ನಿರೂಪಕಿಗೆ ಅವಾಚ್ಯ ಪದಗಳಿಂದ ನಿಂದನೆ: ಮಲಯಾಳಂ ನಟ ಶ್ರೀನಾಥ್ ಭಾಸಿ ಬಂಧನ!

ಮಲಯಾಳಂ ಯುವ ನಟ ಶ್ರೀನಾಥ್ ಭಾಸಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. 'ಕಪ್ಪೆಲ', 'ಭೀಷ್ಮ ಪರ್ವಂ', 'ಟ್ರಾನ್ಸ್', 'ಅಂಜಮ್ ಪಾತಿರ', 'ಹೋಂ' ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. ಗಾಯಕರಾಗಿಯೂ ಗುರ್ತಿಸಿಕೊಂಡಿದ್ದಾರೆ. ಸದ್ಯ 'ಚಟ್ಟಂಬಿ' ಎನ್ನುವ ಚಿತ್ರದಲ್ಲಿ ನಟಿಸಿದ್ದು, ಪ್ರಮೋಷನ್ ವೇಳೆ ಯೂಟ್ಯೂಬ್‌ ಚಾನಲ್‌ ಸಂದರ್ಶನಕ್ಕೆ ಹೋಗಿದ್ದರು. ಈ ವೇಳೆ ನಿರೂಪಕಿ ಕೇಳಿದ ಪ್ರಶ್ನೆಗಳಿಗೆ ಕೋಪಗೊಂಡು ಕೂಗಾಡಿ ಅವಾಚ್ಯ ಪದಗಳಿಂದ ಆಕೆಯನ್ನು ನಿಂದಿಸಿದ್ದಾರೆ. ಪರಿಣಾಮ ಮಹಿಳೆಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ನಟ ಶ್ರೀನಾಥ್ ಭಾಸಿ ಬಂಧನವಾಗಿದೆ.

ನಿರೂಪಕಿಯನ್ನು ನಟ ಶ್ರೀನಾಥ್ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು, ಅದನ್ನು ಆಕೆ ರೆಕಾರ್ಡ್ ಮಾಡಿಕೊಂಡು ಪೊಲೀಸರಿಗೆ ನೀಡಿದ್ದಾರೆ. ಸೆಕ್ಷನ್ 509, 354ಎ, 294ಬಿ ಅಡಿಯಲ್ಲಿ ದೂರು ದಾಖಲಾಗಿದೆ. ಆದರೆ ಪೊಲೀಸರು ತಮ್ಮನ್ನು ಬಂಧಿಸಿರುವುದನ್ನು ನಟ ಶ್ರೀನಾಥ್ ಖಂಡಿಸಿದ್ದಾರೆ. ಆಕೆ ನನ್ನನ್ನು ಕೆರಳಿಸುವಂತೆ ಪ್ರಶ್ನೆಗಳನ್ನು ಕೇಳಿದ್ದಳು. ಅದಕ್ಕೆ ತಾನು ಕೋಪಗೊಂಡಿದ್ದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲದೇ ಸಂದರ್ಶನದಲ್ಲಿ ಏನೇನೋ ಸಿಲ್ಲಿ ಸಿಲ್ಲಿ ಪ್ರಶ್ನೆಗಳನ್ನು ಕೇಳಿದ್ದಾಳೆ ಎಂದು ಪೊಲೀಸರ ಮುಂದೆ ತಿಳಿಸಿದ್ದಾರೆ. ಶುಕ್ರವಾರವಷ್ಟೆ ಶ್ರೀನಾಥ್ ಭಾಸಿ ನಟನೆಯ 'ಚಟ್ಟಂಬಿ' ಸಿನಿಮಾ ಬಿಡುಗಡೆಯಾಗಿದೆ.

Malayalam Actor Sreenath Bhasi Arrested For Allegedly insulting and Abusing Woman Anchor

"ನನ್ನ ಹೆಸರಿಗೆ ಮಸಿ ಬಳಿಯಬೇಕು ಎನ್ನು ಕಾರಣಕ್ಕೆ ಆ ನಿರೂಪಕಿ ಆಡಿಯೋ ಕ್ಲಿಪ್ ಅನ್ನು ತನಗೆ ಬೇಕಾದಂತೆ ಬದಲಾಯಿಸಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾಳೆ" ಎಂದು ಆರೋಪಿಸಿದ್ದಾರೆ. ಆದರೆ ನಿರೂಪಕಿ "ಶ್ರೀನಾಥ್ ನನ್ನನ್ನು ಅವಮಾನಿಸುವಂತೆ ಮಾತನಾಡಿದ್ದಾರೆ. ಕೆಟ್ಟ ಕೆಟ್ಟ ಪದಗಳಿಂದ ನಿಂದಿಸಿದ್ದಾರೆ, ನಾನು ಸ್ಕ್ರಿಪ್ಟ್‌ನಲ್ಲಿ ಇದ್ದ ಪ್ರಶ್ನೆಗಳನ್ನೇ ಕೇಳಿದ್ದೇನೆ. ಸಿನಿಮಾಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುವಂತೆ ಕೇಳಿದ್ದೀನಿ" ಎಂದು ಹೇಳಿದ್ದಾರೆ.

Malayalam Actor Sreenath Bhasi Arrested For Allegedly insulting and Abusing Woman Anchor

ಸದ್ಯ ನಟ ಶ್ರೀನಾಥ್ ಭಾಸಿ ಬಂಧನ ವಿಚಾರ ಟಾಲಿವುಡ್‌ನಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ. ಇದನ್ನು ಕೇಳಿದವರು ಈತ ಮಾಲಿವುಡ್ ವಿಶ್ವಕ್ ಸೇನ್ ಎಂದು ಹೇಳುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ತೆಲುಗಿನ ಖಾಸಗಿ ಸುದ್ದಿ ವಾಹಿನಿಯ ನಿರೂಪಕಿ ದೇವಿ ಹಾಗೂ ತೆಲುಗಿನ ಯುವ ನಟ ವಿಶ್ವಕ್‌ ಸೇನ್‌ ನಡುವೆ ವಾಹಿನಿ ಸ್ಟುಡಿಯೋದಲ್ಲಿ ಮಾತಿನ ಚಕಮಕಿ ನಡೆದಿತ್ತು. ವಿಶ್ವಕ್‌ ಸೇನ್‌ ಅವರನ್ನು ಪಾಗಲ್‌ ಸೇನ್‌ ಮತ್ತು ಖಿನ್ನತೆಗೆ ಒಳಾಗದವನೆಂದು ನಿರೂಪಕಿ ಹೇಳಿದ್ದರು. ಇದಕ್ಕೆ ಆತ ವಿರೋಧ ವ್ಯಕ್ತಪಡಿಸಿ ಆ ರೀತಿ ಕರೆಬೇಡಿ ಕೂಗಾಡಿದ್ದರು. ಈ ವೇಳೆ ನಟನಿಗೆ "ಗೆಟ್‌ ಔಟ್‌ ಆಫ್‌ ಮೈ ಸ್ಟುಡಿಯೋ" ಎಂದು ಆಂಕರ್‌ ಹೇಳಿದ್ದರು. ಆ ವಿಡಿಯೋ ವೈರಲ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

More from Filmibeat

English summary
Malayalam Actor Sreenath Bhasi Arrested For Allegedly insulting and Abusing Woman Anchor. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X