ಕರ್ನಾಟಕದಲ್ಲಿ ಅತಿಹೆಚ್ಚು ಗಳಿಸಿದ 10 ಮಲಯಾಳಂ ಚಿತ್ರಗಳು; 5 ಕೋಟಿ ದಾಟಿದ್ದು ಈ ಒಂದು ಚಿತ್ರ ಮಾತ್ರ!

ಕರ್ನಾಟಕ.. ಎಲ್ಲಾ ಭಾಷೆಯ ಸಿನಿಮಾಗಳನ್ನು ವೀಕ್ಷಿಸುವ ಸಿನಿ ರಸಿಕರನ್ನು ಒಳಗೊಂಡಿರುವ ರಾಜ್ಯ. ಇಲ್ಲಿ ಕನ್ನಡ ಚಿತ್ರಗಳು ಓಪನಿಂಗ್ ಪಡೆದುಕೊಳ್ಳುವ ಹಾಗೆ ತೆಲುಗು ಹಾಗೂ ತಮಿಳು ಸ್ಟಾರ್ ನಟರ ಚಿತ್ರಗಳೂ ಸಹ ದೊಡ್ಡ ಓಪನಿಂಗ್ ಪಡೆದುಕೊಂಡ ಉದಾಹರಣೆ ಇದೆ. ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಇಂಡಸ್ಟ್ರಿ ಹಿಟ್ ಆದ ಉದಾಹರಣೆಯೂ ಸಹ ಇದೆ.

ಇನ್ನು ಕೇವಲ ತೆಲುಗು ಹಾಗೂ ತಮಿಳು ಭಾಷೆಯ ಚಿತ್ರಗಳಿಗೆ ಮಾತ್ರವಲ್ಲದೇ ಬಾಲಿವುಡ್ ಸಿನಿಮಾಗಳಿಗೂ ಸಹ ಇದೇ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಹೀಗೆ ಎಲ್ಲಾ ಭಾಷೆಯ, ಒಳ್ಳೆಯ ಚಿತ್ರಗಳಿಗೆ ಮಾರುಕಟ್ಟೆಯಾಗಿರುವ ಕರ್ನಾಟಕದಲ್ಲಿ ಮಲಯಾಳಂ ಚಿತ್ರಗಳು ಅಷ್ಟೇನೂ ಹಿಡಿತ ಸಾಧಿಸಲು ಆಗಿರಲಿಲ್ಲ. ಈಗೀಗ ರಾಜ್ಯದಲ್ಲಿ ಮಲಯಾಳಂನ ಚಿತ್ರಗಳು ಸದ್ದು ಮಾಡುತ್ತಿವೆ. ದೊಡ್ಡ ಮೊತ್ತದ ಬ್ಯುಸಿನೆಸ್ ಮಾಡಲಾಗದಿದ್ದರೂ ಗಳಿಕೆಯ ವಿಚಾರದಲ್ಲಿ ಏರಿಕೆ ಕಾಣುತ್ತಿರುವುದು ಮಾತ್ರ ನಿಜ.

List of 10 highest grossing Malayalam films in Karnataka; 2018 tops the list

ಹೌದು, 2014ರಲ್ಲಿ ಬಿಡುಗಡೆಗೊಂಡಿದ್ದ ಬೆಂಗಳೂರು ಡೇಸ್ ಎಂಬ ಮಲಯಾಳಂ ಚಿತ್ರ ರಾಜ್ಯದಲ್ಲಿ ಎರಡು ಕೋಟಿ ಗಳಿಕೆ ಮಾಡಿ ಕರ್ನಾಟಕದಲ್ಲಿ ಎರಡು ಕೋಟಿ ಗಳಿಕೆ ಮಾಡಿದ ಮೊದಲ ಮಲಯಾಳಂ ಸಿನಿಮಾ ಎನಿಸಿಕೊಂಡಿತ್ತು. ಬಳಿಕ ಪುಲಿ ಮುರುಗನ್, ಪ್ರೇಮಮ್, ಒಡಿಯನ್, ಕುಂಬಳಂಗಿ ನೈಟ್ಸ್ ಚಿತ್ರಗಳೂ ಸಹ ಎರಡು ಕೋಟಿ ಗಳಿಕೆ ಮಾಡಿದವು.

2019ರಲ್ಲಿ ಬಿಡುಗಡೆಗೊಂಡಿದ್ದ ಮೋಹನ್ ಲಾಲ್ ನಟನೆಯ ಲೂಸಿಫರ್ ಸಿನಿಮಾ 4 ಕೋಟಿಗಿಂತ ಹೆಚ್ಚು ಗಳಿಕೆ ಮಾಡಿ ರಾಜ್ಯದಲ್ಲಿ 4 ಕೋಟಿ ಗಳಿಕೆ ಮಾಡಿದ ಮೊದಲ ಮಲಯಾಳಂ ಸಿನಿಮಾ ಎಂಬ ದಾಖಲೆಯನ್ನು ಬರೆದಿತ್ತು.

2021ರಲ್ಲಿ ತೆರೆಗೆ ಬಂದಿದ್ದ ದುಲ್ಕರ್ ಸಲ್ಮಾನ್ ನಟನೆಯ ಕುರುಪ್ ಸಿನಿಮಾ ರಾಜ್ಯದಲ್ಲಿ 3 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಕರ್ನಾಟಕದಲ್ಲಿ 3 ಕೋಟಿ ಕ್ಲಬ್ ಸೇರಿದ ಎರಡನೇ ಮಲಯಾಳಂ ಸಿನಿಮಾ ಎನಿಸಿಕೊಂಡಿತು. ನಂತರ ಕಳೆದ ವರ್ಷ ತೆರೆಗೆ ಬಂದ ಮಮ್ಮೂಟ್ಟಿ ನಟನೆಯ ಭೀಷ್ಮ ಪರ್ವಂ ಸಹ 3 ಕೋಟಿಗಿಂತ ಹೆಚ್ಚು ಗಳಿಕೆ ಮಾಡಿತ್ತು.

ಹೀಗೆ ನಿಧಾನವಾಗಿ ಕರ್ನಾಟಕದಲ್ಲಿ ಮಲಯಾಳಂ ಚಿತ್ರಗಳು ಹೆಚ್ಚೆಚ್ಚು ಗಳಿಕೆ ಮಾಡಲು ಆರಂಭಿಸಿದ್ದು, ಇದೀಗ ಈ ವರ್ಷ ತೆರೆಗೆ ಬಂದಿರುವ 2018 ಎಂಬ ಸಿನಿಮಾ ಮೂಲಕ ಮತ್ತೊಂದು ಮೈಲಿಗಲ್ಲನ್ನು ನೆಟ್ಟಿದೆ. ಹೌದು, ಕೇರಳದ ನೂತನ ಇಂಡಸ್ಟ್ರಿ ಹಿಟ್ ಎನಿಸಿಕೊಂಡಿರುವ 2018 ಚಿತ್ರ ರಾಜ್ಯದಲ್ಲಿ 5 ಕೋಟಿಗಿಂತ ಅಧಿಕ ಗಳಿಕೆ ಮಾಡುವ ಮೂಲಕ ಕರ್ನಾಟಕದಲ್ಲಿ 5 ಕೋಟಿ ಕ್ಲಬ್ ಸೇರಿದ ಮಲಯಾಳಂ ಚಿತ್ರ ಎನಿಸಿಕೊಂಡಿದೆ.

ಹಾಗಿದ್ದರೆ ರಾಜ್ಯದಲ್ಲಿ ಅತಿನೆಚ್ಚಿನ ಗಳಿಕೆ ಮಾಡಿರುವ ಹತ್ತು ಮಲಯಾಳಂ ಸಿನಿಮಾಗಳು ಯಾವುವು ಎಂಬ ಪಟ್ಟಿ ಈ ಕೆಳಕಂಡಂತಿದೆ..

1. 2018 - 5.3 ಕೋಟಿ ( ಇನ್ನೂ ಪ್ರದರ್ಶನ ಕಾಣುತ್ತಿದೆ )

2. ಲೂಸಿಫರ್ - 4.7 ಕೋಟಿ

3. ಕುರುಪ್ - 3.6 ಕೋಟಿ

4. ಭೀಷ್ಮ ಪರ್ವಮ್ - 3.45 ಕೋಟಿ

5. ಪುಲಿ ಮುರುಗನ್ - 2.6 ಕೋಟಿ

6. ರೋಮಾಂಚಂ - 2.45 ಕೋಟಿ

7. ಬೆಂಗಳೂರು ಡೇಸ್ - 2.4 ಕೋಟಿ

8. ಒಡಿಯನ್ - 2.3 ಕೋಟಿ

9. ಪ್ರೇಮಮ್ - 2.2 ಕೋಟಿ

10. ಕುಂಬಳಂಗಿ ಡೇಸ್ - 2.2 ಕೋಟಿ

More from Filmibeat

English summary
List of 10 highest grossing Malayalam films in Karnataka; 2018 tops the list. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X