For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್-2'ಗೆ ಸಾಥ್ ನೀಡಿದ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್

  |

  ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-2 ಸಿನಿಮಾದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ದಿನದಿಂದ ದಿನಕ್ಕೆ ಕೆಜಿಎಫ್-2 ಕುತೂಹಲ ಹೆಚ್ಚಿಸುತ್ತಲೇ ಇದೆ. ರಾಕಿ ಭಾಯ್ ಮತ್ತು ಅಧೀರ ನಡುವಿನ ಕಾಳಗ ನೋಡಲು ಇಡೀ ಭಾರತೀಯ ಸಿನಿಮಾರಂಗ ಉಸಿರು ಬಿಗಿ ಹಿಡಿದು ಕಾಯುತ್ತಿದೆ.

  ಕೇರಳದಲ್ಲಿ KGF 2 ಗೆ ಸಾಥ್ ನೀಡಿದ ಮಲೆಯಾಳಂ ಸೂಪರ್ ಸ್ಟಾರ್ | Filmibeat Kannada

  ಸದ್ಯ ಅಭಿಮಾನಿಗಳು ಕೆಜಿಎಫ್-2 ಟೀಸರ್ ಗಾಗಿ ಕಾಯುತ್ತಿದ್ದಾರೆ. ಈ ನಡುವೆ ಸಿನಿಮಾದ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿಯೊಂದು ಬಹಿರಂಗವಾಗಿದೆ. ಹೌದು, ಕೆಜಿಎಫ್-2 ಮಲಯಾಳಂ ವರ್ಷನ್ ಗೆ ಮಲಯಾಳಂನ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ ಸಾಥ್ ನೀಡಿದ್ದಾರೆ.

  ಕೆಜಿಎಫ್-2 ಸಿನಿಮಾದ ಮಲಯಾಳಂ ವರ್ಷನ್ ಅನ್ನು ಪೃಥ್ವಿರಾಜ್ ಸುಕುಮಾರನ್ ರಿಲೀಸ್ ಮಾಡುತ್ತಿದ್ದಾರೆ. ಪೃಥ್ವಿರಾಜ್ ಅವರ 'ಪೃಥ್ವಿರಾಜ್ ಪ್ರೊಡಕ್ಷನ್' ನಲ್ಲಿ ಅರ್ಪಿಸಲಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸುಕುಮಾರನ್, ಕೆಜಿಎಫ್ ಫ್ರಾಂಚೈಸಿಯ ದೊಡ್ಡ ಅಭಿಮಾನಿ ಎಂದು ಹೇಳಿದ್ದಾರೆ.

  ಕೆಜಿಎಫ್ ಚಾಪ್ಟರ್-2 ಚಿತ್ರದಲ್ಲಿ ತೆಲುಗು ನಟ ಬಾಲಕೃಷ್ಣ?

  'ನಾನು ಕೆಜಿಎಫ್ ಫ್ರಾಂಚೈಸಿಯ ದೊಡ್ಡ ಅಭಿಮಾನಿ. ಲೂಸಿಫರ್ ಸಿನಿಮಾ ಮಾಡಿದ ಬಳಿಕ ನನ್ನ ಮೊದಲು ಸಂಪರ್ಕಿಸಿ, ಮಾತನಾಡಿದವರಲ್ಲಿ ಹೊಂಬಾಳೆ ಫಿಲ್ಮ್ಸ್ ಮೊದಲಿಗರು. ನಮ್ಮ ದೇಶದ ಬಹುನಿರೀಕ್ಷೆಯ ಸಿನಿಮಾವೊಂದನ್ನು ಅರ್ಪಿಸುವುದಕ್ಕಿಂತ ಉತ್ತಮವಾದ ಆರಂಭ ಇನ್ನೊಂದಿಲ್ಲ. ಪೃಥ್ವಿರಾಜ್ ಪ್ರೊಡಕ್ಷನ್ ಬಹಳ ಹೆಮ್ಮೆಯಿಂದ ಈ ಸಿನಿಮಾವನ್ನು ಅರ್ಪಿಸುತ್ತದೆ. ಲಕ್ಷಾಂತರ ಜನರಂತೆ ರಾಕಿಯ ಕಥೆಯನ್ನು ನೋಡಲು ಕಾಯುತ್ತಿದ್ದೇನೆ' ಎಂದು ಬರೆದುಕೊಂಡಿದ್ದಾರೆ.

  ಸುಕುಮಾರ್ ಗೆ ನಿರ್ದೇಶಕ ಪ್ರಶಾಂತ್ ನೀಲ್ ಧನ್ಯವಾದ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಶಾಂತ್ ನೀಲ್, 'ಧನ್ಯವಾದಗಳು ಪೃಥ್ವಿರಾಜ್ ಸುಕುಮಾರನ್. ನಿಮ್ಮೊಂದಿಗಿನ ಅಸೋಸಿಯೇಷನ್ ತುಂಬಾ ಥ್ರಿಲ್ ನೀಡಿದೆ. ಶೀಘ್ರದಲ್ಲೇ ಭೇಟಿಯಾಗೋಣ' ಎಂದಿದ್ದಾರೆ.

  ಕೆಜಿಎಫ್-2 ಸಿನಿಮಾ ಬಿರುಸಿನ ಪ್ರಚಾರ ನಡೆಯುತ್ತಿದೆ. ವಿಭಿನ್ನವಾಗಿ ಪ್ರಚಾರ ಮಾಡುತ್ತಿರುವ ಸಿನಿಮಾತಂಡ, ಹಳೆಯ ಸುದ್ದಿ ಪತ್ರಿಕೆ ರೀತಿಯ ಪೋಸ್ಟರ್ ರಿಲೀಸ್ ಮಾಡಿ ಹೆಚ್ಚು ಗಮನ ಸೆಳೆಯುತ್ತಿದೆ. ರಾಕಿ ಭಾಯ್ ನಾಯಕನೋ ಅಥವಾ ಖಳನಾಕನೋ ಎಂಬ ಹೆಡ್ ಲೈನ್ ನೊಂದಿಗೆ ವಿಶೇಷ ವರದಿ ಪ್ರಕಟ ಆಗಿದೆ. ಸದ್ಯ ಅಭಿಮಾನಿಗಳ ಚಿತ್ತ ಜನವರಿ 8ರಂದು ರಿಲೀಸ್ ಆಗುತ್ತಿರುವ ಟೀಸರ್ ಮೇಲಿದೆ.

  English summary
  Malayalam Actor Prithviraj Sukumaran Associate with yash's KGF-2.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X