ಐಟಿ ಉದ್ಯೋಗಿ ಕಿಡ್ನ್ಯಾಪ್ ಪ್ರಕರಣ; ದೂರು ದಾಖಲಾದ ಬೆನ್ನಲ್ಲೇ ತಲೆಮರೆಸಿಕೊಂಡ ನಟಿ

ಕೊಚ್ಚಿಯಲ್ಲಿ ಐಟಿ ಉದ್ಯೋಗಿಯನ್ನು ಅಪಹರಿಸಿದ ಹಲ್ಲೆ ನಡೆಸಿದ ಪ್ರಕರಣದಲ್ಲಿ ನಟಿ ಲಕ್ಷ್ಮಿ ಮೆನನ್ ಸೇರಿ ನಾಲ್ವರ ವಿರುದ್ದ ದೂರು ದಾಖಲಾಗಿದೆ. ಪ್ರಕರಣದಲ್ಲಿ ಲಕ್ಷ್ಮಿ ಮೆನನ್ ಪ್ರಮುಖ ಆರೋಪಿ ಎನ್ನಲಾಗ್ತಿದೆ. ದೂರು ದಾಖಲಾದ ಬೆನ್ನಲ್ಲೇ ಆಕೆ ತಲೆಮರೆಸಿಕೊಂಡಿದ್ದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಭಾನುವಾರ(ಆಗಸ್ಟ್ 24) ರಾತ್ರಿ ನಟಿ ಲಕ್ಷ್ಮಿ ಮೆನನ್ ತಮ್ಮ ಸ್ನೇಹಿತರ ಜೊತೆ ಬಾರ್ & ರೆಸ್ಟೋರೆಂಟ್‌ಗೆ ಹೋಗಿದ್ದಾರೆ. ಈ ವೇಳೆ ತನ್ನ ಸ್ನೇಹಿತನ ಜೊತೆ ಅಲ್ಲಿದ್ದ ಐಟಿ ಉದ್ಯೋಗಿ ಅಲಿಯಾರ್ ಶಾ ಸಲೀಮ್ ಜೊತೆಗೆ ಕಿರಿಕ್ ಆಗಿದೆ. ಮಾತಿಗೆ ಮಾತು ಬೆಳೆದು ಜಗಳ ವಿರೋಪಕ್ಕೆ ಹೋಗಿದೆ. ಬಳಿಕ ಆತನನ್ನು
ಕಾರಿನಲ್ಲಿ ಅಪಹರಿಸಿ, ಥಳಿಸಿ, ಬೆದರಿಸಿ ಬಿಟ್ಟು ಹೋಗಿದ್ದಾರೆ ಎಂದು ಆರೋಪಿಸಲಾಗಿದೆ. ಆತ ನೀಡಿದ ದೂರಿನ ಅನ್ವಯ ಪೊಲೀಸರು ಮಿಥುನ್, ಅನೀಶ್ ಮತ್ತು ಸೋನಮೋಲ್ ಎಂಬಾಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Lakshmi Menon Booked for Kidnapping and Assaulting IT Employee in Kochi

ಬಾರ್‌ನಲ್ಲಿ 2 ಗುಂಪುಗಳ ನಡುವಿನ ನಡೆದ ಕಿರಿಕ್ ಕಾರಣಕ್ಕೆ ಆತನನ್ನು ಅಪಹರಿಸಿ, ಹಲ್ಲೆ ನಡೆಸಲಾಗಿದೆ ಎಂದು ವರದಿಯಾಗಿದೆ. ಬಾರ್‌ನಿಂದ ಹೊರ ಬಂದ ಬಳಿಕ ಅಲಿಯಾರ್ ಶಾ ಸಲೀಮ್ ತನ್ನ ಕಾರಿನಲ್ಲಿ ಹೊರಟಿದ್ದಾರೆ. ಆಗ ಲಕ್ಷ್ಮಿ ಮೆನನ್ ಮತ್ತು ಸ್ನೇಹಿತರು ಆತನ ಕಾರನ್ನು ಹಿಂಬಾಲಿಸಿ, ಅಡ್ಡಗಟ್ಟಿ ಆತನನ್ನು ತಮ್ಮ ಕಾರಿನ ಒಳಕ್ಕೆ ಎಳೆದುಕೊಂಡಿದ್ದಾರೆ. ಬಳಿಕ ಆತನಿಗೆ ಥಳಿಸಿ ಬಿಟ್ಟು ಹೋಗಿದ್ದಾರೆ ಎಂದು ವರದಿಯಾಗಿದೆ. ಘಟನೆ ಸಂಬಂಧ ಎರ್ನಾಕುಲಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೇರಳದ ಕೊಚ್ಚಿಯ ತ್ರಿಪ್ಪುನಿತುರ ನಿವಾಸಿ ಲಕ್ಷ್ಮಿ ಮೆನನ್. ಕೊಚ್ಚಿಯಲ್ಲೇ ಹುಟ್ಟಿ ಬೆಳೆದ ಆಕೆ 'ರಘುವಿಂತೆ ಸ್ವಾಂತಂ ರಸಿಯಾ' ಎಂಬ ಮಲಯಾಳಂ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ ತಮಿಳು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದರು. ವಿಶಾಲ್ ಹಾಗೂ ಲಕ್ಷ್ಮಿ ಜೋಡಿ ಮೋಡಿ ಮಾಡಿತ್ತು. ಇಬ್ಬರೂ ಡೇಟಿಂಗ್ ನಡೆಸುತ್ತಿದ್ದಾರೆ, ಮದುವೆ ಕೂಡ ಆಗುತ್ತಾರೆ ಎನ್ನುವ ಊಹಾಪೋಹ ಕೇಳಿಬಂದಿತ್ತು.

'ಸುಂದರಪಾಂಡಿಯನ್', 'ಕುಟ್ಟಿ ಪುಲಿ', 'ಪಾಂಡಿಯನಾಡು', 'ನಾನ್ ಸಿಗಪ್ಪು ಮನಿದನ್', 'ಜಿಗರ್‌ತಾಂಡ', 'ಕೊಂಬನ್', 'ವೇದಾಳಂ' ಆಕೆ ನಟಿಸಿರುವ ಕೆಲ ಹಿಟ್ ಸಿನಿಮಾಗಳು. ಮಲಯಾಳಂ ಹಾಗೂ ತಮಿಳು ಸಿನಿಮಾಗಳಲ್ಲಿ ಮಾತ್ರ ಲಕ್ಷ್ಮಿ ಮೆನನ್ ಹೆಚ್ಚು ನಟಿಸಿದ್ದಾರೆ. ಫಿಲ್ಮ್‌ಫೇರ್ ಸೇರಿ ಸಾಕಷ್ಟು ಪ್ರಶಸ್ತಿಗಳನ್ನು ಲಕ್ಷ್ಮಿ ಪಡೆದಿದ್ದಾರೆ. ನಟನೆ ಮಾತ್ರವಲ್ಲ ಒಂದೆರಡು ಹಾಡುಗಳನ್ನು ಕೂಡ ಲಕ್ಷ್ಮಿ ಹಾಡಿದ್ದಾರೆ.

ನಟಿ ಲಕ್ಷ್ಮಿ ಮೆನನ್ ಹಾಗೂ ಸಹಚರರು ರಸ್ತೆಯಲ್ಲಿ ಕಾರನ್ನು ತಡೆದು ಗಲಾಟೆ ಮಾಡುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದು ಆಕೆಗೆ ಕಂಟಕವಾಗಿ ಪರಿಣಮಿಸಿದೆ. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ಅಪಹರಣಕ್ಕೆ ಬಳಸಿದ ವಾಹನ ಪತ್ತೆ ಹಚ್ಚಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಲಕ್ಷ್ಮಿ ಮೆನನ್ ವಿಚಾರಣೆ ನಡೆಸಿ ಒಂದಷ್ಟು ಪ್ರಶ್ನೆಗಳನ್ನು ಕೇಳಲು ಮುಂದಾಗಿದ್ದಾರೆ. ಆದರೆ ಆಕೆ ತಪ್ಪಿಸಿಕೊಂಡು ಓಡಾಡುತ್ತಿದ್ದ ಫೋನ್ ಕೂಡ ಸ್ವಿಚ್ ಆಫ್ ಆಗಿದೆ.

More from Filmibeat

English summary
IT Employee Kidnapped, Beaten: Actress Lakshmi Menon Accused in Kochi Incident
Read more about: kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X