ಚಿತ್ರೀಕರಣ ವೇಳೆ ಗಾಯಗೊಂಡ ಮಲಯಾಳಂ ನಟ ಟೋವಿನೋ ಥಾಮಸ್ ಆಸ್ಪತ್ರೆಗೆ ದಾಖಲು: ICU ನಲ್ಲಿ ಚಿಕಿತ್ಸೆ
ಚಿತ್ರೀಕರಣ ವೇಳೆ ಗಾಯಗೊಂಡ ಮಲಯಾಳಂನ ಖ್ಯಾತ ನಟ ಟೋವಿನೋ ಥಾಮಸ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಚ್ಚಿಯ ಖಾಸಗಿ ಆಸ್ಪತ್ರೆಯ ತೀವ್ರ ನಿಗಾಘಟಕದಲ್ಲಿ ಟೋವಿನೋಗೆ ಚಿಕಿತ್ಸೆ ನೀಡಲಾಗುತ್ತಿದೆ. ಹೊಟ್ಟೆನೋವು ತೀವ್ರವಾದ ಕಾರಣ ಟೋವಿನೋ ಅವರನ್ನು ಬುಧವಾರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟೋವಿನೋ, ರೋಹಿತ್ ನಿರ್ದೇಶನದ ಮಲಯಾಳಂನ 'ಕಲಾ' ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದರು. ಚಿತ್ರದ ಹೈ ವೋಲ್ಟೇಜ್ ಆಕ್ಷನ್ ದೃಶ್ಯಗಳನ್ನು ಸೇರೆಹಿಡಿಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಟೋವಿನೋ ಹೊಟ್ಟೆಗೆ ಬಲವಾದ ಏಟು ತಗುಲಿದ್ದು, ಆಂತರಿಕ ಇಂಜುರಿ ಆಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಟೋವಿನೋ ಆರೋಗ್ಯದ ವಿಚಾರವಾಗಿ ಆಸ್ಪತ್ರೆ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಬಿಡುಗಡೆ ಮಾಡಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಆಂತರಿಕ ರಕ್ತಸ್ರಾವವಾಗುತ್ತಿದೆ ಎಂದು ವರದಿಯಾಗಿದೆ. ಟೋವಿನೋ ನೋವಿನ ಬಳಿಕವೂ ಚಿತ್ರೀಕರಣ ಮುಂದುವರೆಸುವ ಪ್ರಯತ್ನ ಮಾಡಿದ್ದಾರೆ. ಆದರೆ ಹೊಟ್ಟೆ ನೋವು ತೀವ್ರವಾದ ಕಾರಣ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

'ಕಲಾ' ಸಿನಿಮಾ ಮನುಷ್ಯ ಮತ್ತು ಸಾಕು ನಾಯಿಯ ನಡುವಿನ ಸಂಬಂಧ ಬಗ್ಗೆ ಇರುವ ಸಿನಿಮಾವಾಗಿದೆ. ಬಾಜಿಗರ್ ಎನ್ನುವ ನಾಯಿ ಚಿತ್ರದಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಚಿತ್ರದಲ್ಲಿ ಮೂವರು ನಟಿಯರು ಕಾಣಿಸಿಕೊಳ್ಳುತ್ತಿದ್ದಾರೆ. ಲಾಲ್, ದಿವ್ಯಾ ಪಿಳೈ ಮತ್ತು ಸುಮೇಶ್ ಮೂರ್ ಮೂವರು ನಟಿಯರು ನಟಿಸುತ್ತಿದ್ದಾರೆ.
ಟೋವಿನೋ 2012ರಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. 'ಪ್ರಭುವಿಂಟೆ ಮಕ್ಕಳ್' ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. 8 ವರ್ಷಗಳ ಸಿನಿಮಾ ಜರ್ನಿಯಲ್ಲಿ ಟೋವಿನೋ 30ಕ್ಕು ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚಿಗೆ ಟೋವಿನೋ ಕನ್ನಡ ಸಿನಿಮಾರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಟೋವಿನೋ ಅಭಿನಯದ 'ಮಿನ್ನಲ್ ಮುರಳಿ' ಸಿನಿಮಾ ಕನ್ನಡದಲ್ಲಿ 'ಮಿಂಚು ಮುರಳಿ' ಹೆಸರಿನಲ್ಲಿ ರಿಲೀಸ್ ಆಗುತ್ತಿದೆ. ಇತ್ತೀಚಿಗೆ ಸಿನಿಮಾದ ಫಸ್ಟ್ ಲುಕ್ ಸಹ ರಿಲೀಸ್ ಆಗಿದೆ.


Click it and Unblock the Notifications











