ಶಾರ್ಟ್ ಡ್ರೆಸ್‌ನಲ್ಲಿ ಕೀರ್ತಿ ಸುರೇಶ್ ಯೋಗ: ಅನಿಮಲ್ ಫ್ಲೋ ಮಾಡಿ ಹಿರಿಹಿರಿ ಹಿಗ್ಗಿದ ಮಹಾನಟಿ

ಇತ್ತೀಚೆಗೆ ದಳಪತಿ ವಿಜಯ್ ಜೊತೆ ಕೀರ್ತಿ ಸುರೇಶ್ ಮದುವೆ ಆಗುತ್ತಾರೆ ಎನ್ನುವ ವದಂತಿ ಭಾರೀ ಸದ್ದು ಮಾಡಿತ್ತು. ಇದಕ್ಕೆಲ್ಲಾ ಆಕೆಯ ತಾಯಿ ಫುಲ್ ಸ್ಟಾಪ್ ಇಟ್ಟಿದ್ದರು. ಕೀರ್ತಿ ಸದ್ಯ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ಧಾರೆ. ಪ್ರತಿದಿನ ಆರೋಗ್ಯಕ್ಕಾಗಿ ಯೋಗ, ವ್ಯಾಯಾಮ ಮಾಡುವುದನ್ನು ಮಾಲಿವುಡ್ ಚೆಲುವೆ ತಪ್ಪಿಸುವುದಿಲ್ಲ.

mahanati Keerthy Suresh Hot Yoga Asana Video Goes Viral

ಅಂದದ ಜೊತೆಗೆ ಅಭಿನಯದಿಂದಲೂ ಮೋಡಿ ಮಾಡುವ ಚೆಲುವೆ ಫಿಟ್‌ನೆಸ್‌ಗಾಗಿ ಪ್ರತಿದಿನ ಯೋಗ ಮಾಡುತ್ತಾರೆ. 'ಮಹಾನಟಿ' ಚಿತ್ರದ ನಟನೆಗಾಗಿ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡ ಚೆಲುವೆ ಮುಂದೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. ಇತ್ತೀಚಿನ ದಿನಗಳಲ್ಲಿ ಮಹಿಳಾ ಪ್ರಧಾನ ಸಿನಿಮಾಗಳತ್ತ ಹೆಚ್ಚು ಮುಖ ಮಾಡಿದ್ದಾರೆ. ಹೊಂಬಾಳೆ ಸಂಸ್ಥೆ ನಿರ್ಮಾಣದ 'ರಘು ತಾತ' ಚಿತ್ರದಲ್ಲೂ ಕೀರ್ತಿ ಬಣ್ಣ ಹಚ್ಚಿದ್ದಾರೆ. ಒಂದ್ಕಾಲದಲ್ಲಿ ಗುಂಡಗೆ ಇದ್ದ ಚೆಲುವೆ ಇತ್ತೀಚೆಗೆ ತೂಕ ಇಳಿಸಿ ಸಣ್ಣಗಾಗಿದ್ದಾರೆ.

ಮನೆಯ ಮುಂದಿನ ಲಾನ್‌ನಲ್ಲಿ ಕೀರ್ತಿ ಸುರೇಶ್ ಯೋಗಾಸನ ಮಾಡುತ್ತಿರುವ ವಿಡಿಯೋ ಶೇರ್‌ ಮಾಡಿದ್ದಾರೆ. ಬೆಳ್ಳಂ ಬೆಳಗ್ಗೆ ಅಚ್ಚ ಹಸಿರಿನ ವಾತಾರವರಣದಲ್ಲಿ ದೇಹ ದಂಡಿಸಿದ್ದಾರೆ. "ಪ್ರಕೃತಿಯೊಂದಿಗೆ ಒಂದಾಗುವುದು ಮತ್ತು ಮೊದಲ ಬಾರಿಗೆ ಅನಿಮಲ್ ಫ್ಲೋವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ" ಎಂದು ವಿಡಿಯೋಗೆ ಕ್ಯಾಪ್ಷನ್ ಕೊಟ್ಟಿದ್ದಾರೆ. ಅನಿಮಲ್ ಫ್ಲೋ ಯೋಗಾಸನದಲ್ಲಿ ಬಹಳ ಕಠಿಣವಾದ ವ್ಯಾಯಾಮ. ದೇಹದ ಮೇಲೆ ಹಿಡಿತ ಸಾಧಿಸದೇ ಇದನ್ನು ಮಾಡಲು ಸಾಧ್ಯವಿಲ್ಲ.

mahanati Keerthy Suresh Hot Yoga Asana Video Goes Viral

ಕೀರ್ತಿ ಸುರೇಶ್ ಕಷ್ಟದ ಯೋಗಾಸನಗಳನ್ನು ಮಾಡುವುದರಲ್ಲಿ ಹಿಡಿತ ಸಾಧಿಸುತ್ತಿದ್ದಾರೆ. ಹಾಗಾಗಿ ಮೊದಲ ಬಾರಿಗೆ ಅನಿಮಲ್ ಫ್ಲೋ ಮಾಡಿ ಹಿರಿಹಿರಿ ಹಿಗ್ಗಿದ್ದಾರೆ. ಸಿನಿಮಾಗಳ ವಿಚಾರಕ್ಕೆ ಬಂದರೆ ತೆಲುಗಿನಲ್ಲಿ ನಾನಿ ಜೊತೆ 'ದಸರಾ', ಚಿರಂಜೀವಿ ಸಹೋದರಿಯಾಗಿ 'ಭೋಳಾ ಶಂಕರ್', ಮಲಯಾಳಂನಲ್ಲಿ 'ಮಾಮನನ್', ತಮಿಳಿನಲ್ಲಿ 'ಸಿರೇನ್', 'ರಘು ತಾತ' ಹಾಗೂ 'ರಿವಾಲ್ವರ್ ರಿಟಾ' ಸಿನಿಮಾಗಳಲ್ಲಿ ಕೀರ್ತಿ ಸುರೇಶ್ ನಟಿಸ್ತಿದ್ದಾರೆ.

More from Filmibeat

English summary
Keerthy Suresh Hot Yoga Asana Video Goes Viral. Mahanati Now working In Telugu, tamil and malayalam films. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X