ನಿರೂಪಕಿಗೆ ಕೆಟ್ಟದಾಗಿ ನಿಂದನೆ; ನಟ ಶ್ರೀನಾಥ್ ಭಾಸಿ ಅರೆಸ್ಟ್

ಮಲಯಾಳಂ ಚಿತ್ರರಂಗದ ಭರವಸೆಯ ನಟ ಶ್ರೀನಾಥ್ ಭಾಸಿ ಅವರನ್ನು ಪೊಲೀಸರು ನಿರೂಪಕಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಹಾಗೂ ಅನುಚಿತವಾಗಿ ವರ್ತಿಸಿದ ಕಾರಣಕ್ಕಾಗಿ ಬಂಧಿಸಿದ್ದಾರೆ.

ತಮ್ಮ ಮುಂದಿನ ಚಿತ್ರ 'ಚಟ್ಟಂಬಿ' ಪ್ರಚಾರ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಶ್ರೀನಾಥ್ ಭಾಸಿ ವಿವಿಧ ಯೂಟ್ಯೂಬ್ ಚಾನೆಲ್‌ಗಳಿಗೆ ಸಂದರ್ಶನ ನೀಡಿದ್ದಾರೆ. ಈ ಸಮಯದಲ್ಲಿ ಖಾಸಗಿ ಯೂಟ್ಯೂಬ್ ಚಾನೆಲ್ ಒಂದರ ನಿರೂಪಕಿ ಕೇಳಿದ ಪ್ರಶ್ನೆಗೆ ಸಿಡಿಮಿಡಿಗೊಂಡ ಶ್ರೀನಾಥ್ ಭಾಸಿ ನಿರೂಪಕಿ ವಿರುದ್ಧ ಕಿಡಿಕಾರಿದ್ದಾರೆ ಹಾಗೂ ನಿರೂಪಕಿ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಮತ್ತು ಕ್ಯಾಮೆರಾ ಆಫ್ ಆದ ಬಳಿಕ ಚಾನೆಲ್ ಸಿಬ್ಬಂದಿ ವರ್ಗದವರ ಜತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಅತ್ತ ಈ ಆರೋಪದ ಕುರಿತು ಪ್ರತಿಕ್ರಿಯಿಸಿರುವ ಶ್ರೀನಾಥ್ ಭಾಸಿ ಇದೆಲ್ಲ ಸುಳ್ಳು ಎಂದು ತಳ್ಳಿಹಾಕಿದ್ದಾರೆ. ಯೂಟ್ಯೂಬ್ ಚಾನೆಲ್ ನಿರೂಪಕಿ ನೀಡಿರುವ ದೂರಿನ ಅಡಿಯಲ್ಲಿ ಈ ಘಟನೆಯ ದೃಶ್ಯಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಶ್ರೀನಾಥ್ ಭಾಸಿ ಅವರನ್ನು ಬಂಧಿಸಿದ್ದಾರೆ.

Malayalam actor Srinath Bhasi arrested for abusing a female YouTube anchor

ಇನ್ನು ಈ ಕುರಿತಾಗಿ ಪ್ರತಿಕ್ರಿಯಿಸಿರುವ ನಿರೂಪಕಿ ನಟ ಶ್ರೀನಾಥ್ ಭಾಸಿ ಎಂಥ ಕೆಟ್ಟ ಪದಗಳನ್ನು ಬಳಸಿದರು ಎಂಬುದನ್ನು ಬಾಯ್ಬಿಟ್ಟು ಹೇಳಲಾಗುವುದಿಲ್ಲ ಎಂದಿದ್ದಾರೆ. ಕ್ಯಾಮೆರಾ ಆಫ್ ಮಾಡಿಸಿದ ಅವರು ಮನಬಂದಂತೆ ನಿಂದಿಸಿದರು ಹಾಗೂ ಅವರು ಕೋಪಗೊಳ್ಳುವಂತಹ ಪ್ರಶ್ನೆಯನ್ನು ನಾನು ಕೇಳಲಿಲ್ಲ ಎಂದು ಇದೇ ವೇಳೆ ನಿರೂಪಕಿ ಹೇಳಿಕೊಂಡಿದ್ದಾರೆ.

ಯಾರು ಈ ಶ್ರೀನಾಥ್ ಭಾಸಿ?

ಶ್ರೀನಾಥ್ ಭಾಸಿ ಮಲಯಾಳಂ ಸಿನಿ ಪ್ರೇಕ್ಷಕರಿಗೆ ಪರಿಚಿತರು. 2011ರಲ್ಲಿ ಪ್ರಣಯಂ ಎಂಬ ಚಿತ್ರದ ಮೂಲಕ ಚಲನಚಿತ್ರರಂಗ ಪ್ರವೇಶಿಸಿದ ಶ್ರೀನಾಥ್ ಭಾಸಿ ಉಸ್ತಾದ್ ಹೋಟೆಲ್, ಹನಿ ಬೀ, ಕುಂಬಳಂಗಿ ನೈಟ್ಸ್, ವೈರಸ್, ಅಂಜಾಮ್ ಪಾತಿರ, ಟ್ರ್ಯಾನ್ಸ್, ಹೋಮ್ ಮತ್ತು ಭೀಷ್ಮಂ ಪರ್ವಮ್ ರೀತಿಯ ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಹಳೆಯ ವಿಡಿಯೋ ವೈರಲ್

ಇನ್ನು ಶ್ರೀನಾಥ್ ಭಾಸಿ ನಿರೂಪಕಿಗೆ ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ಈ ಹಿಂದೆ ಇದೇ ಶ್ರೀನಾಥ್ ಭಾಸಿ ರೇಡಿಯೋ ಜಾಕಿ ಒಬ್ಬರ ವಿರುದ್ಧ ಕಿಡಿಕಾರಿದ್ದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಕಂಡ ವೀಕ್ಷಕರು ನಿರೂಪಕಿ ಮಾಡುತ್ತಿರುವ ಆರೋಪ ನಿಜವಿದ್ದರೂ ಇರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

More from Filmibeat

English summary
Malayalam actor Srinath Bhasi arrested for abusing a female YouTube anchor. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X