For Quick Alerts
  ALLOW NOTIFICATIONS  
  For Daily Alerts

  ಮಲಯಾಳಂ ಚಲನಚಿತ್ರ ನಟ ಕೆಟಿಎಸ್ ಪಡನ್ನಯಿಲ್ ನಿಧನ

  |

  ಮಲಯಾಳಂ ಚಿತ್ರರಂಗದ ಹಿರಿಯ ಕಲಾವಿದ ಕೆ.ಟಿ.ಎಸ್ ಪಡನ್ನಯಿಲ್ (ಕೆ.ಟಿ.ಸುಬ್ರಮಣಿಯನ್ ಪಡನ್ನಯಿಲ್) ಗುರುವಾರ ಬೆಳಗ್ಗೆ (ಜುಲೈ 22) 6.40ರ ಸಮಯಕ್ಕೆ ನಿಧನರಾಗಿದ್ದಾರೆ ಎಂಬ ಸುದ್ದಿ ವರದಿಯಾಗಿದೆ.

  88 ವರ್ಷದ ಕೆ.ಟಿ.ಎಸ್ ಪಡನ್ನಯಿಲ್ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಜುಲೈ 19 ರಂದು ಕೊಚ್ಚಿಯ ಕಡವಂತರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

  ರಾಷ್ಟ್ರಪ್ರಶಸ್ತಿ ಪುರಸ್ಕೃತ ಖ್ಯಾತ ನಟಿ ಸುರೇಖಾ ಸಿಕ್ರಿ ನಿಧನರಾಷ್ಟ್ರಪ್ರಶಸ್ತಿ ಪುರಸ್ಕೃತ ಖ್ಯಾತ ನಟಿ ಸುರೇಖಾ ಸಿಕ್ರಿ ನಿಧನ

  ಹಿರಿಯ ಕಲಾವಿದ ಕೆ.ಟಿ.ಎಸ್ ಪಡನ್ನಯಿಲ್ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ನಟ ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

  ಮೂಲತಃ ರಂಗಭೂಮಿ ಕಲಾವಿದರಾಗಿದ್ದ ಕೆ.ಟಿ.ಎಸ್ ಪಡನ್ನಯಿಲ್ 90ರ ದಶಕದಲ್ಲಿ ಮಲಯಾಳಂ ಚಿತ್ರರಂಗ ಪ್ರವೇಶಿಸಿದರು. 1995 ರಲ್ಲಿ ರಾಜಸೇನನ್ ನಿರ್ದೇಶನದಲ್ಲಿ ಬಿಡುಗಡೆಯಾದ 'ಅನಿಯನ್ ಬಾವಾ ಚೆಟ್ಟನ್ ಬಾವಾ' ಸಿನಿಮಾದಲ್ಲಿ ಮೊದಲ ನಟಿಸಿದರು.

  ಇಂದ್ರಜಿತ್ ಮೀಟರ್ ನ ಮೆಚ್ಚಲೇ ಬೇಕು

  ಸುಮಾರು ಎರಡು ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಕೆ.ಟಿ.ಎಸ್ಸುಮಾರು 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಹಾಸ್ಯಮಯ ಪಾತ್ರಗಳಿಂದ ಹೆಚ್ಚು ಖ್ಯಾತಿ ಗಳಿಸಿಕೊಂಡಿದ್ದರು.

  ಕೆ.ಟಿ.ಎಸ್ ಪಡನ್ನಯಿಲ್ ಅವರು ಪತ್ನಿ ರಮಣಿ ಹಾಗೂ ನಾಲ್ವರು ಮಕ್ಕಳಾದ ಸ್ವಪ್ನಾ, ಶ್ಯಾಮ್, ಸಣ್ಣನ್ ಹಾಗೂ ಸಾಲಿಜಾನ್‌ರನ್ನು ಅಗಲಿದ್ದಾರೆ.

  English summary
  Malayalam film actor KTS Padannayil, known for his comedy roles, passed away on Thursday (july 22) morning.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X