ಮದುವೆಯಾಗಿ 14 ವರ್ಷ ಕಳೆದ್ರು ಮಕ್ಕಳಾಗದ್ದಕ್ಕೆ ಗಂಭೀರ ನಿರ್ಣಯ ಕೈಗೊಂಡ ನಟಿ ಅಭಿರಾಮಿ

ಬಹುಭಾಷಾ ನಟಿ ಅಭಿರಾಮಿ ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ. ಕೊನೆಯದಾಗಿ ಕನ್ನಡದಲ್ಲಿ ಸುದೀಪ್ ನಟನೆಯ 'ಕೋಟಿಗಿಬ್ಬ-3' ಚಿತ್ರದಲ್ಲಿ ಆಕೆ ನಟಿಸಿದ್ದರು. ವಿಶ್ವ ತಾಯಂದಿರ ದಿನಾಚರಣೆಯ ಸಂಭ್ರಮದಲ್ಲೇ ಮಲಯಾಳಿ ನಟಿ ಅಭಿರಾಮಿ ಅಭಿಮಾನಿಗಳ ಜೊತೆ ಸಿಹಿಸುದ್ದಿಯನ್ನು ಹಂಚಿಕೊಂಡಿದ್ದಾರೆ. ತಾವು ತಾಯಿಯಾಗಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಅರೇ ಗರ್ಭಿಣಿ ಆಗದೇ ಮಗು ಹೇಗೆ ಎಂದು ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಅಭಿರಾಮಿ ಪಕ್ಕದ ಮನೆ ಹುಡುಗಿಯಂತಹ ಪಾತ್ರಗಳಲ್ಲಿ ನಟಿಸಿ ಸಿನಿರಸಿಕರಿಗೆ ಹತ್ತಿರವಾಗಿದ್ದಾರೆ. ಮದುವೆ ನಂತರ ಕೂಡ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಪೋಷಕ ಪಾತ್ರಗಳಲ್ಲಿ ಮಿಂಚುತ್ತಿದ್ಧಾರೆ. 'ಕೋಟಿಗಿಬ್ಬ-3' ಚಿತ್ರದಲ್ಲಿ ಸುದೀಪ್ ತಾಯಿ ದುರ್ಗಾ ಐಎಎಸ್ ಪಾತ್ರದಲ್ಲಿ ಗಮನ ಸೆಳೆದಿದ್ದರು. 2009ರಲ್ಲಿ ನಟಿ ಅಭಿರಾಮಿ, ರಾಹುಲ್ ಪವನನ್ ಎಂಬುವವರ ಕೈ ಹಿಡಿದಿದ್ದರು. ರಾಹುಲ್ ಮಲಯಾಳಂನ ಖ್ಯಾತ ಸಾಹಿತಿ ಪುತನ್ ವಿಟಿಲ್ ನಾರಾಯಣನ್ ನಾಯರ್ ಮೊಮ್ಮಗ.

Laali haadu actress Abhirami adopts a baby girl, names her Kalki

ನಟಿ ಅಭಿರಾಮಿ ಹಾಗೂ ರಾಹುಲ್ ದಂಪತಿ ಕಳೆದ ವರ್ಷ ಒಂದು ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡಿದ್ದಾರೆ. ಮದುವೆಯಾಗಿ 14 ವರ್ಷ ಕಳೆದ್ರು ಮಕ್ಕಳು ಆಗದ ಕಾರಣಕ್ಕೆ ಆಕೆ ಈ ನಿರ್ಣಯ ಕೈಗೊಂಡಿದ್ದಾರೆ ಎಂದು ಮಾಲಿವುಡ್‌ನಲ್ಲಿ ಹೇಳಲಾಗುತ್ತಿದೆ. ಆಕೆಯ ಈ ನಿರ್ಧಾರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ತಾಯಂದಿರ ದಿನದ ಸಂಭ್ರಮದಲ್ಲೇ ತಾವು ಮಗು ದತ್ತು ಪಡೆದಿರುವ ವಿಚಾರವನ್ನು ಅಭಿರಾಮಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪತಿ ಹಾಗೂ ಮಗಳ ಫೋಟೊ ಸಮೇತ ಆಕೆ ಪೋಸ್ಟ್ ಮಾಡಿದ್ದಾರೆ.

"ಆತ್ಮೀಯ ಸ್ನೇಹಿತರೇ, ರಾಹುಲ್ ಹಾಗೂ ನಾನು ಈಗ 'ಕಲ್ಕಿ' ಎನ್ನುವ ಹೆಣ್ಣು ಮಗುವಿನ ಪೋಷಕರಾಗಿದ್ದೇವೆ ಎಂದು ಹೇಳಲು ಥ್ರಿಲ್ಲಾಗುತ್ತಿದೆ. ನಾವು ಕಳೆದ ವರ್ಷ ಮಗಳನ್ನು ದತ್ತು ಪಡೆದುಕೊಂಡಿದ್ದೆವು. ಇದು ನಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ನಾನು ಕೂಡ ತಾಯಿಯಾಗಿ ಇವತ್ತು ತಾಯಂದಿರ ದಿನ ಆಚರಿಸುತ್ತಿರುವುದಕ್ಕೆ ಬಹಳ ಸಂತೋಷವಾಗುತ್ತದೆ. ನಾನು ಹಾಗೂ ನಮ್ಮ ಕುಟುಂಬ ನನ್ನ ಹೊಸ ಪಾತ್ರ ನಿಭಾಯಿಸಲು ನಿಮ್ಮ ಆಶೀರ್ವಾದ ಕೋರುತ್ತಿದ್ದೇವೆ" ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೊ ಸಮೇತ ಬರೆದುಕೊಂಡಿದ್ದಾರೆ.

ಅಭಿರಾಮಿ ಪೋಸ್ಟ್‌ಗೆ ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್‌ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. 1995ರಲ್ಲಿ 'ಕಥಾಪುರುಷನ್' ಎನ್ನುವ ಮಲಯಾಳಂ ಚಿತ್ರದಲ್ಲಿ ನಟಿಸಿ ಬಣ್ಣದ ಲೋಕಕ್ಕೆ ಅಭಿರಾಮಿ ಎಂಟ್ರಿ ಕೊಟ್ಟರು. ನಂತರ ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿದರು. 2003ರಲ್ಲಿ ದರ್ಶನ್ ನಟನೆಯ 'ಲಾಲಿಹಾಡು' ಚಿತ್ರದಲ್ಲಿ ನಟಿಸಿ ಕನ್ನಡಿಗರ ಮನಗೆದ್ದರು. ಚಿತ್ರದಲ್ಲಿ ಗಾಯಕಿ ಸಂಗೀತಾ ಪಾತ್ರದಲ್ಲಿ ಆಕೆಯ ಅಭಿನಯ ಕನ್ನಡ ಸಿನಿರಸಿಕರ ಮನಗೆದ್ದಿತ್ತು. ಸಿನಿಮಾ ಕೂಡ ಹಿಟ್ ಆಗಿತ್ತು.

ಅದೇ ವರ್ಷ ಉಪೇಂದ್ರ ನಟನೆಯ 'ರಕ್ತ ಕಣ್ಣೀರು' ಚಿತ್ರದಲ್ಲಿ ಚಂದ್ರ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಡಿ ಗ್ಲಾಮರಸ್ ರೋಲ್‌ನಲ್ಲಿ ನಟನೆಗೆ ಅವಕಾಶ ಇದ್ದ ಮೋಹನನ ಪತ್ನಿ ಚಂದ್ರ ಆಗಿ ಮಿಂಚಿದರು. 'ಶ್ರೀರಾಮ್', 'ಚೌಕ', 'ದಶರಥ' ಕನ್ನಡದಲ್ಲಿ ಅಭಿರಾಮಿ ನಟಿಸಿದ ಇತರೆ ಸಿನಿಮಾಗಳು. ಸದ್ಯ ತಮಿಳಿನ 'ಆರ್‌ ಯು ಓಕೆ ಬೇಬಿ?' ಹಾಗೂ ಮಲಯಾಳಂನ 'ಗರುಡನ್' ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಮಗಳು ಕಲ್ಕಿ ಲಾಲನೆ ಪಾಲನೆ ಜೊತೆಗೆ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Laali haadu Actress Abhirami adopts a baby girl, names her Kalki. On the occasion of mother's Day she revealed this news and blessings. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X