'ಕೋಲ್ಡ್ ಕೇಸ್' ಚಿತ್ರೀಕರಣ ಆರಂಭಿಸಿದ ಪೃಥ್ವಿರಾಜ್ ಸುಕುಮಾರನ್
ಕೊರೊನಾ ವೈರಸ್‌ಗೆ ತುತ್ತಾಗಿದ್ದ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಈಗ ಮತ್ತೆ ಚಿತ್ರೀಕರಣಕ್ಕೆ ಮರಳಿದ್ದಾರೆ. ಸೋಂಕಿನಿಂದ ಗುಣಮುಖರಾದ ಒಂದು ವಾರದ ಬಳಿಕ ಶೂಟಿಂಗ್ ಆರಂಭಿಸಿದ್ದಾರೆ.
ಇಂದಿನಿಂದ ಕೋಲ್ಡ್ ಕೇಸ್ ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಿರುವ ಪೃಥ್ವಿರಾಜ್ ಕೆಲವು ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಕೆಲಸ ಶುರು ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಕೋಲ್ಡ್ ಕೇಸ್ ಚಿತ್ರೀಕರಣ ತಿರುವನಂತಪುರಂದಲ್ಲಿ ನಡೆಯುತ್ತಿದೆ. ಕೆಲವೇ ಕೆಲವು ಮಂದಿಯನ್ನು ಶೂಟಿಂಗ್‌ಗೆ ಬಳಸಿಕೊಳ್ಳಲಾಗಿದೆ.
ಈ ಚಿತ್ರವನ್ನು ತನು ಬಾಲಕ್ ನಿರ್ದೇಶಿಸುತ್ತಿದ್ದಾರೆ. ಇದು ಕ್ರೈಂ ಸಸ್ಪೆನ್ಸ್ ಕಥೆಯಾಗಿದ್ದು, ಪೊಲೀಸ್ ಆಫೀಸರ್ ಪಾತ್ರದಲ್ಲಿ ಪೃಥ್ವಿರಾಜ್ ನಟಿಸುತ್ತಿದ್ದಾರೆ. ಅದಿತಿ ಬಾಲನ್ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಕೋಲ್ಡ್ ಕೇಸ್ ಸಿನಿಮಾ ನೈಜ ಘಟನೆಯಾಧರಿತ ಚಿತ್ರವಾಗಿದೆ. ಪ್ರಮುಖ ದೃಶ್ಯಗಳನ್ನು ಒಳಾಂಗಣದಲ್ಲಿ ಸೆಟ್ ಹಾಕಿ ಶೂಟ್ ಮಾಡಲಾಗುತ್ತದೆ. ಆಂಟೋ ಜೋಸೆಫ್, ಜೋಮೊನ್ ಜಾನ್ ಹಾಗೂ ಶಮೀರ್ ಮೊಹಮ್ಮದ್ ಈ ಚಿತ್ರ ನಿರ್ಮಿಸುತ್ತಿದ್ದಾರೆ.
ಅಕ್ಟೋಬರ್ 20 ರಂದು ಪೃಥ್ವಿರಾಜ್ ಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿತ್ತು. ಜನ ಗಣ ಮನ ಸೆಟ್‌ನಲ್ಲಿ ಪರೀಕ್ಷೆ ಮಾಡಿದಾಗ ಸೋಂಕು ಪತ್ತೆಯಾಗಿದೆ. ಕೂಡಲೇ ಚಿತ್ರೀಕರಣ ನಿಲ್ಲಿಸಿ ಪೃಥ್ವಿರಾಜ್ ಸೇರಿದಂತೆ ತಂಡದ ಕೆಲವು ಸದಸ್ಯರು ಹೋಮ್ ಕ್ವಾರಂಟೈನ್ ಆಗಿದ್ದರು.


Click it and Unblock the Notifications











