For Quick Alerts
  ALLOW NOTIFICATIONS  
  For Daily Alerts

  ಕೊರೊನಾದಿಂದ ಚೇತರಿಕೆ ಕಂಡ ನಟ ಪೃಥ್ವಿರಾಜ್ ಸುಕುಮಾರನ್‌

  |

  ಮಲಯಾಳಂ ಪ್ರತಿಭಾನ್ವಿತ ನಟ ಪೃಥ್ವಿರಾಜ್ ಸುಕುಮಾರನ್‌ ಕೊರೊನಾ ವೈರಸ್‌ನಿಂದ ಚೇತರಿಕೆ ಕಂಡಿದ್ದಾರೆ. ಕೊರೊನಾ ಪಾಸಿಟಿವ್‌ಗೆ ತುತ್ತಾಗಿದ್ದ ನಟ ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ತಿಳಿದಿದೆ.

  ಕಳೆದ ವಾರ 'ಜನಗಣಮನ' ಸಿನಿಮಾ ಚಿತ್ರೀಕರಣ ವೇಳೆ ಪೃಥ್ವಿರಾಜ್ ಅವರಿಗೆ ಕೊರೊನಾ ವೈರಸ್‌ ತಗುಲಿರುವುದು ಪತ್ತೆಯಾಗಿತ್ತು. ನಂತರ ಕ್ವಾರಂಟೈನ್‌ಗೆ ಒಳಗಾಗಿದ್ದರು. ಇದೀಗ, ಮಂಗಳವಾರ (ಅಕ್ಟೋಬರ್ 27) ಮಾಡಿದ ಪರೀಕ್ಷೆಯಲ್ಲಿ ಸೋಂಕು ನೆಗಿಟಿವ್ ಬಂದಿದೆ.

  ಹೃತಿಕ್ ರೋಷನ್ ತಾಯಿ ಪಿಂಕಿ ರೋಷನ್‌ಗೆ ಕೊರೊನಾ ಪಾಸಿಟಿವ್ಹೃತಿಕ್ ರೋಷನ್ ತಾಯಿ ಪಿಂಕಿ ರೋಷನ್‌ಗೆ ಕೊರೊನಾ ಪಾಸಿಟಿವ್

  ಈ ಕುರಿತು ಮಾಹಿತಿ ನೀಡಿರುವ ನಟ ''ಆಂಟಿಜನ್ ಪರೀಕ್ಷೆಯಲ್ಲಿ ಕೊರೊನಾ ನೆಗಿಟಿವ್ ಬಂದಿದೆ. ಆದರೂ ವೈದ್ಯರ ಸಲಹೆ ಮೆರೆಗೆ ಇನ್ನೂ ಒಂದು ವಾರಗಳ ಕಾಲ ಕ್ವಾರಂಟೈನ್‌ನಲ್ಲಿಯೇ ಇರಲಿದ್ದೇನೆ. ನನ್ನ ಬಗ್ಗೆ ಕಾಳಜಿ ತೋರಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ನೆಗಿಟಿವ್ ಪ್ರಮಾಣ ಪತ್ರ ಸಹ ಹಂಚಿಕೊಂಡಿದ್ದಾರೆ.

  ಅಕ್ಟೋಬರ್ 20 ರಂದು ಸೋಂಕು ಪತ್ತೆ

  ಪೃಥ್ವಿರಾಜ್ ಸುಕುಮಾರನ್‌ಗೆ ಡಿಜೋ ಜೋಸ್ ನಿರ್ದೇಶನದ 'ಜನಗಣಮನ' ಸಿನಿಮಾ ಶೂಟಿಂಗ್ ಮಾಡಬೇಕಾದರೆ ಸೋಂಕು ದೃಢಪಟ್ಟಿತ್ತು. ಡಿಜೋ ಜೋಸ್ ಅವರಿಗೂ ಕೊರೊನಾ ಸೋಂಕು ತಗುಲಿತ್ತು. ಪೃಥ್ವಿರಾಜ್ ಅವರಿಗೆ ರೋಗಲಕ್ಷಣಗಳು ಇರಲಿಲ್ಲ, ಆದರೂ ಪರೀಕ್ಷೆ ವೇಳೆ ಸೋಂಕು ಪತ್ತೆಯಾಗಿತ್ತು.

  ಮುನಿರತ್ನ ಬೆಂಬಲಕ್ಕೆ ಅಣ್ಣ ದರ್ಶನ್ ಜೊತೆಗೆ ಬಂದ ಅಮೂಲ್ಯ | Darshan | Amulya | Munirathna

  ಕೊರೊನಾ ಲಾಕ್‌ಡೌನ್ ಮಧ್ಯೆ ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ 'ಆದುಜೀವಿಥಮ್' ಚಿತ್ರತಂಡ ಜೋರ್ಡಾನ್‌ನಲ್ಲಿ ಸಿಲುಕಿಕೊಂಡಿತು. ನಂತರ ವಂದೇ ಭಾರತ್ ಕಾರ್ಯಾಚರಣೆಯಡಿ ವಿಶೇಷ ವಿಮಾನದಲ್ಲಿ ಭಾರತಕ್ಕೆ ಮರಳಿತ್ತು. ಈ ವೇಳೆ ಪೃಥ್ವಿರಾಜ್ ಅವರಿಗೆ ಕೊರೊನಾ ನೆಗಿಟಿವ್ ಇತ್ತು.

  English summary
  Malayalam Actor Prithviraj Sukumaran Tests Negative For COVID-19.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X