twitter
    For Quick Alerts
    ALLOW NOTIFICATIONS  
    For Daily Alerts

    ಕವಿ, ಚಿತ್ರ ಸಾಹಿತಿ ರಮೇಶನ್ ನಾಯರ್ ಕೊರೊನಾದಿಂದ ಸಾವು

    |

    ಖ್ಯಾತ ಮಲಯಾಳಂ ಕವಿ ಮತ್ತು ಗೀತರಚನೆಕಾರ ಎಸ್ ರಮೇಶನ್ ನಾಯರ್ ಕೇರಳದ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ (ಜೂನ್ 18) ನಿಧನರಾದರು.

    ಕೊರೊನಾ ವೈರಸ್ ಸಂಬಂಧಿತ ತೊಂದರೆಗಳಿಂದ ಬಳಲುತ್ತಿದ್ದ ನಾಯರ್ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದರು ಎಂದು ವರದಿಯಾಗಿದೆ. ರಮೇಶನ್‌ಗೆ 73 ವರ್ಷ ವಯಸ್ಸಾಗಿತ್ತು. ಪತ್ನಿ ಪಿ ರೆಮಾ ಮತ್ತು ಮಗ ಮನು ರಮೇಶನ್ ಬಿಟ್ಟು ಅಗಲಿದ್ದಾರೆ.

    ಕೊರೊನಾದಿಂದ ತಮಿಳು ನಟ, ಛಾಯಾಗ್ರಾಹಕ ಶಮನ್ ನಿಧನಕೊರೊನಾದಿಂದ ತಮಿಳು ನಟ, ಛಾಯಾಗ್ರಾಹಕ ಶಮನ್ ನಿಧನ

    1985ರಲ್ಲಿ ತೆರೆಕಂಡ 'ಪಥಮುದುಯಂ' ಸಿನಿಮಾ ಮೂಲಕ ಎಸ್ ರಮೇಶನ್ ನಾಯರ್ ಗೀತೆ ರಚನೆಕಾರರಾಗಿ ಪರಿಚಯವಾದರು. ಈ ಸಿನಿಮಾದಲ್ಲಿ ಮೋಹನ್ ಲಾಲ್, ಊರ್ವಶಿ, ಎಂಜಿ ಸೋಮನ್ ಮತ್ತು ಟಿಜಿ ರವಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

    Poet Lyricist S Ramesan Nair Passes Away

    ಮಲಯಾಳಂ ಇಂಡಸ್ಟ್ರಿಯಲ್ಲಿ ಸುಮಾರು 500ಕ್ಕೂ ಅಧಿಕ ಹಾಡುಗಳನ್ನು ರಚಿಸಿದ್ದಾರೆ. ಕೇರಳದ ಆಲ್‌ ಇಂಡಿಯಾ ರೆಡಿಯೋ ಸಂಸ್ಥೆಯಲ್ಲಿ ಸಹ ಕೆಲಸ ಮಾಡಿದ್ದರು. 2010ರಲ್ಲಿ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ. 2018ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿದೆ.

    ನಟ ಶೇಖರ್ ಸುಮನ್ ತಾಯಿ ನಿಧನ

    Recommended Video

    Salaar ಗೆ ಬಿಗ್ ಆಫರ್ ಕೊಟ್ಟ Amazon Prime | Prabhas | Filmibeat Kannada

    ನಟ, ನಿರೂಪಕ ಶೇಖರ್ ಸುಮನ್ ಅವರ ತಾಯಿ ಜೂನ್ 17 ರಂದು ನಿಧನರಾಗಿದ್ದಾರೆ. ತಾಯಿ ಸಾವಿನ ಬಗ್ಗೆ ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಸುಮನ್, ಅಮ್ಮನ ಆತ್ಮಕ್ಕೆ ಶಾಂತಿ ಕೋರಿದರು.

    English summary
    Poet, lyricist and former staff of All India Radio S Ramesan Nair passes away.
    Saturday, June 19, 2021, 17:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X