ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್‌ಗೆ ಕೊರೊನಾ ಪಾಸಿಟಿವ್
ಮಲಯಾಳಂ ಯುವ ನಟ ಪೃಥ್ವಿರಾಜ್ ಸುಕುಮಾರನ್‌ಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಪೃಥ್ವಿರಾಜ್ ಸುಕುಮಾರನ್‌ಗೆ ತಮ್ಮ ಮುಂದಿನ ಸಿನಿಮಾದ ಚಿತ್ರೀಕರಣ ಮಾಡುತ್ತಿರುವ ಸಂದರ್ಭದಲ್ಲಿ ಸೋಂಕು ತಗುಲಿರುವುದು ಪತ್ತೆಯಾಗಿದೆ. ಡಿಜೋ ಜೋಸ್ ನಿರ್ದೇಶನದ 'ಜನಗಣಮನ' ಸಿನಿಮಾ ಶೂಟಿಂಗ್ ಮಾಡಬೇಕಾದರೆ ಸೋಂಕು ದೃಢಪಟ್ಟಿದೆ ಎಂದು ತಿಳಿದಿದೆ.
'ಜನಗಣಮನ' ಚಿತ್ರದ ನಿರ್ದೇಶಕ ಡಿಜೋ ಜೋಸ್ ಅವರಿಗೂ ಕೊರೊನಾ ಸೋಂಕು ತಗುಲಿದೆ. ಪೃಥ್ವಿರಾಜ್ ಅವರಿಗೆ ರೋಗಲಕ್ಷಣಗಳು ಇರಲಿಲ್ಲ, ಆದರೂ ಪರೀಕ್ಷೆ ವೇಳೆ ಸೋಂಕು ಪತ್ತೆಯಾಗಿದೆ.

ನಟ ಮತ್ತು ನಿರ್ದೇಶಕರಿಗೆ ಕೊರೊನಾ ಪಾಸಿಟಿವ್ ಆದ ಹಿನ್ನೆಲೆ ಚಿತ್ರೀಕರಣ ಸ್ಥಗಿತಗೊಳಿಸಿರುವ ನಿರ್ಮಾಪಕರು, ಇಡೀ ಚಿತ್ರತಂಡವನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.
ಇನ್ನು ಇತ್ತೀಚಿಗಷ್ಟೆ ಕೇರಳ ರಾಜ್ಯ ಪ್ರಶಸ್ತಿ ಪಡೆದ ಸೂರಜ್ ವೆಂಜರನ್ಮೂಡು ಸಹ ಈ ಚಿತ್ರದಲ್ಲಿ ನಟಿಸುತ್ತಿದ್ದು, ಅವರನ್ನು ಕ್ವಾರಂಟೈನ್‌ಗೆ ಒಳಪಟ್ಟಿದ್ದಾರೆ ಎಂದು ವರದಿಯಾಗಿದೆ.
ಕೊರೊನಾ ಲಾಕ್‌ಡೌನ್ ಮಧ್ಯೆ ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ 'ಆದುಜೀವಿಥಮ್' ಚಿತ್ರತಂಡ ಜೋರ್ಡಾನ್‌ನಲ್ಲಿ ಸಿಲುಕಿಕೊಂಡಿತು. ನಂತರ ವಂದೇ ಭಾರತ್ ಕಾರ್ಯಾಚರಣೆಯಡಿ ವಿಶೇಷ ವಿಮಾನದಲ್ಲಿ ಭಾರತಕ್ಕೆ ಮರಳಿತ್ತು. ಈ ವೇಳೆ ಪೃಥ್ವಿರಾಜ್ ಅವರಿಗೆ ಕೊರೊನಾ ನೆಗಿಟಿವ್ ಇತ್ತು.


Click it and Unblock the Notifications











