ಬಿಗ್ ಬಾಸ್ ಮನೆಗೆ ಹೋಗಿಬಂದ ನಂತರ ಈ ನಟಿಯ ಬದುಕಿನಲ್ಲಿ ಏನಾಯ್ತು ? ದಾಂಪತ್ಯ ಜೀವನ ಮುರಿದು ಬಿದ್ದಿದ್ದೇಕೆ ?
ಯಾವುದೇ ಸಂಬಂಧವಾದರೂ ಸರಿ, ಅಲ್ಲಿ ಪರಸ್ಪರ ನಂಬಿಕೆ, ಪ್ರೀತಿ, ವಿಶ್ವಾಸವಿರಬೇಕು. ಇಂತಹ ಸಂಬಂಧಗಳು ಮಾತ್ರ ದೀರ್ಘಕಾಲ ಬಾಳಲು ಸಾಧ್ಯ. ಕೆಲವು ಜೋಡಿಯನ್ನು ನೋಡಿದ ಕೂಡಲೇ ಇಂತಹ ಜೋಡಿ ನಮ್ಮದಾಗಿರ ಬೇಕು ಎನ್ನುವ ಭಾವನೆಯು ಕೆಲವರಲ್ಲಿ ಮೂಡುವುದು. ಆದರೆ ಎಲ್ಲರಿಗೂ ಇಂತಹ ಭಾಗ್ಯ ಸಿಗುವುದಿಲ್ಲ. ಕೆಲವು ಸಂಬಂಧಗಳು ಹಾಗೆ ಅರ್ಧದಲ್ಲೇ ಕಳಚಿ ಹೋಗುವುದು ಇದೆ. ಇದಕ್ಕೆ ವೀಣಾ ನಾಯರ್ ಬದುಕು ಮತ್ತೊಂದು ಉದಾಹರಣೆ.
ಹೌದು, ವೀಣಾ ನಾಯರ್.. ಮಲಯಾಳಂ ಬೆಳ್ಳಿತೆರೆ ಮತ್ತು ಕಿರುತೆರೆಯ ಚಿರಪರಿಚಿತ ಮುಖ. ವೆಲ್ಲಿಮೊಂಗ ಚಿತ್ರದಲ್ಲಿನ ಇವರ ಅಭಿನಯವನ್ನು ಪ್ರೇಕ್ಷಕರು ಇನ್ನು ಮರೆತಿರಲಿಕ್ಕಿಲ್ಲ. ಇನ್ನು ವೀಣಾ ಬಿಗ್ ಬಾಸ್ ಮನೆಗೆ ಕೂಡ ಹೋಗಿ ಬಂದವರು. 2020ರಲ್ಲಿ ಮೋಹನ್ ಲಾಲ್ ಸಾರಥ್ಯದಲ್ಲಿ ನಡೆದ ಬಿಗ್ ಬಾಸ್‌ನಲ್ಲಿ ವೀಣಾ ನಾಯರ್ ಭಾಗವಹಿಸಿದ್ದರು. 63 ದಿನಗಳ ಕಾಲ ಮನೆಯಲ್ಲಿ ಉಳಿದುಕೊಂಡಿದ್ದರು.

ಆದರೆ, ದುರ್ದೈವ ಬಿಗ್ ಬಾಸ್ ಮನೆಯಿಂದ ಹೊರ ಬಂದ ಕೆಲ ದಿನಗಳ ನಂತರ ವೀಣಾ ನಾಯರ್ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ವೀಣಾ ತಮ್ಮ ಪತಿ ಆರ್‌ಜೆ ಅಮನ್ ಅವರಿಂದ ದೂರವಾಗಲಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹಬ್ಬಿತ್ತು. 2023ರಲ್ಲಿ ಈ ಸುದ್ದಿ ನಿಜಾ ಎಂದು ಒಪ್ಪಿಕೊಂಡ ಆರ್‌ಜೆ ಅಮನ್ ನಾನು ಮತ್ತು ವೀಣಾ ದೂರವಾಗಿದ್ದೇವೆ ಎಂದು ಅಧಿಕೃತವಾಗಿ ಹೇಳಿದ್ದರು. ಆದರೆ ಮಗನ ಭವಿಷ್ಯವನ್ನು ಗಮನದಲ್ಲಿಟ್ಕೊಂಡು ನಾವು ಇಬ್ಬರು ವಿಚ್ಛೇದನ ಪಡೆಯದಿರಲು ನಿರ್ಧಾರ ಮಾಡಿದ್ದೇವೆ ಎಂದು ಹೇಳಿದ್ದರು. ತಂದೆಯಾಗಿ ನನ್ನ ಜವಾಬ್ಧಾರಿಗಳನ್ನು ನಾನು ಪೂರೈಸುವೆ ಇನ್ಮೇಲೆ ವೀಣಾ ಮತ್ತು ನಾನು ಪ್ರತೈಕವಾಗಿ ವಾಸ ಮಾಡಲಿದ್ದೇವೆ ಎಂದು ಹೇಳಿದ್ದರು. ಈ ವಿಚಾರದ ಕುರಿತು ವೀಣಾ ನಾಯರ್ ಈಗ ಮಾತನಾಡಿದ್ದಾರೆ.
ಮಲಯಾಳಂನ ಯೂಟ್ಯೂಬ್ ವಾಹಿನಿಗೆ ಸಂದರ್ಶನವನ್ನು ನೀಡಿರುವ ವೀಣಾ ನಾನು ನನ್ನ ಗಂಡನಿಂದ ದೂರವಾಗಿದ್ದೇನೆ ಆದರೆ ವಿಚ್ಛೇದನ ನೀಡಿಲ್ಲ ಎಂದು ಹೇಳಿದ್ದಾರೆ. ನಮ್ಮ ಸಾಂಸಾರಿಕ ಜೀವನದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಮೊದಲು ಫೋಸ್ಟ್ ಹಂಚಿಕೊಂಡಿದ್ದು ಅವರೇ ಹಾಗಂಥ ಅವರು ಮಾಡಿದ್ದು ತಪ್ಪು ಎಂದು ನಾನು ಹೇಳುತ್ತಿಲ್ಲ ಅದು ಅವರ ಹಕ್ಕು ಎಂದಿರುವ ವೀಣಾ ನಾಯರ್ ನನ್ನ ಬದುಕಿನಲ್ಲಿ ಸ್ವಲ್ಪ ದಿನ ನೆಮ್ಮದಿ ಇರಲಿಲ್ಲ ಈಗ ನನಗೆ ನೆಮ್ಮದಿ ಸಿಕ್ಕಿದೆ ಎಂದು ಹೇಳಿದ್ದಾರೆ. ಇಬ್ಬರ ನಡುವೆ ಇರುವ ಭಿನ್ನಾಭಿಪ್ರಾಯಗಳು, ಸಮಸ್ಯೆಗಳು ಮುಂದೊಂದು ದಿನ ದೂರವಾದರೂ ಆಗಬಹುದು, ಎಲ್ಲವೂ ಅವರ ಕೈಯಲ್ಲಿದೆ ಎಂದು ಹೇಳಿರುವ ವೀಣಾ ನನ್ನ ಗಂಡನ ಬದುಕಿನಲ್ಲಿ ಬೇರೆ ಯಾರಾದರೂ ಮಹಿಳೆ ಬಂದಿದ್ದರೆ ಆಕೆಯ ಜೊತೆ ಅವರು ಮುಂದುವರೆಯಲಿ ನನಗೆ ಯಾವ ಅಭ್ಯಂತರ ಇಲ್ಲ ಎಂದು ಹೇಳಿದ್ದಾರೆ.
ಮುಂದುವರೆದು ಆರಂಭದಲ್ಲಿ ನಾನು ಈ ವಿಚಾರಗಳನ್ನೆಲ್ಲ ಗಂಭೀರವಾಗಿ ತೆಗೆದುಕೊಂಡಿದ್ದೇ, ತಲೆ ಕೆಡಿಸಿಕೊಂಡಿದ್ದೇ, ನೋವುಗಳನ್ನು ಮನದೊಳಗೆ ಇಟ್ಕೊಂಡು ಮುಖವಾಡದ ಬದುಕನ್ನು ಬದುಕುತ್ತಿದ್ದೆ ಎಂದಿರುವ ವೀಣಾ ಈಗೀಗ ನಾನು ಬದಲಾಗಿದ್ದೇನೆ ಎಂದು ಹೇಳಿದ್ದಾರೆ. ಇನ್ನು ನಮ್ಮ ಮಗ ನನ್ನ ಸದ್ಯ ಸಂತೋಷವಾಗಿದ್ದಾನೆ ನಮ್ಮಿಬ್ಬರನ್ನೂ ಜೊತೆಯಲ್ಲಿ ಅವನು ಮಿಸ್ ಮಾಡಿಕೊಳ್ಳುತ್ತಿಲ್ಲ ಎಂದಿರುವ ವೀಣಾ ಅವನ ತಂದೆ ಬಂದಾಗ ಅವನು ಅವರ ಜೊತೆ ಹೊರಗೆ ಹೋಗಿ ಸುತ್ತಾಡಿಕೊಂಡು ಬರುತ್ತಾನೆ, ನಾನು ತಾಯಿಯ ಪ್ರೀತಿಯನ್ನು ಮಾತ್ರ ನೀಡಬಹುದು ತಂದೆಯ ಪ್ರೀತಿ ಕೊಡಲು ಸಾಧ್ಯ ಇಲ್ಲ ಎಂದು ಹೇಳಿದ್ದಾರೆ. ಆ ಪ್ರೀತಿ ಅವರ ಅಪ್ಪನ ಮೂಲಕ ಅವನಿಗೆ ಸಿಗುತ್ತಿದೆ ನನಗೆ ಅಷ್ಟೇ ಸಾಕು ಎಂದು ಹೇಳಿದ್ದಾರೆ, ನಮ್ಮ ದಾಂಪತ್ಯ ಮುರಿದು ಬೀಳುವುದಕ್ಕೂ ಬಿಗ್ ಬಾಸ್‌ಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


Click it and Unblock the Notifications










