ವಿದೇಶದಲ್ಲಿ ಸಿಲುಕಿಕೊಂಡಿರುವ ಖ್ಯಾತ ನಟ ಕೊನೆಗೂ ವಾಪಸ್ ಬರಲಿದ್ದಾರೆ

ಶೂಟಿಂಗ್‌ ಗೆಂದು ವಿದೇಶಕ್ಕೆ ತೆರಳಿದ್ದ ಮಲೆಯಾಳಂ ಖ್ಯಾತ ನಟ ಕೊನೆಗೂ ಭಾರತಕ್ಕೆ ವಾಪಸ್ಸಾಗುತ್ತಿದ್ದಾರೆ. ಅವರೊಂದಿಗೆ ಚಿತ್ರೀಕರಣ ತಂಡವೂ ವಾಪಸ್ ಬರಲಿದೆ.

Recommended Video

Shwetha srivatsav playing with her cute daughter.

ಮಲೆಯಾಳಂ ಖ್ಯಾತ ನಟ ಫೃಥ್ವಿರಾಜ್ ಸುಕುಮಾರನ್ ಸಿನಿಮಾದ ಚಿತ್ರೀಕರಣಕ್ಕೆಂದು ಆಫ್ರಿಕಾದ ಜೋರ್ಡನ್‌ ಗೆ ತೆರಳಿದ್ದರು. ಆಗಲೇ ಕೊರೊನಾ ವಕ್ಕರಿಸಿದ ಕಾರಣ ಎರಡು ತಿಂಗಳಿಗೂ ಹೆಚ್ಚು ಕಾಲ ಅವರು ಅಲ್ಲಿಯೇ ಸಿಲುಕಿಕೊಂಡಿದ್ದಾರೆ.

ಫೃಥ್ವಿರಾಜ್ ಸುಕುಮಾರನ್ ಮತ್ತು ನಿರ್ದೇಶಕ ಬ್ಲೆಸ್ಸಿ ಹಾಗೂ 58 ಮಂದಿ ಜೋರ್ಡನ್‌ನಲ್ಲಿ ಸಿಲುಕಿದ್ದಾರೆ. ಆದರೆ ಕೊನೆಗೂ ಅವರು ಭಾರತಕ್ಕೆ ಹಿಂದಿರುಗುವ ಅವಕಾಶ ಒದಗಿ ಬಂದಿದೆ.

ಶುಕ್ರವಾರ ಭಾರತಕ್ಕೆ ಬರಲಿದ್ದಾರೆ

ಶುಕ್ರವಾರ ಭಾರತಕ್ಕೆ ಬರಲಿದ್ದಾರೆ

ಪೃಥ್ವಿರಾಜ್ ಸುಕುಮಾರನ್ ಹಾಗೂ ಚಿತ್ರತಂಡವು ಶುಕ್ರವಾರ ಭಾರತಕ್ಕೆ ವಾಪಸ್ ಬರಲಿದ್ದಾರೆ. ಏರ್ ಇಂಡಿಯಾ ಫ್ಲೈಟ್ ಮುಖಾಂತರ ಅವರು ದೆಹಲಿಗೆ ಬಂದು, ಅಲ್ಲಿಂದ ವಿಶೇಷ ವಿಮಾನದಲ್ಲಿ ಕೊಚ್ಚಿ ಗೆ ತಲುಪಲಿದ್ದಾರೆ.

ಮಾರ್ಚ್‌ನಲ್ಲಿ ಜೋರ್ಡನ್‌ ಗೆ ತೆರಳಿದ್ದರು

ಮಾರ್ಚ್‌ನಲ್ಲಿ ಜೋರ್ಡನ್‌ ಗೆ ತೆರಳಿದ್ದರು

ಮಾರ್ಚ್‌ ನಲ್ಲಿ ಪೃಥ್ವಿರಾಜ್ ಸುಕುಮಾರನ್ ಮತ್ತು ಚಿತ್ರತಂಡ ಜೋರ್ಡನ್‌ ಗೆ ತೆರಳಿದ್ದರು. ಅವರು ಅಲ್ಲಿ ತಲುಪಿದ ಕೆಲವೇ ದಿನಕ್ಕೆ ಅಂತರಾಷ್ಟ್ರೀಯ ವಿಮಾನಗಳನ್ನು ಬಂದ್ ಮಾಡಲಾಯಿತು. ಹಾಗಾಗಿ ಚಿತ್ರತಂಡ ಚಿತ್ರೀಕರಣ ಮಾಡಿಕೊಂಡು ಅಲ್ಲಿಯೇ ಉಳಿದು ಬಿಟ್ಟರು.

ವಾಪಸ್ ಕರೆದೊಯ್ಯಿರಿ ಎಂದು ಪೃಥ್ವಿರಾಜ್ ಮನವಿ

ವಾಪಸ್ ಕರೆದೊಯ್ಯಿರಿ ಎಂದು ಪೃಥ್ವಿರಾಜ್ ಮನವಿ

ಜೋರ್ಡನ್ ನಲ್ಲಿ ತಮ್ಮ ತಂಡ ಸಾಕಷ್ಟು ಕಷ್ಟಗಳನ್ನು ಅನುಭವಿಸುತ್ತಿರುವುದಾಗಿ ಫೃಥ್ವಿರಾಜ್ ಸುಕುಮಾರನ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ತಮ್ಮ ತಂಡವನ್ನು ಆದಷ್ಟು ಶೀಘ್ರವಾಗಿ ಇಲ್ಲಿಂದ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಿ ಎಂದು ಅವರು ಕೇಳಿಕೊಂಡಿದ್ದರು.

ಕೇಂದ್ರಕ್ಕೆ ಕೇರಳ ಸರ್ಕಾರ ಮನವಿ ಮಾಡಿತ್ತು

ಕೇಂದ್ರಕ್ಕೆ ಕೇರಳ ಸರ್ಕಾರ ಮನವಿ ಮಾಡಿತ್ತು

ಫೃಥ್ವಿರಾಜ್ ಮತ್ತು ಚಿತ್ರತಂಡವನ್ನು ವಾಪಸ್ ಕರೆತರುವಂತೆ ಕೇರಳ ಸರ್ಕಾರವು ಕೇಂದ್ರಕ್ಕೆ ಮನವಿ ಮಾಡಿತ್ತು, ಅಂತೆಯೇ ಕೇಂದ್ರವೂ ಸಹ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಏರ್‌ಲಿಫ್ಟ್ ಮಾಡುವ ಕಾರ್ಯ ಮಾಡುತ್ತಿದೆ. ಇದರ ಭಾಗವಾಗಿಯೇ ವಿಶೇಷ ವಿಮಾನದಲ್ಲಿ ಪೃಥ್ವಿರಾಜ್ ಮತ್ತು ತಂಡ ಈಗ ವಾಪಸ್ ಬರುತ್ತಿದೆ.

More from Filmibeat

English summary
Malayalam famous actor Prithviraj Sukumaran and is team stuck in Jordan from past two months. They are finally coming back to India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X