನೇಕರು ಹಿಂಬಾಲಿಸುತ್ತಾರೆ. ಇವರ ನಡೆ ನುಡಿಯ ಮೇಲೆ ನಿಗಾ ವಹಿಸುವ ಅನೇಕರು ಇವರನ್ನೇ ತಮ್ಮ ಆದರ್ಶ ವ್ಯಕ್ತಿಯನ್ನಾಗಿ ಸ್ವೀಕರಿಸುತ್ತಾರೆ. ತಮ್ಮ ಇಷ್ಟದ ಸೆಲೆಬ್ರಿಟಿಯ ಹವ್ಯಾಸ ಮತ್ತು ಅಭ್ಯಾಸಗಳನ್ನು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳುತ್ತಾರೆ. ಹೀಗಾಗಿಯೇ ಓವಿಯಾ ವಿರುದ್ಧ ಆಕ್ರೋಶವನ್ನು ಕೂಡ ವ್ಯಕ್ತಪಡಿಸುತ್ತಿರುವ ಅನೇಕರು ಸಮಾಜಕ್ಕೆ ನೀವು ಕೊಡುತ್ತಿರುವ ಸಂದೇಶ ಏನು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಹೇಳೋದು ವೇದಾಂತ .. ತಿನ್ನೋದು ಬದನೆಕಾಯಿ ಎಂಬ ಹಿರಿಯರ ಮಾತು ನಿಮಗೆ ಹೆಚ್ಚು ಸೂಕ್ತವಾಗುತ್ತೆ ಎಂದಿದ್ದಾರೆ. ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ಸಂದೇಶವನ್ನು ಸಾರಬೇಕಾದ ನೀವೇ ಹೀಗೆ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವುದು ಎಷ್ಟು ಸರಿ ಎಂದು ಪ್ರಶ್ನೆಯನ್ನು ಕೂಡ ಮಾಡುತ್ತಿದ್ದಾರೆ.

ಇನ್ನುಳಿದಂತೆ ಓವಿಯಾ ಕೈಯಲ್ಲಿ ಸದ್ಯಕ್ಕೆ ಹೇಳಿಕೊಳ್ಳುವಂತಹ ಕೆಲಸ ಇಲ್ಲ. ಇದಕ್ಕೆ ಪುರಾವೆ ಎನ್ನುವಂತೆ ಕಳೆದ ಮೂರ್ನಾಲ್ಕು ವರ್ಷದಲ್ಲಿ ಓವಿಯಾ ಮಾಡಿದ್ದು ಕೇವಲ ಎರಡು ಸಿನಿಮಾ ಮಾತ್ರ. ಸಿನಿಮಾದ ಬದಲು ಇಲ್ಲ-ಸಲ್ಲದ ಮಾತುಗಳನ್ನಾಡುವ ಮೂಲಕವೇ ಪ್ರಚಲಿತದಲ್ಲಿರುವ ಪ್ರಯತ್ನವನ್ನು ಮಾಡುತ್ತಿರುವ ಓವಿಯಾ, ಈ ಹಿಂದೆ.. ಸಲಿಂಗಕಾಮದ ವಿಷಯ ಮಾತನಾಡಿದ್ದರು. ನನಗೆ ಗಂಡನ ಅವಶ್ಯಕತೆಯಿಲ್ಲ. ನಾನು ಮದುವೆಯಾಗಲ್ಲ , ನಾನು ಮದುವೆ ಆಗದೇ ಇರುವುದಕ್ಕೆ ನನ್ನನ್ನು ಕೆಲವರು ಸಲಿಂಗಕಾಮಿ ಎಂದು ತಿಳಿದಿದ್ದಾರೆ. ನಾನು ನೀವಂದುಕೊಂಡಂತೆ ಅಲ್ಲ ಎಂದಿದ್ದರು.

ಆ ನಂತರ ಬಿಗ್ ಬಾಸ್‌ ಮನೆಯಲ್ಲಿ ಇದ್ದು ಬಂದು, ಬಿಗ್ ಬಾಸ್‌ನ ಬ್ಯಾನ್ ಮಾಡಬೇಕೆಂದು ಆಗ್ರಹಿಸಿದರು. ಶಾಲೆಗೆ ಹೋಗಿ ಸಮಯ ಮತ್ತು ಹಣ ಹಾಳು ಮಾಡಿಕೊಂಡೆ ಎನ್ನುವ ಮೂಲಕ ಕಟು ಟೀಕೆಗೊಳಗಾದರು. 2021ರಲ್ಲಿ ನರೇಂದ್ರ ಮೋದಿ ಚೆನ್ನೈಗೆ ಆಗಮಿಸಿದ್ದಾಗ #GoBackModi ಎಂದು ಟ್ವೀಟ್ ಮಾಡುವ ಮೂಲಕ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದರು.

ಇನ್ನೂ.. ವೇಶ್ಯಾವಾಟಿಕೆಯ ಕಾನೂನುಬದ್ಧತೆ ಮತ್ತು ಲೈಂಗಿಕ ಶಿಕ್ಷಣದ ಕುರಿತು ಕೂಡ ಹಿಂದೊಮ್ಮೆ ಓವಿಯಾ ಮುಕ್ತವಾಗಿ ಮಾತನಾಡಿದ್ದರು. ವೇಶ್ಯಾವಾಟಿಕೆಯನ್ನು ಕಾನೂನು ಬದ್ಧ ಮಾಡಿದರೆ, ಅತ್ಯಾಚಾರವನ್ನು ತಡೆಗಟ್ಟಬಹುದು ಎಂಬ ಹೇಳಿಕೆಯನ್ನೂ ನೀಡಿದ್ದರು. ಅತ್ಯಾಚಾರಕ್ಕೆ ಕಡಿವಾಣ ಹಾಕಲು ಇದೊಂದು ಸೂಕ್ತ ಮಾರ್ಗ ಎಂದು ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದ್ದರು. ಎಲ್ಲರೂ ಇಂದು ಮುಖವಾಡವನ್ನು ಧರಿಸಿ ಬದುಕುತ್ತಿದ್ದಾರೆ, ಕಡ್ಡಾಯವಾಗಿ ಲೈಂಗಿಕ ಶಿಕ್ಷಣ ನೀಡಬೇಕು ಎಂದು ಆಗ್ರಹವನ್ನು ಮಾಡಿದ್ದರು.

ಹೀಗೆ ಕಾಲ ಕಾಲಕ್ಕೆ ವಿವಾದಗಳಿಂದ ಸದ್ದು ಮಾಡುತ್ತಾ, ಸುದ್ದಿಯಾಗುತ್ತಾ ಬಂದ ಓವಿಯಾ ಅವರ ಖಾಸಗಿ ವಿಡಿಯೋ ಕಳೆದ ವರ್ಷ ಲೀಕ್ ಆಗಿತ್ತು. 17 ಸೆಕೆಂಡ್‌ಗಳ ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು.

ವಿಡಿಯೋವನ್ನು ಕಣ್ತುಂಬಿಕೊಂಡವರು ವಿಡಿಯೋದಲ್ಲಿ ವ್ಯಕ್ತಿಯೊಬ್ಬನ ಜೊತೆ ಮಲಗಿರುವುದು ಓವಿಯಾನೇ ಎಂಬ ವಾದವನ್ನು ಮಾಡಿದ್ದರು. ಓವಿಯಾ ತೋಳಿನ ಮೇಲಿರುವ ಟ್ಯಾಟೂ ಇದಕ್ಕೆ ಸಾಕ್ಷಿ ಎಂದಿದ್ದರು. ಮತ್ತೂ ಕೆಲವರು ಈಗೀಗ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಳ್ಳುವರ ಸಂಖ್ಯೆ ಹೆಚ್ಚಾಗಿದೆ. ಓವಿಯಾ ಅವರದ್ದು ಎನ್ನಲಾದ ವಿಡಿಯೋ ಇದಕ್ಕೆ ಮತ್ತೊಂದು ಉದಾಹರಣೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಹದಿನೇಳು ಸೆಕೆಂಡ್‌ ಇರುವ ವಿಡಿಯೋವನ್ನು ನೋಡಿ ಅನೇಕರು ಬೆಚ್ಚಿ ಬಿದ್ದಿದ್ದರು. ಇನ್ನೂ ಕೆಲವರು ಓವಿಯಾ ಅವರಲ್ಲಿಯೇ ಈ ಕುರಿತು ಪ್ರಶ್ನೆ ಕೇಳಿದ್ದರು. ವೈರಲ್ ಆದ ವಿಡಿಯೋ ನಿಮ್ಮದೇನಾ ಎಂದಿದ್ದರು. ಇದಕ್ಕೆ ಓವಿಯಾ ಕೂಡ ಉತ್ತರವನ್ನು ನೀಡಿದ್ದರು. ನೋಡಿ ಮಜಾ ಮಾಡಿ ಎಂದು ಹೇಳಿದ್ದ ಓವಿಯಾ ಮುಂದಿನ ಬಾರಿ ಪೂರ್ತಿ ವಿಡಿಯೋವನ್ನು ಹಂಚಿಕೊಳ್ಳುವುದಾಗಿ ಕೂಡ ಹೇಳಿದ್ದರು. ಈ ಮೂಲಕ ಅಭಿಮಾನಿಗಳನ್ನು ಅಚ್ಚರಿಗೆ ದೂಡಿದ್ದರು.

ಓವಿಯಾ ಅವರ ಈ ಹೇಳಿಕೆಯಿಂದ ಅನೇಕರು ವೈರಲ್ ಆದ ವಿಡಿಯೋ ಓವಿಯಾ ಅವರದ್ದೇ ಎಂದುಕೊಂಡಿದ್ದರು. ಈಗಲೂ ಕೂಡ ಆ ವಿಡಿಯೋ ಓವಿಯಾ ಅವರದ್ದೇ ಎನ್ನುವ ವಾದವನ್ನು ಅನೇಕರು ಮಾಡುತ್ತಾರೆ. ಇದಕ್ಕೆ ಪೂರಕವಾಗಿ ಹಿಂದೆ ವಿಡಿಯೋ ವೈರಲ್ ಆದ ಬೆನ್ನಲ್ಲೇ ಓವಿಯಾ ಪೊಲೀಸ್ ಠಾಣೆಯ ಮೆಟ್ಟಿಲನ್ನೇರಿದ್ದರು. ಖಾಸಗಿ ವಿಡಿಯೋ ಲೀಕ್ ಆಗಲು ಆ ವ್ಯಕ್ತಿಯೇ ಕಾರಣ ಎಂದು ದೂರನ್ನು ನೀಡಿದ್ದರು.

ಕೇರಳದ ತ್ರಿಶೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಓವಿಯಾ, ತಮ್ಮ ಮಾಜಿ ಪ್ರಿಯಕರ ತಾರಿಖ್ ವಿರುದ್ಧ ಆರೋಪ ಮಾಡಿದ್ದರು. ಆ ವ್ಯಕ್ತಿಯ ನಡಾವಳಿಯಿಂದ ಬೇಸತ್ತು ನಾನು ಆತನಿಂದ ಇತ್ತೀಚೆಗೆ ದೂರವಾಗಿದ್ದೆ ಈ ಕಾರಣಕ್ಕೆ ನನ್ನ ವಿರುದ್ದ ಸೇಡು ತೀರಿಸಿಕೊಳ್ಳಲು ತಾರಿಖ್ ಈ ರೀತಿ ಮಾಡಿದ್ದಾನೆ. ವಿಡಿಯೋವನ್ನು ಮಾರ್ಫ್ ಮಾಡಿ ಅದನ್ನು ನನ್ನದೆಂಬಂತೆ ಬಿಂಬಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ ಈ ಮೂಲಕ ತನ್ನ ಕೋಪ ತೀರಿಸಿಕೊಳ್ಳುತ್ತಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಕೇವಲ ನನ್ನ ವಿಡಿಯೋ ಮಾತ್ರ ಅಲ್ಲ ಹಲವಾರು ಮಹಿಳೆಯರ ವಿಡಿಯೋಗಳನ್ನು ಆತ ಇದೇ ರೀತಿ ಮಾರ್ಫ್ ಮಾಡಿದ್ದಾನೆ ಎನ್ನುವ ಆರೋಪವನ್ನು ಕೂಡ ಓವಿಯಾ ಮಾಡಿದ್ದರು.

ಇಂತಹ ಓವಿಯಾ ಸದ್ಯ ಬೀಚ್‌ನಲ್ಲಿ ಸಿಗರೇಟ್ ಸೇದುವ ಮೂಲಕ ಮತ್ತೊಮ್ಮೆ ಸುದ್ದಿಯಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆಯುವದರ ಜೊತೆಗೆ ಚರ್ಚೆಗೆ ಕೂಡ ಕಾರಣವಾಗಿದ್ದಾರೆ. ಕೇವಲ 24 ಗಂಟೆಗಳಲ್ಲಿ ಎರಡು ಲಕ್ಷಕ್ಕೂ ಅಧಿಕ ಜನ ಈ ವಿಡಿಯೋವನ್ನು ಮೆಚ್ಚಿಕೊಂಡಿದ್ದು ಹಲವಾರು ಜನ ಕಾಮೆಂಟ್‌ಗಳನ್ನು ಮಾಡಿದ್ದಾರೆ.

More from Filmibeat

Read more about: oviya viral video filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X