For Quick Alerts
  ALLOW NOTIFICATIONS  
  For Daily Alerts

  ಲಾಕ್‌ಡೌನ್ ನಡುವೆ ಎರಡನೇ ಮದುವೆಯಾದ ಮಲೆಯಾಳಂ ಖ್ಯಾತ ನಟ

  |

  ಕೊರೊನಾ ಲಾಕ್‌ಡೌನ್‌ನಿಂದಾಗಿ ವಿವಾಹಗಳೆಲ್ಲವೂ ಸರಳವಾಗಿಯೇ ಆಗುತ್ತಿವೆ. ಅದ್ಧೂರಿ ವಿವಾಹವಾಗುವ ಚಟಹೊಂದಿರುವ ಸೆಲೆಬ್ರಿಟಿಗಳೂ ಸಹ ಅನಿವಾರ್ಯವಾಗಿ ಸರಳವಾಗಿಯೇ ವಿವಾಹವಾಗುತ್ತಿದ್ದಾರೆ.

  ಗ್ಲ್ಯಾಮರ್ ಲುಕ್ ನಲ್ಲಿ ಜೂನಿಯರ್ ಪುಟ್ಟಗೌರಿ | Saniya | Junior Puttagowri | Then - Now

  ನಿಖಿಲ್ ಕುಮಾರಸ್ವಾಮಿ ಮದುವೆಯ ಬಹು ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆ ನಡೆದಿತ್ತು, ಆದರೆ ಕೊರೊನಾ ದಿಂದಾಗಿ ಅನಿವಾರ್ಯವಾಗಿ ಸರಳವಾಗಿ ಮದುವೆ ಮಾಡಿಮುಗಿಸಿದರು ಮಾಜಿ ಸಿಎಂ ಕುಮಾರಸ್ವಾಮಿ.

  ಅಂತೆಯೇ ಈ ಲಾಕ್‌ಡೌನ್ ಮಧ್ಯೆ ಕೆಲವು ನಟ-ನಟಿಯರು ಸರಳವಾಗಿ ಮದುವೆಯಾಗಿದ್ದಾರೆ. ಇದೇ ಸಾಲಿಗೆ ಸೇರಿದ್ದಾರೆ ಮಲೆಯಾಳಂ ನ ಖ್ಯಾತ ನಟ ಚೆಂಬನ್ ವಿನೋದ್ ಜೋಸ್.

  ಮಲೆಯಾಳಂ ಖ್ಯಾತ ನಟರಲ್ಲಿ ಒಬ್ಬರು

  ಮಲೆಯಾಳಂ ಖ್ಯಾತ ನಟರಲ್ಲಿ ಒಬ್ಬರು

  ಮಲೆಯಾಳಂ ನ ಹಲವು ಸಿನಿಮಾಗಳಲ್ಲಿ ಪೋಷಕರ ಪಾತ್ರ, ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಕಪ್ಪನೆಯ, ಅಜಾನುಭಾಹು ನಟ ಚೆಂಬನ್ ವಿನೋದ್ ಜೋಸ್. ಅವರಿಗಿದು ಎರಡನೇ ಬಾರಿಗೆ ಮದುವೆಯಾಗಿದ್ದಾರೆ.

  ಸರಳವಾಗಿ ವಿವಾಹವಾದ ಚೆಂಬನ್

  ಸರಳವಾಗಿ ವಿವಾಹವಾದ ಚೆಂಬನ್

  ಕೇರಳದ ಕೊಟ್ಟಾಯಂ ನ ಮರಿಯಮ್ ಜೋಸೆಫ್ ಎಂಬ ಸಮಾಜಶಾಸ್ತ್ರಜ್ಞೆಯನ್ನು ಚೆಂಬನ್ ವಿವಾಹವಾಗಿದ್ದಾರೆ. ಲಾಕ್‌ಡೌನ್ ಇದ್ದ ಕಾರಣ ಅತ್ಯಂತ ಸರಳವಾಗಿ ಈ ಮದುವೆ ನೆರವೇರಿದೆ. ಹೊಸ ಜೋಡಿಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

  ಚೆಂಬನ್ ಗೆ ಇದು ಎರಡನೇ ಮದುವೆ

  ಚೆಂಬನ್ ಗೆ ಇದು ಎರಡನೇ ಮದುವೆ

  ಚೆಂಬನ್ ವಿನೋದ್ ಜೋಸ್ ಅವರಿಗೆ ಇದು ಎರಡನೇ ಮದುವೆ. ಮೊದಲಿಗೆ ಇವರು ಸುನಿತಾ ಎಂಬ ವೈದ್ಯೆಯನ್ನು ವಿವಾಹವಾಗಿದ್ದರು. ಅವರು ನ್ಯೂಯಾರ್ಕ್‌ ನಲ್ಲಿ ನೆಲೆಸಿದ್ದರು. ನಂತರ ಇಬ್ಬರೂ ವಿಚ್ಛೇಧನ ಪಡೆದವರು.

  ಹಲವು ಸಿನಿಮಾಗಳಲ್ಲಿ ನಟಿಸಿರುವ ಚೆಂಬನ್

  ಹಲವು ಸಿನಿಮಾಗಳಲ್ಲಿ ನಟಿಸಿರುವ ಚೆಂಬನ್

  ಚೆಂಬನ್ ಅವರು 2010 ರಲ್ಲಿ 'ನಾಯಗನ್' ಮಲೆಯಾಳಂ ಸಿನಿಮಾ ಉದ್ಯಮ ಪ್ರವೇಶಿಸಿದರು. ತಮಿಳು, ಮರಾಠಿ ಸಿನಿಮಾಗಳಲ್ಲಿಯೂ ನಟಿಸಿರುವ ಇವರ ಖಲಿ, ಒಪ್ಪಂ, ಟ್ರ್ಯಾನ್ಸ್, ಜಲ್ಲಿಕಟ್ಟು, ಅಂಗಮಲೈ ಡೈರೀಸ್, ಚಾರ್ಲಿ ಖ್ಯಾತ ಸಿನಿಮಾಗಳು.

  English summary
  Malayalam famous actor Chemban Vinod Jose married to Mariam Thomas today in Kerala. Its his second marriage.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X