twitter
    For Quick Alerts
    ALLOW NOTIFICATIONS  
    For Daily Alerts

    ಸೂಪರ್ ಹಿಟ್ ಆದರೂ ಟೀಕೆಗಳಿಗೆ ಗುರಿಯಾದ 'ದೃಶ್ಯಂ-2': ಮೌನ ಮುರಿದ ಮೋಹನ್ ಲಾಲ್

    |

    ಮಲಯಾಳಂ ಖ್ಯಾತ ನಟ ಮೋಹನ್ ಲಾಲ್ ಅಭಿನಯದ ದೃಶ್ಯಂ-2 ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ. 2013ರಲ್ಲಿ ರಿಲೀಸ್ ಆಗಿದ್ದ ದೃಶ್ಯಂ ಸಿನಿಮಾದ ಮುಂದುವರೆದ ಭಾಗ ಇದಾಗಿದ್ದು, ಜಾರ್ಜ್ ಕುಟ್ಟಿಯ ಚಾಕಚಕ್ಯತೆಗೆ ಅಭಿಮಾನಿಗಳು ಮನಸೋತಿದ್ದಾರೆ.

    ಫೆಬ್ರವರಿ 19ರಂದು ಒಟಿಟಿಯಲ್ಲಿ ರಿಲೀಸ್ ಆಗಿರುವ ದೃಶ್ಯಂ-2ಗೆ ಮಲಯಾಳಂ ಮಾತ್ರವಲ್ಲದೆ ಬೇರೆ ಬೇರೆ ಭಾಷೆಯ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾ ಪಾರ್ಟ್ -1 ಮತ್ತು ಪಾರ್ಟ್-2 ಯಶಸ್ಸಿನ ಬಳಿಕ ಸಿನಿಮಾ ತಂಡ ದೃಶ್ಯಂ ಪ್ರಾಂಚೈಸಿಯನ್ನು ಮುಂದುವರೆಸಲು ಸಹ ನಿರ್ಧರಿಸಿದೆ.

    ದೃಶ್ಯಂ-2 ಸಕ್ಸಸ್: ಪಾರ್ಟ್-3ಗೆ ಸಜ್ಜಾದ ನಟ ಮೋಹನ್ ಲಾಲ್ ಮತ್ತು ನಿರ್ದೇಶಕ ಜೀತು ಜೋಸೆಫ್ದೃಶ್ಯಂ-2 ಸಕ್ಸಸ್: ಪಾರ್ಟ್-3ಗೆ ಸಜ್ಜಾದ ನಟ ಮೋಹನ್ ಲಾಲ್ ಮತ್ತು ನಿರ್ದೇಶಕ ಜೀತು ಜೋಸೆಫ್

    ಈ ನಡುವೆ ದೃಶ್ಯಂ-2 ಸೂಪರ್ ಸಕ್ಸಸ್ ಆಗುತ್ತಿದ್ದಂತೆ ಬೇರೆ ಬೇರೆ ಭಾಷೆಗೆ ರಿಮೇಕ್ ಆಗುವ ಬಗ್ಗೆ ಚರ್ಚೆ ನಡೆಯುತ್ತಿದ್ದು, ಈಗಾಗಲೇ ತೆಲುಗಿನಲ್ಲಿ ದೃಶ್ಯಂ-2 ಸೆಟ್ಟೇರಿದೆ. ಎಲ್ಲಾ ಕಡೆಯಿಂದನೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೂ ಸಹ ಟೀಕೆಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಮುಂದೆ ಓದಿ..

    ದೃಶ್ಯಂ-2 ಟೀಕೆಗೆ ಗುರಿಯಾಗಿದ್ದೇಕೆ?

    ದೃಶ್ಯಂ-2 ಟೀಕೆಗೆ ಗುರಿಯಾಗಿದ್ದೇಕೆ?

    ಅಷ್ಟಕ್ಕೂ ದೃಶ್ಯಂ-2 ಟೀಕೆಗಳಿಗೆ ಗುರಿಯಾಗಲು ಕಾರಣವವಾಗಿದ್ದು, ಒಟಿಟಿಯಲ್ಲಿ ರಿಲೀಸ್. ಹೌದು, ಚಿತ್ರಮಂದಿರದ ಬದಲು ಒಟಿಟಿಯಲ್ಲಿ ಬಿಡುಗಡೆಯಾಗಿದೆ ಎನ್ನುವ ಕಾರಣಕ್ಕೆ ಅನೇಕರು ಪ್ರದರ್ಶಕರು ಮತ್ತು ಸಿನಿಮಾ ವಿಶ್ಲೇಷಕರು ಅಸಮಾಧಾನ ಹೊರಹಾಕಿದ್ದರು. ಸ್ಟಾರ್ ನಟರನ್ನಾಗಿ ಮಾಡಿದ್ದು ಚಿತ್ರಮಂದಿರಗಳು ಆದರೀಗ ಅವರು ಒಟಿಟಿ ಕಡೆ ಮುಖಮಾಡುತ್ತಿದ್ದಾರೆ ಎಂದು ಟೀಕಿಸಿದ್ದರು.

    ಮೋಹನ್ ಲಾಲ್ ಪ್ರತಿಕ್ರಿಯೆ

    ಮೋಹನ್ ಲಾಲ್ ಪ್ರತಿಕ್ರಿಯೆ

    ಈ ಬಗ್ಗೆ ಈಗ ಮೋಹನ್ ಲಾಲ್ ಪ್ರತಿಕ್ರಿಯೆ ನೀಡಿದ್ದಾರೆ. ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮೋಹನ್ ಲಾಲ್ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. 'ಒಟಿಟಿ ವೇದಿಕೆ ಜಾಗತಿಕ ಮಟ್ಟದ ಪ್ರೇಕ್ಷಕರನ್ನು ಒದಗಿಸುತ್ತದೆ. ಕಲಾವಿದನ ಕಠಿಣ ಶ್ರಮವನ್ನು ಅನೇಕ ಜನರಿಗೆ ತಲುಪಿಸಲು ಸಹಾಯ ಮಾಡುತ್ತದೆ. ತುಂಬಾ ವಿಸ್ತಾರವಾಗಿದೆ. ದೃಶ್ಯಂ-2 ನಂತಹ ಪ್ರಾದೇಶಿಕ ಸಿನಿಮಾ ಈ ಒಂದು ವೇದಿಕೆಯಿಂದ ವಿಶ್ವಾದ್ಯಂತ ಜನರಿಗೆ ತಲುಪುತ್ತದೆ' ಎಂದಿದ್ದಾರೆ.

    'ದೃಶ್ಯಂ 2' ಸಿನಿಮಾಕ್ಕೆ ಆದ ಖರ್ಚೆಷ್ಟು, ಗಳಿಸಿದ ಲಾಭ ಎಷ್ಟು?'ದೃಶ್ಯಂ 2' ಸಿನಿಮಾಕ್ಕೆ ಆದ ಖರ್ಚೆಷ್ಟು, ಗಳಿಸಿದ ಲಾಭ ಎಷ್ಟು?

    ಸಿನಿಮಾ ಮಾಡುವುದು ಪ್ರೇಕ್ಷಕರಿಗಾಗಿ

    ಸಿನಿಮಾ ಮಾಡುವುದು ಪ್ರೇಕ್ಷಕರಿಗಾಗಿ

    'ಒಟಿಟಿಯಿಂದ ಹೆಚ್ಚಿನ ಪ್ರೇಕ್ಷಕರನ್ನು ತಲುಪಲು ನಮಗೆ ಸಹಾಯವಾಯಿತು. ಪ್ರಪಂಚದಾದ್ಯಂತ ಸಿನಿಮಾ ಪ್ರಿಯರು ಯಾವಾಗಲೂ ಒಳ್ಳೆಯ ಕೆಲಸವನ್ನು ಮೆಚ್ಚಿಕೊಳ್ಳುತ್ತಾರೆ ಎಂಬುದಕ್ಕೆ ಈ ಯಶಸ್ಸು ಸಾಕ್ಷಿಯಾಗಿದೆ' ಎಂದು ಮೋಹನ್ ಲಾಲ್ ಹೇಳಿದ್ದಾರೆ. ಇನ್ನು ಮಾತು ಮುಂದುವರೆಸಿ 'ಸಿನಿಮಾ ಮಾಡುವುದು ಪ್ರೇಕ್ಷಕರಿಗಾಗಿ. ಅವರಿಗೆ ತಲುಪಿಸಲು ಸಾಧ್ಯವಿರುವ ಎಲ್ಲಾ ಮಾಧ್ಯಮವನ್ನು ತೆಗೆದುಕೊಳ್ಳಲಾಗುತ್ತೆ' ಎಂದರು.

    Recommended Video

    ದೃಶ್ಯಂ 2 ಸಿನಿಮಾ ಮೆಚ್ಚಿಕೊಂಡ ಕ್ರಿಕೆಟರ್ R ಅಶ್ವಿನ್ | Filmibeat Kannada
    ಪ್ರೇಕ್ಷಕನೇ ಕಿಂಗ್ ಇಲ್ಲಿ

    ಪ್ರೇಕ್ಷಕನೇ ಕಿಂಗ್ ಇಲ್ಲಿ

    'ಯಾವುದೇ ಸಿನಿಮಾ ಅಂತ ಬಂದಾಗ ಪ್ರೇಕ್ಷಕರೇ ರಾಜರು. ಅಂತಹ ಉತ್ತಮ ಸಿನಿಮಾಗಳನ್ನು ನಾವು ಅವರಿಗೆ ನೀಡುತ್ತೇವೆ. ಆದ್ದರಿಂದ ನಾವು ನೀಡುತ್ತೇವೋ ಅದನ್ನು ಅವರು ಇಷ್ಟಪಡುವುದು ಮುಖ್ಯ' ಎಂದು ಹೇಳಿದ್ದಾರೆ.

    English summary
    Malayalam Actress Mohanlal reaction about criticism over drishyam-2.
    Saturday, March 6, 2021, 12:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X