For Quick Alerts
  ALLOW NOTIFICATIONS  
  For Daily Alerts

  ಅದನ್ನು ಧರಿಸದೇ ಹೋದ್ರೆ ಬೆತ್ತಲೆಯಾಗಿ ಕಾಣಿಸುತ್ತಾರೆ!

  By ರವೀಂದ್ರ ಕೋಟಕಿ
  |

  ಕಾಲಿವುಡ್ ನಾಯಕಿ ನಟಿ ಮಾಳವಿಕಾ ಮೋಹನನ್ ಮಾತುಗಳು ಅವಳಷ್ಟೇ ತುಂಬಾ ಬೋಲ್ಡ್. ಮಾಳವಿಕಾ "ಮಾಸ್ಟರ್" ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ನಟಿಸಿ ಜನಪ್ರಿಯರಾದರು.

  ಈ ಬೋಲ್ಡ್ ನಟಿ ಸದ್ಯ ಹೈದರಾಬಾದ್ ನಲ್ಲಿ ಸಿನಿಮಾದ ಚಿತ್ರೀಕರಣದಲ್ಲಿದ್ದಾರೆ. ಚಿತ್ರೀಕರಣದ ಸ್ಥಳದಲ್ಲಿ ಪಾತ್ರಕ್ಕೆ ಹೊಂದಿಕೊಳ್ಳಬೇಕು. ಹೀಗಾಗಿ ಫೇಸ್ ಮಾಸ್ಕ್ ಧರಿಸುವಂತಿಲ್ಲ. 'ಶೂಟಿಂಗ್ ದೃಶ್ಯಕ್ಕಾಗಿ ಮುಖವಾಡವನ್ನು ತೆಗೆದು ಪಕ್ಕಕ್ಕೆ ಹಾಕಿದರೆ, ಎಲ್ಲರ ಮುಂದೆ ಬೆತ್ತಲಾಗಿ ಕಾಣುತ್ತೇವೆ' ಎಂದು ಈ ನಟಿ ಹೇಳುತ್ತಾರೆ.

  "ಹೊರಹೋಗುವಾಗ ಮಾಸ್ಕ್ ಧರಿಸುವುದು ಈಗ ನಿತ್ಯದ ಚಟುವಟಿಕೆಯಾಗಿದೆ. ಆದರೆ ಶೂಟಿಂಗ್ ಸಮಯದಲ್ಲಿ ಮಾಸ್ಕ್ ಧರಿಸುವಂತಿರಲಿಲ್ಲ. ಮುಂದಿನ ಚಿತ್ರೀಕರಣವು ಹೊರಾಂಗಣ ಸ್ಥಳದಲ್ಲಿತ್ತು. ಚಿತ್ರೀಕರಣ ನೋಡಲು ಜನಸಾಗರವೇ ಹರಿದು ಬಂದಿತು. ಆದರೆ ಆ ಸಂದರ್ಭದಲ್ಲಿ ನಾನು ಮಾಸ್ಕ್ ಧರಿಸಿರಲಿಲ್ಲ. ಮಾಸ್ಕ್ ಇಲ್ಲದೆ ಹೋದರೆ ನಗ್ನವಾಗಿ ಇದ್ದಂತೆ ಭಾಸವಾಗುತ್ತಿತ್ತು. ಮುಖಕ್ಕೆಮಾಸ್ಕ್ ಇಲ್ಲದೆ ಈಗ ಜನರನ್ನು ಊಹಿಸಿಕೊಳ್ಳುವುದು ಕೂಡ ಕಷ್ಟವಾಗುತ್ತಿದೆ. ಮುಖವಾಡ ಈಗ ನಮ್ಮ ಡ್ರೆಸ್ಸಿಂಗ್‌ನ ಒಂದು ಭಾಗವಾಗಿದೆ, "ಎಂದು ಅವರು ಸಂದರ್ಶನವೊಂದರಲ್ಲಿ ಅಭಿಪ್ರಾಯಪಟ್ಟಿದ್ದಾರೆ.

  ಈ ಮುದ್ದು ಬೊಂಬೆ ಹೇಳಿದ ಮಾತನ್ನು ಕೇಳಿಯಾದರೂ ಅವಳ ಅಭಿಮಾನಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿ ಓಡಾಡಬಹುದೇನೋ?!

  ಮಾಳವಿಕಾ ಮೋಹನನ್ ಹೀಗೆ ಬೋಲ್ಡ್ ಹೇಳಿಕೆಗಳನ್ನು ನೀಡುತ್ತಿರುವುದು ಮೊದಲೇನೂ ಅಲ್ಲ. ಈ ಹಿಂದೆ 'ಮಾಸ್ಟರ್' ಸಿನಿಮಾಕ್ಕೆ ಸಂಬಂಧಿಸಿದಂತೆ ಅಭಿಮಾನಿಗಳು ಮಾಡಿದ್ದ ಕಾರ್ಟೂನ್ ಒಂದರಲ್ಲಿ ಮಾಳವಿಕಾ ಮೋಹನನ್ ಅಡುಗೆ ಮಾಡುತ್ತಿರುವಂತೆ ಚಿತ್ರಿಸಲಾಗಿತ್ತು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಮಾಳವಿಕಾ ಮೋಹನನ್ 'ಮಹಿಳೆಗೆ ಇಲ್ಲಿಯೂ ಅಡುಗೆ ಕೆಲವನ್ನೇ ಕೊಟ್ಟಿರಾ' ಎಂದಿದ್ದರು. ನಟಿಯ ಪ್ರತಿಕ್ರಿಯೆಗೆ ವಿಜಯ್ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಕೊನೆಗೆ ಒತ್ತಡಕ್ಕೆ ಒಳಗಾಗಿ ಟ್ವೀಟ್ ಡಿಲೀಟ್ ಮಾಡಿದರು ನಟಿ.

  ಮಲಯಾಳಂ ಸುಂದರಿ ಮಾಳವಿಕಾ ಮೋಹನನ್ ಕನ್ನಡದಲ್ಲಿ 'ನಾನು ಮತ್ತು ವರಮಹಾಲಕ್ಷ್ಮಿ' ಸಿನಿಮಾದಲ್ಲಿ ನಟಿಸಿದ್ದಾರೆ. ರಜನೀಕಾಂತ್ ಜೊತೆಗೆ 'ಪೆಟ್ಟಾ', ವಿಜಯ್ ಜೊತೆಗೆ 'ಮಾಸ್ಟರ್', ಇದೀಗ ಧನುಷ್ ಜೊತೆಗೆ 'ಮಾರನ್' ಹಾಗೂ ಹಿಂದಿಯಲ್ಲಿ 'ಯುದ್ರ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  English summary
  Actress Malavika Mohanan talked about importance of wearing mask. She said it feel naked if u did not wear a mask.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X